ನವದೆಹಲಿ: ಭಾರತದ ಅನುಭವಿ ಆಟಗಾರ ಅಭಯ್ ಸಿಂಗ್ ಅವರು ಯುಎಸ್ ಓಪನ್ ಸ್ಕ್ವಾಷ್ ಟೂರ್ನಿಯಲ್ಲಿ ಸೋಮವಾರ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಆದರೆ, ರಮಿತ್ ಟಂಡನ್ ಅವರು ಸೋಲಿನೊಂದಿಗೆ ನಿರ್ಗಮಿಸಿದರು.

27 ವರ್ಷ ವಯಸ್ಸಿನ ಅಭಯ್ ಅವರು 16ರ ಘಟ್ಟದ ಪಂದ್ಯದಲ್ಲಿ 3–2ರಿಂದ (11–8, 4–11, 4–11, 11–6, 11–5) ಈಜಿಪ್ಟ್ನ ಮೊಹಮ್ಮದ್ ಎಲ್ಶೆರ್ಬಿನಿ ಅವರನ್ನು ಮಣಿಸಿದರು.

62 ನಿಮಿಷ ನಡೆದ ಪಂದ್ಯದಲ್ಲಿ ಭಾರತದ ಆಟಗಾರ ಎಲ್ಶೆರ್ಬಿನಿ ಅವರ ಪ್ರಬಲ ಪೈಪೋಟಿಯನ್ನು ಮೆಟ್ಟಿನಿಂತರು. ಏಷ್ಯನ್ ಗೇಮ್ಸ್ ಟೂರ್ನಿಗಳಲ್ಲಿ ಹಲವು ಬಾರಿ ಪದಕ ಗೆದ್ದಿರುವ ಅಭಯ್ ಅವರು ತಮ್ಮ ಮುಂದಿನ ಪಂದ್ಯದಲ್ಲಿ ಮೂರನೇ ಶ್ರೇಯಾಂಕದ ಜೋಲ್ ಮಾಕಿನ್ ವಿರುದ್ಧ ಸೆಣಸಲಿದ್ದಾರೆ.

ಆದರೆ, ರಮಿತ್ ಅವರು 3–0ಯಿಂದ (5–11, 9–11, 7–11) ನ್ಯೂಜಿಲೆಂಡ್ನ ಪೌಲ್ ಕಾಲ್ ಎದುರು ಪರಾಭವಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.