ದೇವನಹಳ್ಳಿ : ದ್ರಾಕ್ಷಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಿಡಿಲು ಬಡಿದು ಮೃತಪಟ್ಟಿರುವ ಘಟನೆ ವಿಶ್ವನಾಥಪುರ ಪೊಲೀಸ್ ಠಾಣೆ ವ್ಯಾಪ್ತಿಯ ದ್ಯಾವರಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಮೃತರು ಪದ್ಮನಾಭ(42), ಮಂಜುನಾಥ(28) ಇದೇ ತಾಲ್ಲೂಕಿನ ಅತ್ತಿಬೆಲೆ ಗ್ರಾಮದ ನಿವಾಸಿಗಳು. ಕೂಲಿಗಾಗಿ ದ್ಯಾವರಹಳ್ಳಿ ಗ್ರಾಮಕ್ಕೆ ದ್ರಾಕ್ಷಿ ತೋಟದಲ್ಲಿ ಕೆಲಸ ಮಾಡಲು ತೆರಳಿದ್ದರು.

ಮೃತ ಪದ್ಮನಾಭ ವಿನಾಹಿತನಾಗಿದ್ದು, ಪತ್ನಿ ಲಲಿತಮ್ಮ, ಮಕ್ಕಳಾದ ಚರಣ್ ಕುಮಾರ್, ಮಗಳು ಸಂಗೀತಾಳನ್ನು ಅಗಲಿದ್ದು, ಇನ್ನೊರ್ವ ಮೃತ ಮಂಜುನಾಥ್ ಅವಿವಾಹಿತನಾಗಿದ್ದ.
ದ್ರಾಕ್ಷಿ ತೋಟದ ಮಾಲಿಕ ಶಾಂತ ಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಶವಪರೀಕ್ಷೆಗಾಗಿ ಮೃತ ದೇಹಗಳನ್ನು ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ. ಪ್ರಕರಣ ಕುರಿತು ಮಾತನಾಡಿದ ತಹಸೀಲ್ದಾರ್ ಎಲ್.ಸಿ.ನಾಗರಾಜ್, ಮೃತರ ಕುಟುಂಬಗಳಿಗೆ ಪ್ರಕೃತಿ ವಿಕೋಪ ನಿಧಿಯಿಂದ ತಲಾ ಒಂದು ಲಕ್ಷರೂ ಪರಿಹಾರ ನೀಡಲಾಗುವುದೆಂದು ತಿಳಿಸಿದ್ದಾರೆ.

ಬಿರುಗಾಳಿಗೆ ಸಾವು
ವಿಜಯಪುರ: ಸಮೀಪದ ಚಿಮಾಚನಹಳ್ಳಿಯಲ್ಲಿ ಶುಕ್ರವಾರ ಸಂಭವಿಸಿದ ಬಿರುಗಾಳಿ ಸಹಿತ ಮಳೆಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ದೊಡ್ಡಮುನಿವೆಂಕಟಪ್ಪ(70) ಮೃತಪಟ್ಟವರು. ದಾರಿಯಲ್ಲಿ ಹಾದು ಹೋಗುವ ಸಂದರ್ಭದಲ್ಲಿ ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಆಲದ ಮರದ ಕೊಂಬೆ ಇವರ ಮೇಲೆ ಬಿದ್ದಿದೆ. ಇದರಿಂದ ತೀವ್ರ ರಕ್ತಸ್ರಾವಕ್ಕೆ ತುತ್ತಾಗಿ ಮೃತಪಟ್ಟಿದ್ದಾರೆ. ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.