ಹಾಸನ: ಹಾನಸದ ಕಲಾಭವನ ಈಗ `ಹಾಸನಾಂಬಾ ಕಲಾಕ್ಷೇತ್ರ~ವಾಗಿದೆ. ಒಳಗಿನ ಛಾವಣಿ , ಮೈಕ್ ವ್ಯವಸ್ಥೆ, ವೇದಿಕೆಯ ಅಲಂಕಾರ... ಹೀಗೆ ಆಸನ ವ್ಯವಸ್ಥೆಯೊಂದನ್ನು ಬಿಟ್ಟು ಉಳಿದೆಲ್ಲವೂ ಹೊಸ ರೂಪ ಪಡೆದಿವೆ. ಹಿಂದೆ ದೊಡ್ಡ ಗೋದಾಮಿನಂತೆ ಕಾಣುತ್ತಿದ್ದ `ಕಲಾಭವನ~ ಈಗ ಕಲಾತ್ಮಕ ಸ್ಪರ್ಶ ಪಡೆದಿದೆ.

ಆದರೆ, ಅದರೊಳಗೆ ವರ್ಷಗಳಿಂದ ಬದಲಾಗದೇ ಇರುವ ಎಂದರೆ ಅದು `ಕನ್ನಡ ಮತ್ತು ಸಂಸ್ಕೃತಿ ಇಲಾಖೆ~ಯ ಕಚೇರಿ. ನಾಡು-ನುಡಿ, ನೆಲ- ಜಲದ ಮಾತನಾಡು ವವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯನ್ನು ಮರೆತಂತಿದೆ. ವಾಸ್ತವವಾಗಿ ಕಲಾ ಕ್ಷೇತ್ರದ ನಿರ್ವಹಣೆ ಮಾಡುವ ಹೊಣೆ ಈ ಸಂಸ್ಕೃತಿ ಇಲಾಖೆಯದ್ದು. ಆದರೆ ಅದು ತನ್ನನ್ನು ತಾನೇ ಸಂಭಾಳಿಸಿಕೊಳ್ಳಲಾರದ ಸ್ಥಿತಿಯ್ಲ್ಲಲಿದೆ.

ಕಲಾ ಕ್ಷೇತ್ರದ ಆವರಣದಲ್ಲೇ ಇಲಾಖೆಯ ಕಚೇರಿ ಇದ್ದರೂ, ಅಂಥ ಒಂದು ಕಚೇರಿ ಅಲ್ಲಿದೆ ಎಂಬ ಬಗ್ಗೆ ಕುರುಹು ಹೊರಗೆ ಕಾಣುತ್ತಿಲ್ಲ. ಇತರ ಇಲಾಖೆಗಳಿಗಾದರೆ ದೊಡ್ಡ ಫಲಕವಾ ದರೂ ಇರುತ್ತದೆ. ಇಲ್ಲಿ ಒಳಗೆ ಹೋಗಿ ನೋಡಿದರಷ್ಟೇ ಕಚೇರಿ ಗೋಚರಿಸುತ್ತದೆ. ಜಾಗದ ಸಮಸ್ಯೆಯೋ ಅಥವಾ ನಿರ್ವಹಣೆಯ ಕೊರತೆಯೋ ಕಚೇರಿ ಅಸ್ತವ್ಯಸ್ತವಾಗಿರುವಂತೆ ಕಾಣುತ್ತಿದೆ.

`ಇಲಾಖೆಯಲ್ಲಿ ಹಲವು ವರ್ಷಗಳಿಂದ ಸಿಬ್ಬಂದಿ ಕೊರತೆ ಇದೆ. ಒಬ್ಬ ದ್ವಿತೀಯ ದರ್ಜೆ ಸಹಾಯಕ ಹಾಗೂ ಒಬ್ಬ ಜವಾನ ಹುದ್ದೆಗಳು ಹಲವು ವರ್ಷಗಳಿಂದ ಖಾಲಿ ಇವೆ. ಇಲಾಖೆಯಲ್ಲಿದ್ದ ಒಬ್ಬ ಎಫ್ಡಿಸಿ ಕೆಲಸ ಮಾಡುತ್ತಿರಲಿಲ್ಲ. ಈ ಕಾರಣಕ್ಕಾಗಿ ಬೇರೆಡೆಗೆ ವರ್ಗಾಯಿಸಲಾಗಿದೆ. ಈಗ ಅವನ ಕೆಲಸ ಗಳನ್ನೂ ನಾನೇ ಮಾಡಬೇಕಾಗುತ್ತಿದೆ~ ಎಂದು ಫೈಲ್ಗಳ ರಾಶಿ ಮಧ್ಯದಲ್ಲಿ ಕುಳಿತ ಉಪ ನಿರ್ದೇಶಕ ದಾಮೋದರ್ ನುಡಿಯುತ್ತಾರೆ.

