ಮಂಗಳವಾರ, ಏಪ್ರಿಲ್ 13, 2021
23 °C

ಸಿನಿಮಾ ಮೋಹ ಮಾಡೆಲಿಂಗ್ ಸ್ನೇಹ

ಸಂದರ್ಶನ: ಪವಿತ್ರಾ ಶೆಟ್ಟಿ Updated:

ಅಕ್ಷರ ಗಾತ್ರ : | |

ಸಿನಿಮಾ ಮೋಹ ಮಾಡೆಲಿಂಗ್ ಸ್ನೇಹ

ಬೆಂಗಳೂರಿನ ಬಗ್ಗೆ ನಿಮ್ಮ ಅಭಿಪ್ರಾಯ?

ಹುಟ್ಟಿದ್ದು, ಬೆಳೆದಿದ್ದು ಎಲ್ಲಾ ಉದ್ಯಾನನಗರಿಯಲ್ಲಿಯೇ. ಬೆಂಗಳೂರು ಎಲ್ಲರಿಗೂ ಆಶ್ರಯ ನೀಡಿದೆ. ಆದರೆ ನಾವು ಇಲ್ಲಿಂದ ಬೇರೆ ಊರಿಗೆ ಹೋದರೆ ಅಲ್ಲಿ ನಮಗೆ ಬೆಲೆ ಸಿಗಲ್ಲ. ಆಗ ನಮ್ಮೂರಿನ ಬೆಲೆ ಗೊತ್ತಾಗುತ್ತದೆ.ಮಾಡೆಲಿಂಗ್ ಕ್ಷೇತ್ರದಲ್ಲಿ ಆಸಕ್ತಿ ಹೇಗೆ?

ಇಲ್ಲ. ನನಗೆ ಈ ಕ್ಷೇತ್ರದ ಬಗ್ಗೆ ಏನೂ ಗೊತ್ತಿಲ್ಲ. ಕ್ರೀಡಾಕ್ಷೇತ್ರ ನನ್ನ ಆಸಕ್ತಿ. ಕಾಮನ್‌ವೇಲ್ತ್ ತರಬೇತಿಯಲ್ಲಿ ನೆಟ್‌ಬಾಲ್ ಆಟಕ್ಕೆ ಆಯ್ಕೆಯಾಗಿದ್ದೆ. ಇದು ಬಿಟ್ಟರೆ ಸಿನಿಮಾ ಕ್ಷೇತ್ರದ ಮೇಲೆ ಕಣ್ಣಿತ್ತು.ಸಿನಿಮಾದಿಂದ ಅವಕಾಶ ಸಿಕ್ಕಿತ್ತಾ?

ಹೌದು. ಆದರೆ ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಆಸೆ ಇದೆ. ಮೊದಲು ಶ್ರೀಲಂಕಾದಲ್ಲಿ ಒಂದು ಸಿನಿಮಾ ಮಾಡುವುದಕ್ಕೆ ಅವಕಾಶ ಸಿಕ್ಕಿತ್ತು. ತುಂಬಾ ಖುಷಿ ಕೊಟ್ಟಿತು. ಅನುಭವ ಕೂಡ ಇಂದಿಗೂ ಮರೆಯಲು ಸಾಧ್ಯವಿಲ್ಲ. ಈಗ ಕನ್ನಡದ ವಿರಾಟ್ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ದರ್ಶನ್ ನಾಯಕ ನಟ.ಅನುಭವ ಹೇಗಿತ್ತು?

ಇದು ನನ್ನಿಷ್ಟದ ಕ್ಷೇತ್ರ. ನನಗೆ ಸಿಕ್ಕಿದವರೆಲ್ಲರೂ ಒಳ್ಳೆಯವರೇ. ದರ್ಶನ್ ಕೂಡ ನನಗೆ ಸೂಕ್ತ ಬೆಂಬಲ ನೀಡಿದರು.ನಿಮ್ಮಿಷ್ಟದ ನಟ?

ಸುದೀಪ್. ನನ್ನ ವಾರ್ಡ್‌ರೋಬ್ ತುಂಬಾ ಅವರ ಫೋಟೊಗಳೇ ಇವೆ. ಅವಕಾಶ ಸಿಕ್ಕರೆ ಅವರೊಂದಿಗೆ ನಟಿಸಬೇಕು ಎಂಬ ಆಸೆ ಕೂಡ ಇದೆ. ಹಾಗೇ ನಟಿಯರಲ್ಲಿ ಐಶ್ವರ್ಯಾ ರೈ ಇಷ್ಟ.ಬಾಲಿವುಡ್‌ಗೆ ಹಾರುವ ಕನಸಿದೆಯಾ?

ಇದೆ. ಆದರೆ ಮೊದಲು ಸ್ಯಾಂಡಲ್‌ವುಡ್ ಮುಖ್ಯ. ನಮ್ಮತನವನ್ನು ಯಾವತ್ತೂ ಮರೆಯಬಾರದು. ಹೆಜ್ಜೆ ಊರಲು, ಮಾತನಾಡಲು ಕಲಿತದ್ದು ಇಲ್ಲಿಯೇ.ನಿಮ್ಮ ಇತರೆ ಹವ್ಯಾಸಗಳೇನು?

ಕಂಪ್ಯೂಟರ್‌ನಲ್ಲಿ ಏನಾದರೂ ಕೆಲಸ ಮಾಡುತ್ತಿರುತ್ತೇನೆ.ಇಷ್ಟದ ಫೋಟೋಗ್ರಾಫರ್ ಯಾರು?

ರಾಜ್ ರುಮಾಲಿ.ಇಷ್ಟವಾದ ಫೋಟೊ?

