ಮಂಗಳವಾರ, ಜನವರಿ 28, 2020
18 °C

ಸಿಂಡಿಕೇಟ್ ಬ್ಯಾಂಕ್: ರೂ. 338 ಕೋಟಿ ಲಾಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡಿಸೆಂಬರ್ 31ಕ್ಕೆ ಕೊನೆಗೊಂಡ ಪ್ರಸಕ್ತ ಹಣಕಾಸು ವರ್ಷದ ಮೂರನೇಯ ತ್ರೈಮಾಸಿಕ ಅವಧಿಯಲ್ಲಿ ಸಿಂಡಿಕೇಟ್ ಬ್ಯಾಂಕ್  ರೂ. 338 ಕೋಟಿ ನಿವ್ವಳ ಲಾಭ ದಾಖಲಿಸಿದೆ.



ಕಳೆದ ಮೂರು ತ್ರೈಮಾಸಿಕ ಅವಧಿಗಳಲ್ಲಿ ಬ್ಯಾಂಕಿನ ಒಟ್ಟು ನಿವ್ವಳ ಲಾಭವು  ಶೇ 32ರಷ್ಟು ಹೆಚ್ಚಾಗಿದ್ದು, ್ಙ1,004 ಕೋಟಿಗಳಷ್ಟಾಗಿದೆ. ಈ ಅವಧಿಯಲ್ಲಿ ಬ್ಯಾಂಕಿನ ಕಾರ್ಯನಿರ್ವಹಣಾ ಲಾಭವು ಶೇ 23ರಷ್ಟು ಹೆಚ್ಚಾಗಿದ್ದು, ್ಙ2,556 ಕೋಟಿಗಳಷ್ಟಾಗಿದೆ.



ಕಳೆದ ವರ್ಷಕ್ಕೆ ಹೋಲಿಸಿದರೆ ವಸೂಲಾಗದ ಸಾಲದ ಪ್ರಮಾಣದ (ಎನ್‌ಪಿಎ) ಅನುಪಾತ ಶೇ 0.86ರಷ್ಟು ಕುಸಿದಿದ್ದು, ಶೇ 2.29ರಷ್ಟಾಗಿದೆ  ಎಂದು ಬ್ಯಾಂಕ್ ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)