ಮಂಡ್ಯ: ನಗರದಲ್ಲಿ ರೈಲ್ವೆ ನಿಲ್ದಾಣಕ್ಕೆ ಹೊಂದಿಕೊಂಡಂತೆ, ಅಲ್ಲಿನ ಸಿಬ್ಬಂದಿಗೆ ನಿರ್ಮಿಸಿರುವ ವಸತಿ ಗೃಹಗಳು ಈಗ ಪಾಳು ಬಿದ್ದಿದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ್ದ ಗೃಹಗಳು ಅನ್ಯ ಕಾರಣಗಳಿಗೆ ಬಳಕೆ ಯಾಗುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ.

ವಸತಿಗೃಹಗಳು ನಿರ್ಮಾಣ ಗೊಂಡು 2-3 ವರ್ಷಗಳೇ ಕಳೆ ದಿದ್ದರೂ ವಾಸಿಸಲು ಸಿಬ್ಬಂದಿ ಮುಂದಾಗುತ್ತಿಲ್ಲ. ಹೀಗಾಗಿ, ಮದ್ಯ ವಸನಿಗಳು ಸೇರಿದಂತೆ ಅನ್ಯ ಉದ್ದೇಶ ಗಳಿಗೆ ಇವು ಹೇಳಿ ಮಾಡಿಸಿದ ತಾಣವಾಗಿದೆ.

ರೈಲ್ವೆ ಕ್ವಾಟ್ರರ್ಸ್ನಲ್ಲಿ ಒಟ್ಟು 10 ಮನೆಗಳು ಖಾಲಿ ಇದ್ದು, ಇಡೀ ಪರಿ ಸರ ಗಲೀಜಿನಿಂದ ಕೂಡಿದೆ. ಮನೆ ಬಳ ಸದಿದ್ದರೂ, ಚೊಕ್ಕವಾಗಿಟ್ಟು ಕೊಂಡು, ಸಂರಕ್ಷಿಸಿಕೊಳ್ಳಲು ರೈಲ್ವೆ ಇಲಾಖೆ ಅಧಿಕಾರಿಗಳೂ ಮನಸ್ಸು ಮಾಡಿಲ್ಲ. ಪರಿಣಾಮ, ಮನೆ ಕಟ್ಟಿ ಅನೈತಿಕ ಚಟುವಟಿಕೆಗಳಿಗೆ ಬಿಟ್ಟುಕೊಟ್ಟಂತಿದೆ.

ರೈಲ್ವೆ ಕೆಲಸಕ್ಕೆ ಬರುವ ಬಹುತೇಕ ಸಿಬ್ಬಂದಿ ಮೈಸೂರು, ಬೆಂಗಳೂರಿ ನಿಂದ ಬರುತ್ತಾರೆ. ನಗರದಲ್ಲಿ ಇರುವವರೂ ಬೇರೆಡೆ ಮನೆ ಮಾಡಿದ್ದಾರೆ. ಮೂಲ ವೇತನಕ್ಕೆ ಪೂರಕವಾಗಿ ಸರ್ಕಾರವೇ ಮನೆ ಬಾಡಿಗೆ ಭತ್ಯೆ ನೀಡುವಾಗ ಇಲ್ಲಿದ್ದು ಸಂಕಷ್ಟ ಏಕೆ ಎದುರಿಸಬೇಕು ಎನ್ನುವುದೂ ವಾಸಿಸದಿರಲು ಕಾರಣ.

ಅದಷ್ಟೇ ಅಲ್ಲ, ಕುಡಿಯುವ ನೀರು, ಶುಚ್ಚಿತ್ವ, ಬೀದಿ ದೀಪ ನಿರ್ವಹ ಣೆಯೂ ಅಷ್ಟಕಷ್ಟೆ. ಸ್ವಂತ ಮನೆ ಹೊಂದಿರುವುದು, ಮಕ್ಕಳ ವಿದ್ಯಾಭ್ಯಾ ಸದ ದೃಷ್ಟಿ, ರೈಲಿನ ಶಬ್ದ, ಪುಂಡರ ಕಿರಿ ಕಿರಿಯೂ ಸಿಬ್ಬಂದಿ ಮನೆ ನಿರಾಕರಿಸಲು ಇರುವ ಇನ್ನಷ್ಟು ಕಾರಣಗಳೆನ್ನಬಹುದು.