ರ‌್ಯಾಂಪ್ ವಾಕ್ ಅಂದರೆ ಒಂದು ರೀತಿಯ ಗಲಿಬಿಲಿ ಇತ್ತು ನನ್ನಲ್ಲಿ. ಮೊದಲ ಬಾರಿ ಹೆಜ್ಜೆ ಹಾಕಿದಾಗ ಹೆದರಿ ಗುಬ್ಬಚ್ಚಿಯಂತೆ ಆಗಿದ್ದೆ. ಹೇಗೋ ವಾಕ್ ಮಾಡಿ ತುಸು ತಲೆ ಎತ್ತಿ ನೋಡಿ ಒಂದು ನಗು ಸೂಸಿದೆ.  ನಾಟಕೀಯ ನಗುವಲ್ಲ, ಅದು ಮನಸ್ಸಿನಿಂದ ಬಂದ ಹೂನಗು. ಇಂದಿಗೂ ಆ ಫೋಟೋ ನನಗಿಷ್ಟ.ಫ್ಯಾಷನ್ ಅಂದರೆ?

ಯಾವತ್ತೂ ಬಾಹ್ಯ ಸೌಂದರ್ಯ ಮುಖ್ಯವಲ್ಲ. ನಮ್ಮ ಮನಸ್ಸು ಶುದ್ಧವಾಗಿರಬೇಕು. ಆಗ ನಾವು ಏನೇ ಉಡುಪು ಧರಿಸಿದ್ದರೂ ಚೆನ್ನಾಗಿ ಕಾಣುತ್ತೇವೆ.

ನಿಮ್ಮ ಸ್ಟೈಲ್ ಬಗ್ಗೆ ಹೇಳಿ?

ನನಗೆ ಕೆಂಪು ಮತ್ತು ಕಪ್ಪು ಬಣ್ಣ ತುಂಬಾ ಇಷ್ಟ. ಬೇರೆಲ್ಲಾ ದಿರಿಸಿಗಿಂತ ಲಂಗ- ದಾವಣಿ ಇಷ್ಟ. ಈ ಉಡುಪು ಹಾಕಿದಾಗ ಮನಸ್ಸಿಗೆ ಸಿಗುವ ಆನಂದವನ್ನು ಹೇಳಲು ನನ್ನಲ್ಲಿ ಪದಗಳೇ ಇಲ್ಲ.ಈ ಕ್ಷೇತ್ರದಲ್ಲಿ ಏನಿಷ್ಟವಾಗಲ್ಲ?

ಮಾಡೆಲಿಂಗ್ ಕ್ಷೇತ್ರ ಸರಿಯಿಲ್ಲ ಎಂದು ತುಂಬಾ ಜನ ಮಾತನಾಡುತ್ತಾರೆ. ಆದರೆ ನಿಜವಾಗಿಯೂ ನನಗೆ ಯಾವುದೇ ಕೆಟ್ಟ ಅನುಭವವಾಗಿಲ್ಲ.ಇಷ್ಟದ ಶಾಪಿಂಗ್ ಸ್ಪಾಟ್ ಯಾವುದು?

ಮನೆ ಬಿಟ್ಟು ಹೊರಗೆ ಹೋಗುವುದೇ ಕಡಿಮೆ. ಸುತ್ತಾಡುವುದು ನನಗೆ ಇಷ್ಟವಿಲ್ಲ. ಎಲ್ಲಾದರೂ ಹೋದಾಗ ನನಗೆ ಇಷ್ಟವಾದ ಬಟ್ಟೆ ಖರೀದಿಸುತ್ತೇನೆ.ನಿಮ್ಮ ಬಗ್ಗೆ ಇತರರ ಕಾಮೆಂಟ್?

ನನ್ನ ಕಣ್ಣು ಮತ್ತು ಕೂದಲು ತುಂಬಾ ಚೆನ್ನಾಗಿದೆ ಎಂದು ಹೊಗಳುತ್ತಾರೆ.ಡಯೆಟಿಂಗ್?

ನಾನು ಸ್ವಲ್ಪ ದಪ್ಪಗಿದ್ದೆ. ತೆಳ್ಳಗಾಗಬೇಕೆಂದು ಸ್ವಲ್ಪ ತಿಂದು ಹುಷಾರಿಲ್ಲದೇ ಮಲಗಿದ್ದ ದಿನವೂ ಇದೆ. ಹಾಗಾಗಿ ಈಗ ಅನ್ನ ತಿನ್ನುವುದು ಕಡಿಮೆ ಮಾಡಿ ಪೌಷ್ಟಿಕಾಂಶವಿರುವ ಆಹಾರವನ್ನು ತಿನ್ನುತ್ತೇನೆ.ಇಷ್ಟದ ತಿನಿಸು?

ಮಸಾಲೆ ದೋಸೆ.ಅಡುಗೆ ಮಾಡುವುದು ಗೊತ್ತಾ? 

ಚೆನ್ನಾಗಿ ಮಾಡುತ್ತೇನೆ. ನಾನು ಮಾಡುವ ಅಡುಗೆ ಮನೆಯಲ್ಲಿ ಎಲ್ಲರಿಗೂ ಇಷ್ಟ.

 

ಕಿರಿಯರಿಗೆ ನಿಮ್ಮ ಸಲಹೆ?

ನಿಮ್ಮತನವನ್ನು ಯಾವತ್ತೂ ಬಿಟ್ಟು ಕೊಡಬೇಡಿ. ಇನ್ನೊಬ್ಬರಿಗಾಗಿ ಎಂದಿಗೂ ಬದಲಾಗಬೇಡಿ. ಏನೇ ಮಾಡಿದರೂ ಆತ್ಮವಿಶ್ವಾಸದಿಂದ ಮಾಡಿ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.