`ಸಿಂಪಲ್ಲಾಗ್ ಒಂದ್ ಲವ್ಸ್ಟೋರಿ'ಯ ಮರೆವಿನ ಹುಡುಗಿ, `ಸೈಬರ್ ಯುಗದೊಳ್ ನವಯುವ ಮಧುರ ಪ್ರೇಮಕಾವ್ಯಂ'ನ ಈ ಕಾಲದ ಸೊಸೆ... ಅವರು ನಟಿ ಶ್ವೇತಾ ಶ್ರೀವಾಸ್ತವ್. `ದಾಂಪತ್ಯ ಗೀತೆ' ಹಾಡುತ್ತಲೇ ಚಿತ್ರರಂಗಕ್ಕೆ ಅಡಿಯಿಟ್ಟ ಅವರ ಪಾಲಿಗೆ ದೇಹವೆಂಬುದು ಸುಂದರ ವೀಣೆ.

ಮೊದಲಿನಿಂದಲೂ ಆರೋಗ್ಯದ ಬಗ್ಗೆ ಅತೀವ ಕಾಳಜಿ. ಹಾಗೆಂದು ಮಾತ್ರೆ, ಔಷಧಗಳ ಕೃತಕ ಹಾದಿ ತುಳಿದವರಲ್ಲ. ವಾರದಲ್ಲಿ ಆರು ದಿನ ದೇಹ ದಂಡನೆಗೆಂದು ಸಮಯ ಮೀಸಲು. ನಿತ್ಯ ಒಂದು ಗಂಟೆ ಕಾಲ ನಿರಂತರ ಬೆವರಿಳಿಸುವ ಕಾಯಕ. ಯಾವತ್ತೂ ಒಂದೇ ವ್ಯಾಯಾಮ ಪ್ರಕಾರವನ್ನು ಆಯ್ದುಕೊಂಡವರಲ್ಲ ಎನ್ನುವುದು ವಿಶೇಷ. ಯೋಗ, ಏರೋಬಿಕ್ಸ್, ಜಿಮ್ ನಡುವೆ ಅಂಗಸೌಷ್ಠವದ ಪಯಣ ಸಾಗುತ್ತದೆ. ಇಂಥ ಪಯಣ ರಿಸ್ಕ್ ಅನ್ನಿಸಿಲ್ಲವಂತೆ. ಬದಲಿಗೆ ಖುಷಿ ನೀಡಿದೆ. ಒಂದೇ ಪ್ರಕಾರಕ್ಕೆ ಅಂಟಿಕೊಂಡರೆ ಏಕತಾನತೆ ಸೃಷ್ಟಿಯಾಗಬಹುದು ಎಂಬ ಎಚ್ಚರಿಕೆಯೂ ಇದರ ಜೊತೆಗಿದೆ. ಒಂದರಿಂದ ಮತ್ತೊಂದು ಪ್ರಕಾರದಲ್ಲಿ ತೊಡಗಿಕೊಳ್ಳುವುದು ದೇಹಕ್ಕೆ ಪರೋಕ್ಷ ವಿರಾಮ ನೀಡುತ್ತದಂತೆ.

ಇದು ಈ ಪಯಣದ ಹಿಂದಿರುವ ಇನ್ನೊಂದು ಗುಟ್ಟು. ವ್ಯಾಯಾಮಕ್ಕೆ ಯಾವುದೇ ಗುರುಗಳನ್ನು ಶ್ವೇತಾ ನೆಚ್ಚಿಲ್ಲ. ತರಬೇತುದಾರರು ಹೇಳಿಕೊಟ್ಟದ್ದನ್ನು ಮಾತ್ರ ಶಿಸ್ತಾಗಿ ಪಾಲಿಸುವವರು. ಸೈಕ್ಲಿಂಗ್ ಹಾಗೂ ಈಜಾಟ ನೆಚ್ಚಿನ ಸಂಗತಿಗಳು. ಉದ್ಯಾನದ ಸುತ್ತ ಸೈಕಲ್ನಲ್ಲಿ ಗಸ್ತು ಹೊಡೆಯುವುದೆಂದರೆ ಬಲು ಪ್ರೀತಿ. ಬಿಡುವು ಸಿಕ್ಕಾಗಲೆಲ್ಲ ಈಜಿನ ಸಾಂಗತ್ಯ.