ರಾಜ್ಯದಲ್ಲಿ ಹಲವು ಅಕಾಡೆಮಿಗಳು ಕಾರ್ಯ ನಿರ್ವಹಿಸುತ್ತಿವೆ. ಸಾಮಾನ್ಯವಾಗಿ ಪ್ರತಿ ಅಕಾಡೆಮಿಯೂ ಪುಸ್ತಕ ಪ್ರಕಾಶನ ಕಾರ್ಯ ಮಾಡುತ್ತದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದಕ್ಕೆ ಹೊರತಲ್ಲ. ಕನ್ನಡದ ಸಾವಿರಾರು ಅಮೂಲ್ಯ ಕೃತಿಗಳನ್ನು ಪ್ರಕಟಿಸಿ ರಿಯಾಯಿತಿ ಬೆಲೆಯಲ್ಲಿ ಒದಗಿಸುವ ಕೆಲಸ ಮಾಡುತ್ತಿದೆ.

ಪಂಪ ಭಾರತ, ರನ್ನನ ಗದಾಯುದ್ಧದಿಂದ ಆರಂಭಿಸಿ ಜಿಎಸ್ಎಸ್ ಅವರ ಸಮಗ್ರ ಕಾವ್ಯದ ವರೆಗೆ ನೂರಾರು ಪುಸ್ತಕಗಳು ಹಾಸನದಲ್ಲಿವೆ. ಆದರೆ, ಇಲ್ಲಿ ಪುಸ್ತಕಗಳು ಲಭಿಸುತ್ತವೆ ಎಂಬುದು ಜನರಿಗೆ ಗೊತ್ತಿರುವಂತೆ ಕಾಣದು. ಕಲಾ ಕ್ಷೇತ್ರದ ಆವರಣದಲ್ಲಿ ಅಂಥ ಒಂದು ಫಲಕವೂ ಇಲ್ಲ.

ಸರ್ಕಾರಿ ಕಾರ್ಯಕ್ರಮಗಳು ನಡೆಯುವಲ್ಲಿ ಪುಸ್ತಕ ಪ್ರದರ್ಶನವನ್ನೇಕೆ ಮಾಡಬಾರದು ಎಂದು ಸಲಹೆ ನೀಡಿದರೆ, `ಮೊದಲು ಆ ಕೆಲಸ ಮಾಡುತ್ತಿದ್ದೆವು. ಆದರೆ ಸಿಬ್ಬಂದಿ ಕೊರತೆ ಯಿಂದ ಈಗ ಸಾಧ್ಯವಾಗುತ್ತಿಲ್ಲ. ಪ್ರದರ್ಶನಕ್ಕೆ ಹೋದಾಗ ಪುಸ್ತಕ ಕಾಣೆಯಾದರೆ ಅದರ ಹೊಣೆ ನಮ್ಮ ಮೇಲೇ ಬರುತ್ತದೆ~ಎಂದು ಸಿಬ್ಬಂದಿ ನುಡಿಯುತ್ತಾರೆ.

ಕನಿಷ್ಠ ಕಲಾಕ್ಷೇತ್ರದ ಆವರಣದಲ್ಲಾದರೂ ಒಂದೆಡೆ ಶಾಶ್ವತ ಪುಸ್ತಕಗಳ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಬೇಕು. ಕಾರ್ಯಕ್ರಮಕ್ಕೆ ಬರುವವರು ಅವುಗಳನ್ನು ವೀಕ್ಷಿಸಿ ಬೇಕಿದ್ದಲ್ಲಿ ಖರೀದಿಸಬಹುದು. ಆದರೆ ಈಗ ರಾಶಿ ರಾಶಿ ಪುಸ್ತಕಗಳು ದೂಳು ತಿನ್ನುತ್ತಿವೆ. ಈಚೆಗೆ ಕಲಾಕ್ಷೇತ್ರದ ದುರಸ್ತಿ ಮಾಡುವಾಗಿ ಪುಸ್ತಕ ಇಟ್ಟಿದ್ದ ಕೊಠಡಿಯಲ್ಲೂ ಗೋಡೆಯನ್ನು ಒಡೆದು, ಕೊಠಡಿಗೆ ಸುಣ್ಣ ಬಣ್ಣ ಬಳಿದಿದ್ದಾರೆ.

