ಬೆಂಗಳೂರು: ವೈದ್ಯಕೀಯ, ದಂತ ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ವೃತ್ತಿಪರ ಕೋರ್ಸ್ಗಳ ಸೀಟು ಹಂಚಿಕೆ ಪಟ್ಟಿ ಸಿದ್ಧವಾಗಿದ್ದು, ಇದೇ 4ರಿಂದ ಆನ್ಲೈನ್ ಕೌನ್ಸೆಲಿಂಗ್ ಶುರುವಾಗಲಿದೆ.

ವೃತ್ತಿಪರ ಕೋರ್ಸ್ಗಳ ಪ್ರವೇಶ ಸಂಬಂಧ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೋಮವಾರ ವೇಳಾಪಟ್ಟಿ ಸಿದ್ಧಪಡಿಸಿದೆ. ಆ ಪ್ರಕಾರ ಕಾಲೇಜು ಹಾಗೂ ಕೋರ್ಸ್ವಾರು ಸೀಟುಗಳನ್ನು ಗುರುತಿಸುವ ಪ್ರಕ್ರಿಯೆ (ಆಪ್ಷನ್ ಎಂಟ್ರಿ) ಗುರುವಾರ ಆರಂಭವಾಗಲಿದೆ.

2013-14ನೇ ಸಾಲಿನಲ್ಲಿ ಲಭ್ಯವಿರುವ ವೈದ್ಯಕೀಯ ಸೀಟುಗಳ ಪಟ್ಟಿಯನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಸೋಮವಾರ ಸಿದ್ಧಪಡಿಸಿದ್ದು, ಉನ್ನತ ಶಿಕ್ಷಣ ಇಲಾಖೆಯು ಮಂಗಳವಾರ ಪ್ರಾಧಿಕಾರಕ್ಕೆ ಕಳುಹಿಸಲಿದೆ. ಅದನ್ನು ಆಧರಿಸಿ ಪ್ರವರ್ಗವಾರು ಲಭ್ಯವಿರುವ ಸೀಟು ಹಂಚಿಕೆ ಪಟ್ಟಿಯನ್ನು ಪ್ರಾಧಿಕಾರವು ಮಂಗಳವಾರ ವೆಬ್ಸೈಟ್ನಲ್ಲಿ ಪ್ರಕಟಿಸಲಿದೆ. ಎಂಜಿನಿಯರಿಂಗ್ನಲ್ಲಿ ಈ ವರ್ಷ ಒಟ್ಟು 96,460 ಸೀಟುಗಳು ಲಭ್ಯವಾಗಲಿವೆ. ಈ ಪೈಕಿ 43,027 ಸೀಟುಗಳು ಸರ್ಕಾರಿ ಕೋಟಾದಡಿ ದೊರೆಯಲಿವೆ ಎಂದು ಉನ್ನತ ಶಿಕ್ಷಣ ಸಚಿವ ಆರ್. ವಿ.ದೇಶಪಾಂಡೆ ಸೋಮವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

200 ಎಂಜಿನಿಯರಿಂಗ್ ಕಾಲೇಜುಗಳಲ್ಲಿ (12 ಕಾಲೇಜುಗಳಲ್ಲಿ ಎರಡು ಪಾಳಿ) ಸರ್ಕಾರಿ ಸೀಟುಗಳನ್ನು ಹೊರತುಪಡಿಸಿದರೆ, 26,925 ಸೀಟುಗಳು `ಕಾಮೆಡ್- ಕೆ' ಮೂಲಕ, 23,088 ಸೀಟುಗಳು ಆಡಳಿತ ಮಂಡಳಿ ಕೋಟಾ ಮೂಲಕ ಹಂಚಿಕೆ ಆಗಲಿವೆ. ಇದಲ್ಲದೆ 4,823 ಸೀಟುಗಳು ಸೂಪರ್ ನ್ಯೂಮರರಿ ಕೋಟಾದಡಿ ದೊರೆಯಲಿವೆ ಎಂದರು.