`ಹಣ್ಣುಗಳನ್ನೇ ಕೊಟ್ಟು ಬಿಡಿ ಅದನ್ನೇ ತಿಂದುಕೊಂಡಿರುತ್ತೇನೆ' ಎನ್ನುತ್ತಾ ರಾಮಾಯಣದಲ್ಲಿ ವನವಾಸಕ್ಕೆ ತೆರಳುವ ಪಾತ್ರಗಳಂತೆ ಮಾತನಾಡುತ್ತಾರೆ ಶ್ವೇತಾ. ಎಲ್ಲ ತರಕಾರಿಗಳನ್ನೂ ಮನಸೋ ಇಚ್ಛೆ ತಿನ್ನುವ ಅವರು, ತರಕಾರಿ ಬೇಡ ಎನ್ನುವವರ ಮೇಲೆ ಸಣ್ಣಗೆ ಸಿಟ್ಟಾಗುವವರು. ದ್ರವಾಹಾರದ ಬಗ್ಗೆ ವಿಶೇಷ ಆಸಕ್ತಿ. ನೀರಿನ ಜೊತೆಗೆ ಫಲಾಮೃತವನ್ನೂ ಸೇವಿಸಲು ಸೂಚಿಸುವ ಶ್ವೇತಾ ದಿನವೂ ಗೋಧಿ ಹುಲ್ಲಿನ ಪಾನೀಯ ಸ್ವೀಕರಿಸುತ್ತಾರೆ. ಬಾರ್ಲಿ, ಓಟ್ಸ್ಗಳ ಪಾಯಸ ಮೆಲ್ಲುತ್ತಾರೆ. ಆದರೆ ಸಕ್ಕರೆಯಿಂದ ಸದಾ ದೂರ. ಹಣ್ಣು, ಧಾನ್ಯಗಳಲ್ಲಿ ನೈಸರ್ಗಿಕವಾಗಿ ಬೆರೆತ ಸಕ್ಕರೆ ಅವರಿಗೆ ತೃಪ್ತಿ ನೀಡಿದೆ. ಅಂದಹಾಗೆ ಚಾಕೊಲೇಟ್ ಮತ್ತು ಐಸ್ಕ್ರೀಮ್ ಅವರ ವೀಕ್ನೆಸ್ಗಳು. ಮನಸ್ಸಿಗೆ ಮುದ ನೀಡಲೆಂದು ಇವುಗಳ ಮೇಲೆ ನಿರ್ಬಂಧ ವಿಧಿಸಿಲ್ಲವಂತೆ!

ಶಾಲಾ ದಿನಗಳಿಂದಲೂ ಯೋಗದತ್ತ ಆಸಕ್ತಿ. ದಿನಕಳೆದಂತೆ ಯೋಗ ಒಂದು ಟ್ರೆಂಡ್ ಆಗಿ ಬೆಳೆದದ್ದನ್ನು ಸೂಕ್ಷ್ಮವಾಗಿ ಬಲ್ಲವರು. ಪವರ್ ಯೋಗವನ್ನೂ ಕಲಿತಿರುವ ಅವರಿಗೆ ಸಿಂಪಲ್ ಯೋಗ ಬಹಳ ಹಿಡಿಸಿದೆ. ತಪ್ಪದೇ ಮಾಡುವ ಸೂರ್ಯ ನಮಸ್ಕಾರದಿಂದ ದೇಹಕ್ಕೊಂದು ಸುಂದರ ಆಕಾರ. ಜೊತೆಗೆ ಧ್ಯಾನದ ಸಹವಾಸ ಉಂಟು.

