ಮಂಗಳವಾರ, ಮಾರ್ಚ್ 9, 2021
30 °C

ಸಿಪಿಎಂ, ಟಿಎಂಸಿ ಮಾರಾಮಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಪಿಎಂ, ಟಿಎಂಸಿ ಮಾರಾಮಾರಿ

ಬಾರಾಸತ್‌ (ಪಶ್ಚಿಮಬಂಗಾಳ): 24 ಪರಗಣ ಜಿಲ್ಲೆಯ ಹರೋಯ್‌ನಲ್ಲಿ ಸಿಪಿಎಂ ಹಾಗೂ ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ಕಾರ್ಯಕರ್ತರ ಮಧ್ಯೆ ಸೋಮವಾರ ಎರಡು ಮತಗಟ್ಟೆಗಳ ಬಳಿ ನಡೆದ ಮಾರಾಮಾರಿಯಲ್ಲಿ13 ಮಂದಿ ಗಾಯಗೊಂಡಿದ್ದಾರೆ.ಹರೋಯ್‌ನ ಬ್ರಹ್ಮನ್‌ಚಕ್‌ ಪ್ರದೇ­ಶದ ಎರಡು ಮತಗಟ್ಟೆಗಳ ಬಳಿ ಎದು­ರಾಳಿ ಪಕ್ಷದ ಬೆಂಬಲಿಗರು ಕಲ್ಲು ತೂರಾಟ ನಡೆಸಿದರು.

ಕೂಡಲೇ  ಉಪ ವಿಭಾ­ಗೀಯ ಪೊಲೀಸ್‌ ಅಧಿಕಾರಿ (ಎಸ್‌ಡಿ­ಪಿಒ) ಸ್ಥಳಕ್ಕೆ ಧಾವಿಸಿದರು. ಸಿಆರ್‌­ಪಿಎಫ್‌ ಸಿಬ್ಬಂದಿಯನ್ನು ಸ್ಥಳದಲ್ಲಿ ನಿಯೋಜಿಸಲಾಗಿದೆ. ಗಾಯಾಳುಗಳಿಗೆ ಹರೋಯ್‌ನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಯಿತು.ಬಾಂಬ್‌ ಎಸೆತ: ಕೋಲ್ಕತ್ತದ ಮಾಜಿ ಉಪ ಮೇಯರ್‌ ಮೀನಾ ದೇವಿ ಪುರೋ­ಹಿತ್‌  ಅವರ ಕಾರಿನ ಮೇಲೆ  ಅಪರಿಚಿತ ದುಷ್ಕ­ರ್ಮಿ­ಗಳು ಎರಡು ಬಾಂಬ್‌ಗಳನ್ನು ಎಸೆದ ಘಟನೆ ಬಾವ್‌ಬಜಾರ್‌ನಲ್ಲಿ ನಡೆ­ದಿದೆ. ಬಾಂಬ್‌ ಗುರಿ ತಪ್ಪಿದ್ದರಿಂದ ಯಾರಿಗೂ ಹಾನಿಯಾಗಿಲ್ಲ.

ತನಿಖೆ ನಡೆಯುತ್ತಿದ್ದು, ಆರೋಪಿಗಳಿ­ಗಾಗಿ ಹುಟುಕಾಟ ನಡೆದಿದೆ.ಕೋಲ್ಕತ್ತ ದಕ್ಷಿಣ ಕ್ಷೇತ್ರದಲ್ಲಿ ದುಷ್ಕ­ರ್ಮಿ­ಗಳು ಸಿಪಿಎಂ ಅಭ್ಯರ್ಥಿ ನಂದಿನಿ ಮುಖರ್ಜಿ ಕಾರು ತಡೆದು ಅವಾಚ್ಯ ಶಬ್ದ­ಗಳಿಂದ ನಿಂದಿಸಿದರು. ಕೂಡಲೇ ನಂದಿನಿ ಪೊಲೀ­ಸರನ್ನು ಕರೆಸಿದರು. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇದು ಟಿಎಂಸಿ ಕಿತಾಪತಿ ಎಂದು ಸಿಪಿಎಂ ದೂರಿದೆ. ಆದರೆ ಇದನ್ನು ಟಿಎಂಸಿ ಅಲ್ಲಗಳೆದಿದೆ. ಜೊಯ್‌ನಗರ ಕ್ಷೇತ್ರ­ದಲ್ಲಿ ಆರ್‌ಎಸ್‌ಪಿ ಮತಗಟ್ಟೆ ಏಜೆಂಟ್‌ ಒಬ್ಬರನ್ನು ಟಿಎಂಸಿ ಕಾರ್ಯ­ಕರ್ತ­ನೊಬ್ಬ ಚಾಕುವಿನಿಂದ ಇರಿದ ಘಟನೆ ನಡೆದಿದೆ.  ಆದರೆ ಟಿಎಂಸಿ ಈ ಪ್ರಕರಣದಲ್ಲಿ ತನ್ನ ಪಾತ್ರ ಇಲ್ಲ ಎಂದು ಸ್ಪಷ್ಟಪಡಿಸಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.