ಭಾನುವಾರ, ಏಪ್ರಿಲ್ 18, 2021
24 °C

ಸಿದ್ಧಾಂತಕ್ಕೆ ಕಾಲದ ಪರೀಕ್ಷೆಯಲ್ಲಿ ಗೆಲುವು ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ಧಾಂತಕ್ಕೆ ಕಾಲದ ಪರೀಕ್ಷೆಯಲ್ಲಿ ಗೆಲುವು ಅಗತ್ಯ

ತುಮಕೂರು: ಭಾರತದ ವೈವಿಧ್ಯತೆ ಹಾಗೂ ಮಾನವೀಯ ಮೌಲ್ಯಗಳು ಅತ್ಯಂತ ಸಂತೋಷದ ಅಂಶಗಳೆಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಪ್ರೊ.ರುಡಾಲ್ಫ್ ಮಾರ್ಕಸ್ ಹೇಳಿದರು.ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದ ಅವರು, ಬುಧವಾರ ತುಮಕೂರು ವಿಶ್ವವಿದ್ಯಾನಿಲಯದ ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ರಾಸಾಯನ ಶಾಸ್ತ್ರ ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.`ವೈಜ್ಞಾನಿಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಹೆಜ್ಜೆ ಎನಿಸಿದ ರೇಡಿಯೋ ಕಾರ್ಬನ್ ಡೇಟಿಂಗ್ ವಿಷಯದ ಮೇಲೆ ಸಂಶೋಧನೆ ನಡೆಸಿ ನೊಬೆಲ್ ಪುರಸ್ಕಾರ ಪಡೆದ ಪ್ರೊ.ವಿಲಿಯರ್ಡ್ ಎಫ್.ಲಿಬಿ ಅವರ ಭಾಷಣದಿಂದ ಉತ್ತೇಜಿತನಾಗಿ ತಾನು ಸಂಶೋಧನೆ ನಡೆಸಿ ರಸಾಯನಶಾಸ್ತ್ರದಲ್ಲಿ ನೊಬೆಲ್ ಪುರಸ್ಕಾರಕ್ಕೆ ಪಾತ್ರನಾದೆ.ನಿಮಗೆ ಯಾವ ವಿಷಯದಲ್ಲಿ ಅತ್ಯಂತ ಆಸಕ್ತಿ ಇದೆಯೋ ಅದರಲ್ಲಿ ಹೆಚ್ಚಿನ ಸಾಧನೆ ಹಾಗೂ ಸಂಶೋಧನೆ ಮಾಡಿ~ ಎಂದು ಸಲಹೆ ಮಾಡಿದರು.ಒಂದು ಸಿದ್ಧಾಂತ ಕಾಲದ ಪರೀಕ್ಷೆಯಲ್ಲಿ ಗೆದ್ದು ಬಹುಕಾಲ ಉಳಿಯಬೇಕಾದರೆ ಅದು ಸಾಕಷ್ಟು ಗಟ್ಟಿಯಾಗಿರಬೇಕು ಮತ್ತು ಕಠಿಣ ಶ್ರಮದ ಹಿನ್ನೆಲೆ ಹೊಂದಿರಬೇಕು ಎಂದು ಅವರು ತಿಳಿಸಿದರು.ತುಮಕೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ ಹಾಗೂ ಸೌಲಭ್ಯಗಳನ್ನು ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿದರು. ಭಾರತಕ್ಕೆ ಈ ಹಿಂದೆ ಒಮ್ಮೆಯೂ ಭೇಟಿ ನೀಡಿರಲಿಲ್ಲ. ಇಲ್ಲಿನ ಸಂಸ್ಕೃತಿ ವೈವಿಧ್ಯತೆ ತುಂಬ ಇಷ್ಟ ಎಂದು ಹೇಳಿದರು.ತುಮಕೂರು ವಿ.ವಿ. ಕುಲಪತಿ ಡಾ.ಎಸ್.ಸಿ.ಶರ್ಮಾ ಅಧ್ಯಕ್ಷತೆ ವಹಿಸಿದ್ದರು. ಕುಲಸಚಿವ ಪ್ರೊ.ಡಿ.ಶಿವಲಿಂಗಯ್ಯ, ಸ್ನಾತಕೋತ್ತರ ಅಧ್ಯಯನ ವಿಭಾಗ ನಿರ್ದೇಶಕ ಡಾ.ಎಂ.ಜಯರಾಮು ಉಪಸ್ಥಿತರಿದ್ದರು. ಉಪಕುಲಸಚಿವ ಎ.ರೂಪೇಶ್‌ಕುಮಾರ್ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.