ರಾಜ್ಯದಲ್ಲಿನ 19 ವಾಸ್ತುಶಿಲ್ಪ ಕಾಲೇಜುಗಳಲ್ಲಿ ಒಟ್ಟು 1,360 ಸೀಟುಗಳು ಲಭ್ಯವಾಗಲಿವೆ. ಈ ಪೈಕಿ 598 ಸರ್ಕಾರಿ ಕೋಟಾ, 396 ಕಾಮೆಡ್ - ಕೆ, 340 ಆಡಳಿತ ಮಂಡಳಿ ಕೋಟಾ ಹಾಗೂ 26 ಸೀಟುಗಳು ಲ್ಯಾಟರಲ್ ಎಂಟ್ರಿ ಮೂಲಕ ದೊರೆಯಲಿವೆ.

ವಿಳಂಬಕ್ಕೆ ಕಾರಣ: ಬೆಂಗಳೂರು, ಮೈಸೂರು, ಹುಬ್ಬಳ್ಳಿ ವೈದ್ಯಕೀಯ ಕಾಲೇಜುಗಳ 200 ಹೆಚ್ಚುವರಿ ಸೀಟುಗಳು ಹಾಗೂ ರಾಯಚೂರು, ಬೀದರ್ ವೈದ್ಯಕೀಯ ಕಾಲೇಜಿನ ತಲಾ 100 ಸೀಟುಗಳ ಪ್ರವೇಶಕ್ಕೆ ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಅನುಮತಿ ನೀಡುವುದು ತಡವಾದ ಕಾರಣ ಕೌನ್ಸೆಲಿಂಗ್ ಆರಂಭವಾಗುವುದು ವಿಳಂಬವಾಗಿದೆ.

ಸಿಬ್ಬಂದಿ ನೇಮಕ, ಮೂಲಸೌಕರ್ಯಗಳನ್ನು ಕಲ್ಪಿಸಿಕೊಡುವುದಾಗಿ ರಾಜ್ಯ ಸರ್ಕಾರ ಮುಚ್ಚಳಿಕೆ ಬರೆದುಕೊಟ್ಟ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ ವೈದ್ಯಕೀಯ ಕಾಲೇಜುಗಳ 200 ಹೆಚ್ಚುವರಿ ಸೀಟುಗಳು ಪ್ರವೇಶಕ್ಕೆ ಎಂಸಿಐ ಕಳೆದ ವಾರ ಅನುಮತಿ ನೀಡಿದೆ. ಆದರೆ, ರಾಯಚೂರು, ಬೀದರ್ ಕಾಲೇಜುಗಳಿಗೆ ಇನ್ನೂ ಅನುಮತಿ ನೀಡಿಲ್ಲ. ಹೀಗಾಗಿ ಈ ಸೀಟುಗಳು ಮೊದಲ ಸುತ್ತಿನ ಕೌನ್ಸೆಲಿಂಗ್ನಲ್ಲಿ ಸಿಗುವ ಸಾಧ್ಯತೆ ಇಲ್ಲ.

ಎರಡನೇ ಸುತ್ತಿಗೆ ಪರಿಗಣನೆ: ರಾಯಚೂರು, ಬೀದರ್ ವೈದ್ಯಕೀಯ ಕಾಲೇಜುಗಳ ತಲಾ 100 ಸೀಟುಗಳ ಪ್ರವೇಶಕ್ಕೆ ಈ ತಿಂಗಳ 15ರ ಒಳಗೆ ಎಂಸಿಐ ಒಪ್ಪಿಗೆ ನೀಡುವ ನಿರೀಕ್ಷೆ ಇದ್ದು, ಎರಡನೇ ಸುತ್ತಿನ ಕೌನ್ಸೆಲಿಂಗ್ಗೆ ಈ ಸೀಟುಗಳು ಲಭ್ಯವಾಗುವ ವಿಶ್ವಾಸ ಇದೆ ಎಂದು ವೈದ್ಯಕೀಯ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.