`ಬೀದಿ ದೀಪ ಹದಗೆಟ್ಟು, ವಾರ ಕಳೆದರೂ, ಸರಿಪಡಿಸಿಲ್ಲ. ಕುಡಿವ ನೀರು ಚೆನ್ನಾಗಿ ಇಲ್ಲ. ಸಂಜೆಯ ನಂತರ, ಪೇಟೆ ಬೀದಿಗೆ ಹೊಂದಿಕೊಂಡಂತಿ ರುವ, ಕ್ವಾಟ್ರರ್ಸ್ ನ ಒಂದು ಬದಿ ಯಲ್ಲಿ ಪುಂಡ-ಪೊಕರಿಗಳ ಹಾವಳಿ ಹೆಚ್ಚು. ಹೀಗಾಗಿ, ಆ ಮಾರ್ಗದಲ್ಲಿ ಓಡಾಡುವುದೇ ಇಲ್ಲ~ ಎನ್ನುತ್ತಾರೆ ಅಲ್ಲಿನ ನಿವಾಸಿ ನಾಗರತ್ನ.

ಕ್ವಾಟರ್ಸ್ನಲ್ಲಿ ಉಳಿದಿರುವವರು ಕೆಳ ಹಂತದ ನೌಕರರೇ. ಅಲ್ಲಿರುವ ಸೌಲಭ್ಯಗಳಲ್ಲೇ ದಿನದೂಡುತ್ತಿದ್ದಾರೆ. ಸೌಲಭ್ಯಕ್ಕಿಂತಲೂ ಸುರಕ್ಷತೆಯ ಬಗೆಗೆ ಅಲ್ಲಿನ ಬಹುತೇಕ ಮಹಿಳೆಯರು ಆತಂಕ ವ್ಯಕ್ತಪಡಿಸುತ್ತಾರೆ.

ಉಢಾಪೆ ಉತ್ತರ: ಮನೆಗಳ ಬಳಕೆ, ಸ್ವಚ್ಛತೆ ಕುರಿತ ಎನ್ನುವ ಪ್ರಶ್ನೆಗೆ, ಭಾನುವಾರ ಇನ್ಚಾರ್ಜ್ ನಲ್ಲಿದ್ದ ರೈಲ್ವೆ ಅಧಿಕಾರಿ ತೇಜಸ್ವಿ ಅವರದು ಉಢಾಪೆ, ಉದ್ಧಟತನ ಉತ್ತರ. `ನಾವ್ಯಾರೂ ಇಲ್ಲ ಅದಕ್ಕೆ ಬಳಕೆ ಆಗುತ್ತಿಲ್ಲ. ಇಲ್ಲೇ ಉಳಿದುಕೊಳ್ಳಬೇಕಂತೇನು? ನಮ್ಮಿಷ್ಟ. ಅಯ್ಯೋ ಹೇಗೋ ಇರುತ್ತದೆ ಬಿಡಿ. ಎಲ್ಲವನ್ನೂ ನೋಡೊಕಾಗುತ್ತಾ~.

ಹೌದು, ಅಧಿಕಾರಿಗಳಿಗೆ ಪುರುಸೊತ್ತು ಇಲ್ಲ. ಇಲಾಖೆ ಸ್ವತ್ತನ್ನು ಜೋಪಾನ ಮಾಡಲು ಆಗುತ್ತಿಲ್ಲ. ಹೀಗಾಗಿಯೇ, ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ವಸತಿ ಗೃಹಗಳು ಈಗ ಪಾಳು ಬಿದ್ದಿವೆ. ಮನೆಗಳ ರಕ್ಷಣೆ ಹೊಣೆ ಯಾರದು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.