ಸಿಂದಗಿ: ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಕೆರೆ ಸಂಪೂರ್ಣ ಬತ್ತಿ ಹೋಗಿದ್ದರಿಂದ ಎರಡು ದಿನ ಮಾತ್ರ ನೀರು ಸರಬರಾಜು ಮಾಡುವಷ್ಟು ನೀರು ಉಳಿದಿದೆ. ಮಳೆಯ ಅಭಾವ ಬೇರೆ ಹೀಗಾಗಿ ಮುಂಬರುವ ದಿನಗಳಲ್ಲಿ ನಗರದಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗುವ ಸಾಧ್ಯತೆ ಇದೆ ಎಂದು ಪುರಸಭೆ ಸದಸ್ಯರಾದ ರಾಜಶೇಖರ ಕೂಚಬಾಳ, ಹಣಮಂತ ಸುಣಗಾರ, ಚಂದ್ರಶೇಖರ ಅಮಲಿಹಾಳ ಹಾಗೂ ಬಸವರಾಜ ಯರನಾಳ, ಶಿವಾನಂದ ರೋಡಗಿ ಆತಂಕ ವ್ಯಕ್ತಪಡಿಸಿದರು.

ಸೋಮವಾರ ನಗರದ ಕುಡಿಯುವ ನೀರು ಸರಬರಾಜು ಮಾಡುವ ಕೆರೆಗೆ ಭೇಟಿ ನೀಡಿದ ನಂತರ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ನಗರಾಭಿವೃದ್ಧಿಕೋಶದ ಯೋಜನಾ ನಿರ್ಧೇಶಕ ಹಾಗೂ ಜಿಲ್ಲಾಡಳಿತ ನಗರದ ಕುಡಿಯುವ ನೀರಿನ ಬಗ್ಗೆ ಎಳ್ಳಷ್ಟೂ ಸ್ಪಂದಿಸುತ್ತಿಲ್ಲ. ಪ್ರತಿ ವರ್ಷ ಕುಡಿಯುವ ನೀರಿಗಾಗಿ ಅಗತ್ಯ ಅನುದಾನ ಬಿಡುಗಡೆಗೊಳಿಸುವ ಮೂಲಕ ಕೊಳವೆಬಾವಿ ತೋಡಿಸುವುದು, ಬಾವಿಗಳ ಹೂಳು ಎತ್ತುವುದು, ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವ ಕಾರ್ಯ ನಡೆಯುತ್ತಿತ್ತು. ಆದರೆ ಸದ್ಯದ ಜಿಲ್ಲಾಧಿಕಾರಿಗಳ ಕಾರ್ಯಾಲಯದ ನಗರಾ ಭಿವೃದ್ಧಿಕೋಶ ಯೋಜನಾ ನಿರ್ದೇಶಕ ನಗರದ ಬಗ್ಗೆ ಮಲತಾಯಿ ಧೋರಣೆ ನೀತಿ ಅನುಸರಿಸುತ್ತಿದ್ದಾರೆ ಎಂದು ದೂರಿದರು.

ಜಿಲ್ಲೆಯ ಉಳಿದ ತಾಲ್ಲೂಕುಗಳಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವುದು ಇಲ್ಲಿ ಪುರಸಭೆಗೆ ಮಾತ್ರ ಯಾವುದೇ ಅನುದಾನ ನೀಡುತ್ತಿಲ್ಲ. ಅನುದಾನ ನೀಡುವಲ್ಲಿ ಏಕರೂಪತೆ ಇಲ್ಲದಾಗಿದೆ. ಅಧಿಕಾರಿ ಪೂರ್ವಾಗ್ರಹ ಪೀಡಿತ ರಾಗಿದ್ದಾರೆ ಎಂದು ಆರೋಪಿಸಿದರು.

ಕೆರೆಯಲ್ಲಿನ ಹೂಳೆತ್ತುವದಕ್ಕಾಗಿ ₨25 ಲಕ್ಷ ವೆಚ್ಚದ ಪ್ರಸ್ತಾವನೆ ಸಿದ್ಧಪಡಿಸಲಾಗಿತ್ತು. ಅದು ಪುರಸಭೆ ಮುಖ್ಯಾಧಿಕಾರಿ ಅವಿವೇಕತನದಿಂದಾಗಿ ಅದಕ್ಕೆ ಜಿಲ್ಲಾಡಳಿತ ಮಂಜೂರಾತಿ ನೀಡಲಿಲ್ಲ. ಕೆರೆಯ ಹೂಳು ತೆಗೆದಿದ್ದರೆ ಇನ್ನುಷ್ಟು ನೀರು ಸಂಗ್ರಹಗೊಂಡು ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿರಲಿಲ್ಲ. ಅಲ್ಲದೇ ಪ್ರತಿ ವರ್ಷ ಸಿಂದಗಿ ಪುರಸಭೆಗೆ 3–4 ಕೋಟಿ ಎಸ್.ಎಫ್.ಸಿ ಅನುದಾನ ಬಿಡುಗಡೆಗೊಳ್ಳುತ್ತಿತ್ತು. ಅದರಲ್ಲಿ ಕುಡಿಯುವ ನೀರು ಒಳಗೊಂಡಂತೆ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದವು.

ಆದರೆ ಈಗ ಅನುದಾನದಲ್ಲಿ ಕಡಿತಗೊಳಿಸಿ ಕೇವಲ ₨ 1ಕೋಟಿಯಷ್ಟು ಮಾತ್ರ ಅನುದಾನ ನೀಡಲಾಗಿದೆ. ಇದಕ್ಕಾಗಿ ಯೋಜನಾನಿರ್ಧೇಶಕರ ವಿರುದ್ಧ ಧಿಕ್ಕಾರ ಹಾಕುತ್ತೇವೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಮತಕ್ಷೇತ್ರದ ಶಾಸಕರು ಕೂಡ ಕೂಡಲೇ ಎಚ್ಚೆತ್ತುಕೊಂಡು ಅಧಿವೇಶನದಲ್ಲಿ ಈ ಬಗ್ಗೆ ಪ್ರಶ್ನೆ ಎತ್ತಬೇಕು. 50 ಸಾವಿರ ಜನಸಂಖ್ಯೆ ಹೊಂದಿರುವ ನಗರಕ್ಕೆ ವಾರಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲು ಸಾಧ್ಯವಿಲ್ಲದ ದುಃಸ್ಥಿತಿ ನಿರ್ಮಾಣವಾಗಿದೆ. ಯೋಜನಾ ನಿರ್ದೇಶಕರು ಇದೇ ಧೋರಣೆ ತೋರಿಸಿದರೆ ಅವರ ವಿರುದ್ಧ ಪುರಸಭೆ ಸದಸ್ಯರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ತಕ್ಷಣವೇ ಜಿಲ್ಲಾಧಿಕಾರಿಗಳು ಕೆರೆಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿ, ಪರಿಹಾರ ಕ್ರಮ ಜರುಗಿಸಬೇಕು
ರಾಜಶೇಖರ ಕೂಚಬಾಳ, ಪುರಸಭೆ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.