ಈಗಾಗಲೇ 13 ಕೇಂದ್ರಗಳಲ್ಲಿ ಮೂಲ ದಾಖಲೆಗಳ ಪರಿಶೀಲನೆ ನಡೆದಿದೆ. ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಇದೇ 31ರವರೆಗೂ ಪ್ರವೇಶಕ್ಕೆ ಕಾಲಾವಕಾಶ ಇದೆ. ಈ ತಿಂಗಳ 27ರ ಒಳಗೆ ಎಂಜಿನಿಯರಿಂಗ್ ಕೋರ್ಸ್ಗಳ ಪ್ರವೇಶ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ದೇಶಪಾಂಡೆ ಹೇಳಿದರು.

ಎಂಬಿಎ ಪ್ರವೇಶ: ಎಂಬಿಎ ಶಿಕ್ಷಣ ನೀಡುವ 236 ಸಂಸ್ಥೆಗಳು ರಾಜ್ಯದಲ್ಲಿವೆ. ಈ ಸಂಸ್ಥೆಗಳಲ್ಲಿ ಸುಮಾರು 12,375 ಸರ್ಕಾರಿ ಸೀಟುಗಳಿವೆ. ಈ ಸೀಟುಗಳ ಪ್ರವೇಶ ಸಂಬಂಧ ಇದೇ 3ರಂದು ವೇಳಾಪಟ್ಟಿ ಪ್ರಕಟಿಸಲಾಗುವುದು. ಆಗಸ್ಟ್ 31ರ ಒಳಗೆ ಪ್ರವೇಶ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳ ಪೀಕಲಾಟ
ಸಾಮಾನ್ಯವಾಗಿ ಸರ್ಕಾರಿ ಕೋಟಾದ ಸೀಟುಗಳ ಹಂಚಿಕೆ ಪ್ರಕ್ರಿಯೆ ಮುಗಿದ ನಂತರ `ಕಾಮೆಡ್-ಕೆ' ಕೌನ್ಸೆಲಿಂಗ್ ನಡೆಯುತ್ತದೆ. ಸರ್ಕಾರಿ ಕೋಟಾ ಸೀಟು ಸಿಗದವರು ಕಾಮೆಡ್ - ಕೆ ಸೀಟು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಈ ವರ್ಷ ಸರ್ಕಾರಿ ಕೋಟಾದ ಸೀಟುಗಳ ಪ್ರವೇಶಕ್ಕೆ ಮೊದಲೇ `ಕಾಮೆಡ್ -ಕೆ' ಕೌನ್ಸೆಲಿಂಗ್ ಮಂಗಳವಾರವೇ ಆರಂಭವಾಗುತ್ತಿದೆ.

`ಕಾಮೆಡ್-ಕೆ' ಸೀಟುಗಳ ಶುಲ್ಕ ಹೆಚ್ಚಾಗಿರುವ ಕಾರಣ, ಬಹುತೇಕ ವಿದ್ಯಾರ್ಥಿಗಳು ಸರ್ಕಾರಿ ಕೋಟಾ ಸೀಟುಗಳಿಗೆ ಮೊದಲ ಆದ್ಯತೆ ನೀಡುತ್ತಾರೆ. ಈ ಬಾರಿ ಸರ್ಕಾರಿ ಕೋಟಾ ಸೀಟುಗಳ ಪ್ರವೇಶ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ಸರ್ಕಾರಿ ಸೀಟು ಸಿಗುತ್ತದೋ, ಇಲ್ಲವೋ ಎಂಬ ಆತಂಕದಲ್ಲಿರುವ ವಿದ್ಯಾರ್ಥಿಗಳು ಇಷ್ಟ ಇಲ್ಲದಿದ್ದರೂ ಕಾಮೆಡ್ -ಕೆ ಕೋಟಾ ಸೀಟುಗಳನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ.

