ಚಿಕ್ಕಬಳ್ಳಾಪುರ: ಇಲ್ಲಿನ ಲೋಕಸಭಾ ಕ್ಷೇತ್ರದಿಂದ ಸಿಪಿಎಂ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಜಿ.ವಿ.ಶ್ರೀರಾಮರೆಡ್ಡಿ ಭದ್ರತಾ ಠೇವಣಿಗಾಗಿ ಸ್ವಂತ ಹಣ ಬಳಸಿಲ್ಲ. ಅವರ ಮೇಲಿನ ಅಭಿಮಾನದಿಂದ ಆಟೊರಿಕ್ಷಾ ಚಾಲಕರೇ ಹಣ ಸಂಗ್ರಹಿಸಿ ಭದ್ರತಾ ಠೇವಣಿ ಪಾವತಿಸಿದ್ದಾರೆ.

ನಗರದಲ್ಲಿ ಶನಿವಾರ ಜಿ.ವಿ.ಶ್ರೀರಾಮರೆಡ್ಡಿ ನಾಮಪತ್ರ ಸಲ್ಲಿಸಿದ ಬಳಿಕ ನಡೆದ ಪಕ್ಷದ ಬಹಿರಂಗ ಸಭೆಯಲ್ಲಿ ಈ ವಿಷಯ ತಿಳಿಸಿದ ಸಿಪಿಎಂ ನಾಯಕ ಮೀನಾಕ್ಷಿ ಸುಂದರಂ, ‘ಆಟೊರಿಕ್ಷಾ ಚಾಲಕರೇ ಹಣ ಸಂಗ್ರಹಿಸಿ ₨ 25 ಸಾವಿರ ಭದ್ರತಾ ಠೇವಣಿ ಪಾವತಿಸಿದ್ದಾರೆ’ ಎಂದರು.

‘ಚುನಾವಣೆ ಪೂರ್ವಸಿದ್ಧತೆ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ಯಲಹಂಕದಲ್ಲಿ ಸಭೆ ನಡೆಸುತ್ತಿದ್ದ ವೇಳೆ ಹೆಚ್ಚಿನ ಆಸಕ್ತಿ ತೋರಿಸಿದ ಆಟೊರಿಕ್ಷಾ ಚಾಲಕರು ಚುನಾವಣೆಯಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು. ನಂತರ ಅವರೇ ಭದ್ರತಾ ಠೇವಣಿ ನೀಡಲು ಮುಂದಾದರು’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.