ಭಾನುವಾರ, ಜೂಲೈ 12, 2020
29 °C

ಸಿಟಿ ಬ್ಯಾಂಕ್ ಹಗರಣ: ಆರ್‌ಬಿಐ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಛತ್ತೀಸಘಡ (ಪಿಟಿಐ): ಗುಡಗಾಂವ್ ಸಿಟಿ ಬ್ಯಾಂಕ್ ಶಾಖೆಯಲ್ಲಿ ನಡೆದಿದೆ ಎನ್ನಲಾದ  ರೂ 300 ಕೋಟಿ ಮೊತ್ತದ ಬ್ಯಾಂಕಿಂಗ್ ಹಗರಣಕ್ಕೆ ಸಂಬಂಧಿಸಿದಂತೆ  ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲಿಯೇ ಬ್ಯಾಂಕುಗಳಿಗೆ ಸೂಚನೆ ನೀಡಲಿದೆ ಎಂದು ಮೂಲಗಳು  ತಿಳಿಸಿವೆ.‘ದೇಶದ ಯಾವುದೇ ಬ್ಯಾಂಕಿನ, ಯಾವುದೇ ಶಾಖೆಯಲ್ಲಿ ಹಗರಣ ನಡೆದರೂ ಅದನ್ನು ‘ಆರ್‌ಬಿಐ’ ಗಂಭೀರವಾಗಿ ಪರಿಗಣಿಸುತ್ತದೆ. ಹಾಗೂ ಇದಕ್ಕೆ ಸಂಬಂಧಿಸಿದಂತೆ  ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಆರ್‌ಬಿಐನ ಪ್ರಧಾನ ವ್ಯವಸ್ಥಾಪಕ ಜಿ. ಗೋಪಾಲಕೃಷ್ಣ  ತಿಳಿಸಿದ್ದಾರೆ. ‘ಸಿಟಿ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಆರ್‌ಬಿಐ ಗವರ್ನರ್ ಇಲ್ಲವೇ ಸಹಾಯಕ ಗವರ್ನರ್ ಶೀಘ್ರದಲ್ಲಿಯೇ ಬ್ಯಾಂಕುಗಳಿಗೆ ಸೂಚನೆ ಹೊರಡಿಸಲಿದ್ದಾರೆ. ಬ್ಯಾಂಕಿಂಗ್ ವ್ಯವಹಾರಗಳಿಗೆ ಸಂಬಂಧಿಸಿದ ಎಲ್ಲ  ಪ್ರಕರಣಗಳನಗ್ನು ’ಆರ್‌ಬಿಐ’ ಪರಿಶೀಲಿಸಲಿದೆ’ ಎಂದು ಗೋಪಾಲ ಕೃಷ್ಣ ಮಾಧ್ಯಮಗಳಿಗೆ ತಿಳಿಸಿದರು.ಈ ಹಗರಣಕ್ಕೆ ಸಂಬಂಧಿಸಿದಂತೆ ಗುಡಗಾಂವ್ ಶಾಖೆಯ ಸಂಪರ್ಕ ವ್ಯವಸ್ಥಾಪಕ ಶಿವರಾಜ್ ಪುರಿ ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.