`ಕಾಮೆಡ್-ಕೆ' ಗೆ ಮನವಿ
ಸರ್ಕಾರಿ ಕೋಟಾದ ಸೀಟುಗಳ ಪ್ರವೇಶ ಪ್ರಕ್ರಿಯೆ ತಡವಾಗಿರುವ ಕಾರಣ, `ಕಾಮೆಡ್-ಕೆ' ಕೌನ್ಸೆಲಿಂಗ್ ಮುಂದೂಡುವಂತೆ `ಕಾಮೆಡ್-ಕೆ' ಆಡಳಿತ ಮಂಡಳಿಗೆ ಪತ್ರ ಬರೆಯಲಾಗಿದೆ. ಆದರೆ, ಅವರಿಂದ ಯಾವುದೇ ಮಾಹಿತಿ ಬಂದಿಲ್ಲ. ಮಂಗಳವಾರದಿಂದ ಕಾಮೆಡ್ -ಕೆ ಕೌನ್ಸೆಲಿಂಗ್ ನಡೆಸುವುದು ಸರಿಯಲ್ಲ.

ಮೊದಲ ಸುತ್ತಿನಲ್ಲಿ ಕಾಮೆಡ್ - ಕೆ ಸೀಟು ಆಯ್ಕೆ ಮಾಡಿಕೊಂಡರೂ, ನಂತರ ಬದಲಾವಣೆಗೆ ಅವಕಾಶ ಇದೆ. ಸರ್ಕಾರಿ ಕೋಟಾ ಸೀಟು ದೊರೆತ ನಂತರ ಕಾಮೆಡ್ -ಕೆ ಕೋಟಾ ಸೀಟು ಹಿಂತಿರುಗಿಸಬಹುದು. ತೆರವಾದ ಸೀಟುಗಳನ್ನು ಎರಡನೇ ಸುತ್ತಿನ ಕೌನ್ಸೆಲಿಂಗ್ನಲ್ಲಿ ಭರ್ತಿ ಮಾಡಿಕೊಳ್ಳಬಹುದು. ಹೀಗಾಗಿ ವಿದ್ಯಾರ್ಥಿಗಳು, ಪೋಷಕರು ಆತಂಕಪಡುವ ಅಗತ್ಯವಿಲ್ಲ.
- ಡಾ.ಶರಣಪ್ರಕಾಶ ಪಾಟೀಲ, ವೈದ್ಯಕೀಯ ಶಿಕ್ಷಣ ಸಚಿವರು

ನನ್ನ ಗಮನಕ್ಕೆ ಬಂದಿಲ್ಲ
ಸರ್ಕಾರ ಪತ್ರ ಬರೆದಿರುವುದು ನನ್ನ ಗಮನಕ್ಕೆ ಬಂದಿಲ್ಲ. ನಾನು ರಾಜಧಾನಿಯಲ್ಲಿ ಇರಲಿಲ್ಲ. ಆ ರೀತಿ ಪತ್ರ ಬಂದಿದ್ದರೆ ಕಾಮೆಡ್ -ಕೆ ಆಡಳಿತ ಮಂಡಳಿಯ ಗಮನಕ್ಕೆ ತರುತ್ತೇನೆ. ಮಂಡಳಿಯ ತೀರ್ಮಾನದಂತೆ ನಡೆದುಕೊಳ್ಳಲಾಗುವುದು. ಈಗಿನ ಪ್ರಕಾರ ಮಂಗಳವಾರ ಕೌನ್ಸೆಲಿಂಗ್ ನಡೆಯಲಿದೆ.
- ಎ.ಎಸ್.ಶ್ರೀಕಾಂತ್, ಕಾಮೆಡ್ -ಕೆ ಮುಖ್ಯಕಾರ್ಯನಿರ್ವಾಹಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.