ಇದಾದ ನಂತರ ಪುಸ್ತಕಗಳನ್ನು ವ್ಯವಸ್ಥಿತವಾಗಿ ಜೋಡಿಸುವ ಕಾರ್ಯ ಮಾಡಿಲ್ಲ. ಈಗ ಲಕ್ಷಾಂತರ ರೂಪಾಯಿಯ ಪುಸ್ತಕಗಳು ದೂಳು ತಿನ್ನುತ್ತ ನೆಲದ ಮೇಲೆ ಬಿದ್ದಿವೆ. `ಇನ್ನು ಇದನ್ನು ಸರಿಯಾಗಿ ಜೋಡಿಸಲು ಕನಿಷ್ಠ 15-20 ದಿನಗಳಾದರೂ ಬೇಕು~ ಎಂದು ನುಡಿಯುತ್ತಾರೆ.

2009-10ನೇ ಸಾಲಿನಲ್ಲಿ ಸುಮಾರು 37 ಸಾವಿರ ರೂಪಾಯಿ ಪುಸ್ತಕಗಳು ಮಾರಾಟ ವಾಗಿವೆ. ಈ ವರ್ಷ ಅದು 17ಸಾವಿರ ರೂಪಾಯಿಯ ಆಸುಪಾಸಿನಲ್ಲಿದೆ. ಕಾಲೇಜು ಗ್ರಂಥಾಲಯದವರು, ಉಪನ್ಯಾಸಕರು ಮತ್ತು ಕನ್ನಡ ವಿಭಾಗದ ವಿದ್ಯಾರ್ಥಿಗಳೇ ಇಲ್ಲಿಂದ ಪುಸ್ತಕ ಖರೀದಿಸುತ್ತಾರೆ. ಜನಸಾಮಾನ್ಯರು ಬರುವುದೇ ವಿರಳ. ಇಲ್ಲಿ ಪುಸ್ತಕಗಳು ಲಭ್ಯವಾಗುತ್ತವೆ ಎಂಬುದು ಹೆಚ್ಚಿನವರಿಗೆ ತಿಳಿಯದಿರುವುದು ಇದಕ್ಕೆ ಕಾರಣ.

ಪುಸ್ತಕ ಪ್ರದರ್ಶನ ಹಾಗೂ ಮಾರಾಟ ವ್ಯವಸ್ಥೆಯನ್ನು ಮೂರನೇ ಮಹಡಿಯಲ್ಲಿ ಮಾಡಿದ್ದಾರೆ. ಓದುವವರೇ ಕಡಿಮೆಯಾಗು ತ್ತಿರುವ ಇಂದಿನ ದಿನಗಳಲ್ಲಿ ಮೂರು ಮಹಡಿ ಹತ್ತಿ ಪುಸ್ತಕ ಪ್ರದರ್ಶನ ನೋಡಲು ಬರುತ್ತಾರೆಯೇ? ಎಂಬ ಪ್ರಶ್ನೆ ಉಳಿದು ಕೊಳ್ಳುತ್ತದೆ. ನೆಲಮಹಡಿಯಲ್ಲಿರುವ ಇಲಾಖೆಯ ಕಚೇರಿಯ ಸುತ್ತ ಪುಸ್ತಕಗಳ ಪ್ರದರ್ಶನದ ವ್ಯವಸ್ಥೆ ಮಾಡಿ ಜನರನ್ನು ಆಕರ್ಷಿಸಿದರೆ ರಿಯಾಯಿತಿ ದರದಲ್ಲಿ ಕನ್ನಡದ ಮೌಲಿಕ ಕೃತಿಗಳನ್ನು ಜನರಿಗೆ ಒದಗಿಸಬೇಕೆಂಬ ಇಲಾಖೆಯ ಕನಸು ನನಸಾಗಬಹುದು.

ಕಲಾಭವನದಲ್ಲಿ ಕಸಗುಡಿಸುವವರೇ ಇಲ್ಲ. ಹೊರಗುತ್ತಿಗೆ ಆಧಾರದಲ್ಲಿ ಐದು ಮಂದಿ ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ನಿಗದಿತ ಕನಿಷ್ಠ ದಿನಗೂಲಿ ನೀಡುತ್ತಿಲ್ಲ. ಇಲಾಖೆ ಮಾಸಿಕ ಕೇವಲ ಮೂರು ಸಾವಿರ ರೂಪಾಯಿ ಮಾತ್ರ ನೀಡಿ ಇವರಿಂದ ಕೆಲಸ ಮಾಡಿಸುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.