ದೇಹ ಸಂರಕ್ಷಣೆಯ ಜೊತೆಗೆ ಮನಸ್ಸಿನ ಆರೋಗ್ಯವೂ ಮುಖ್ಯ ಎಂದು ಬಲವಾಗಿ ನಂಬಿರುವ ಶ್ವೇತಾ, ಮನಸ್ಸು- ದೇಹಗಳ ಸಮತೋಲನದತ್ತ ಚಿತ್ತ ಹರಿಸಿದವರು. ಬಿಡುವಿನ ವೇಳೆಯಲ್ಲಿ ಹಿಂದೂಸ್ತಾನಿ ಸಂಗೀತ ಕೇಳಲು, ಪುಸ್ತಕ ಓದಲು ಸಮಯ ಮೀಸಲು. ಸಾಧ್ಯವಾದಷ್ಟೂ ಪ್ರಾಣಿ ಪಕ್ಷಿಗಳನ್ನು ಪ್ರೀತಿಸಿ ಎಂಬ ಸಲಹೆ. ಸಾಕುಪ್ರಾಣಿಯೇ ಆಗಬೇಕಿಲ್ಲ. ದೂರದಲ್ಲೆಲ್ಲೋ ಕುಳಿತ ಕಾಗೆಗಳ ಗುಂಪು, ಇಂಪಿನ ಮೂಲಕವೇ ಕಾಣಿಸಿಕೊಳ್ಳುವ ಕೋಗಿಲೆ, ರಸ್ತೆಯಲ್ಲಿ ಅಡ್ಡಾಡುವ ದನಕರುಗಳೆಂದರೆ ಅವರಿಗೆ ಪಂಚಪ್ರಾಣ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಗಿಡಮರಗಳನ್ನೂ ಮಾತನಾಡಿಸುವ ಅವರಿಗೆ, ಅವೆಲ್ಲ ಮನಸ್ಸಿನ ಸಂತೋಷದ ಜೊತೆಗೆ ಕಾಳಜಿಯ ಸಂಗತಿಗಳು ಕೂಡ.

ಚಿತ್ರೀಕರಣದ ಸಮಯದಲ್ಲಿ ವ್ಯಾಯಾಮಕ್ಕೆ ಸಹಜವಾಗಿಯೇ ಅಡ್ಡಿ. ಆದರೂ ಆರೋಗ್ಯದ ವಿಷಯದಲ್ಲಿ ಕಟ್ಟುನಿಟ್ಟು. ಚಿತ್ರೀಕರಣದ ಸುತ್ತಮುತ್ತಲ ಸ್ಥಳದಲ್ಲಿ ಕಾಲ್ನಡಿಗೆ. ಆದಷ್ಟೂ ಹಿತಮಿತ ಆಹಾರ. ಆಗೆಲ್ಲಾ ಇಡ್ಲಿ, ಚಪಾತಿಗಳಿಗಷ್ಟೇ ಬಾಯಿರುಚಿ ಮೀಸಲು. ಅನ್ನದಿಂದ ಸದಾ ದೂರ.

ವ್ಯಾಯಾಮದ ವಿಚಾರದಲ್ಲಿ ಡಾ. ರಾಜ್ಕುಮಾರ್ ಎಂದೆಂದಿನ ರೋಲ್ ಮಾಡೆಲ್. ವಿವೇಕಾನಂದರು ತುಳಿದ ಬದುಕಿನ ಹಾದಿ ಶ್ವೇತಾರ ಮನಸ್ಸಿಗೆ ವ್ಯಾಯಾಮ ಒದಗಿಸುತ್ತಿದೆ. ಅಪ್ಪಟ ಸಸ್ಯಾಹಾರ ಆರೋಗ್ಯದ ಮತ್ತೊಂದು ರಹಸ್ಯ. ಮಾಂಸಾಹಾರ, ಸಸ್ಯಾಹಾರ ಯಾವುದೇ ಇರಲಿ ಊಟ ಹಿತಮಿತವಾಗಿರಲಿ ಎಂಬುದು ಅವರು ನಂಬಿದ ಮತ್ತೊಂದು ಸೂಕ್ತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.