ಗುವಾಹಟಿ: ಮಿಥುನ್ ಮಂಜುನಾಥ್ ಮತ್ತು ಸಂಸ್ಕಾರ್ ಸಾರಸ್ವತ್ ಅವರು ಶನಿವಾರ ಗುವಾಹಟಿ ಮಾಸ್ಟರ್ಸ್ ಸೂಪರ್ 100 ಬ್ಯಾಡ್ಮಿಂಟನ್ ಟೂರ್ನಿ ಪುರುಷರ ಸಿಂಗಲ್ಸ್ನಲ್ಲಿ ಫೈನಲ್ ತಲುಪಿದ್ದಾರೆ. ಇವರಲ್ಲಿ ಯಾರೇ ಗೆದ್ದರೂ ಭಾರತಕ್ಕೆ ಒಂದು ಪ್ರಶಸ್ತಿ ಖಚಿತವಾಗಿದೆ. ಉದಯೋನ್ಮುಖ ತಾರೆ ತನ್ವಿ ಶರ್ಮಾ ಅವರೂ ಮಹಿಳೆಯರ ಸಿಂಗಲ್ಸ್ನಲ್ಲಿ ಪ್ರಶಸ್ತಿ ಸುತ್ತು ತಲುಪಿದ್ದಾರೆ.

ಕರ್ನಾಟಕದ ಮಿಥುನ್ ಸೆಮಿಫೈನಲ್ನಲ್ಲಿ 22-20, 21-8ರಿಂದ ಸ್ವದೇಶದ ತುಷಾರ್ ಸುವೀರ್ ಅವರನ್ನು ಸೋಲಿಸಿದರು. ವಿಶ್ವ ಕ್ರಮಾಂಕದಲ್ಲಿ 72ನೇ ಸ್ಥಾನದಲ್ಲಿರುವ 27 ವರ್ಷದ ಮಿಥುನ್ ಅವರಿಗೆ ಮೊದಲ ಗೇಮ್ನಲ್ಲಿ ತುಷಾರ್ ಅವರಿಂದ ಪ್ರಬಲ ಪೈಪೋಟಿ ಎದುರಾಯಿತು. ಎರಡನೇ ಗೇಮ್ ಅನ್ನು ಮಿಥುನ್ ನಿರಾಯಾಸವಾಗಿ ಗೆದ್ದರು.

ಕಳೆದ ವರ್ಷ ಬೆಂಗಳೂರಿನಲ್ಲಿ ಅರ್ಶ್ ಮೊಹಮ್ಮದ್ ಜೊತೆಗೂಡಿ ಚೊಚ್ಚಲ ಸೀನಿಯರ್ ರಾಷ್ಟ್ರೀಯ ಡಬಲ್ಸ್ ಪ್ರಶಸ್ತಿ ಗೆದ್ದಿದ್ದ ಸಾರಸ್ವತ್ ಅವರು ಮತ್ತೊಂದು ಸೆಮಿಫೈನಲ್ನಲ್ಲಿ 21-19, 21-9ರಿಂದ ಇಂಡೊನೇಷ್ಯಾದ ಡೆಂಡಿ ಟ್ರಿಯಾನ್ಸ್ಯಾ ಅವರನ್ನು ಸೋಲಿಸಿದರು.

ವಿಶ್ವ ಜೂನಿಯರ್ ಚಾಂಪಿಯನ್ಷಿಪ್ನ ಬೆಳ್ಳಿ ಪದಕ ವಿಜೇತೆ ತನ್ವಿ ಮಹಿಳಾ ಸಿಂಗಲ್ಸ್ನಲ್ಲಿ ತಮ್ಮ ಅದ್ಭುತ ಓಟವನ್ನು ಮುಂದುವರಿಸಿದರು. 42 ನಿಮಿಷಗಳ ಸೆಮಿಫೈನಲ್ ಪಂದ್ಯದಲ್ಲಿ ಅವರು 21-18, 21-16ರಿಂದ ಮೂರನೇ ಶ್ರೇಯಾಂಕದ ಹಿನಾ ಅಕೇಚಿ (ಜಪಾನ್) ಅವರನ್ನು ಹಿಮ್ಮೆಟ್ಟಿಸಿದರು.

ಕಳೆದ ವಾರ ಸೈಯದ್ ಮೋದಿ ಅಂತರರಾಷ್ಟ್ರೀಯ ಸೂಪರ್ 300 ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದ ಪಂಜಾಬ್ನ 16 ವರ್ಷದ ಆಟಗಾರ್ತಿ ಫೈನಲ್ನಲ್ಲಿ ತೈವಾನ್ನ ತುಂಗ್ ಸಿಯೊ ಟಾಂಗ್ ಅವರನ್ನು ಎದುರಿಸಲಿದ್ದಾರೆ.

ಕಳೆದ ವರ್ಷ ಒಡಿಶಾ ಮಾಸ್ಟರ್ಸ್ ಫೈನಲ್ ತಲುಪಿದ್ದ ತನ್ವಿ ಅವರು ಹಾಲಿ ಋತುವಿನಲ್ಲಿ ಯುಎಸ್ ಓಪನ್ ಸೂಪರ್ 300 ಮತ್ತು ವಿಶ್ವ ಜೂನಿಯರ್ ಚಾಂಪಿಯನ್ಷಿಪ್ನಲ್ಲಿ ರನ್ನರ್ ಅಪ್ ಆಗಿದ್ದಾರೆ. ಅವರು ಚೊಚ್ಚಲ ಸೂಪರ್ 100 ಪ್ರಶಸ್ತಿಯನ್ನು ಎದುರು ನೋಡುತ್ತಿದ್ದಾರೆ.

ಇದಕ್ಕೂ ಮುನ್ನ ಸ್ಥಳೀಯ ನೆಚ್ಚಿನ ಆಟಗಾರ್ತಿ ಅಶ್ಮಿತಾ ಚಾಲಿಹಾ ಸೆಮಿಫೈನಲ್ನಲ್ಲಿ ನಿರಾಸೆ ಮೂಡಿಸಿದರು. ಮೊದಲ ಗೇಮ್ನಲ್ಲಿ ಮೇಲುಗೈ ಸಾಧಿಸಿದ್ದ ಅಶ್ಮಿತಾ 21-12, 17-21, 14-21ರಿಂದ ಆರನೇ ಶ್ರೇಯಾಂಕದ ತುಂಗ್ ಅವರಿಗೆ ಸೋತರು.

ಪುರುಷರ ಡಬಲ್ಸ್ನಲ್ಲಿ ಅಗ್ರ ಶ್ರೇಯಾಂಕದ ಪೃಥ್ವಿ ಕೃಷ್ಣಮೂರ್ತಿ ರಾಯ್ ಮತ್ತು ಸಾಯಿ ಪ್ರತೀಕ್ ಕೆ. ಜೋಡಿಯು 21-16, 22-20ರಿಂದ ಇಂಡೊನೇಷ್ಯಾದ ಅನ್ಸೆಲ್ಮಸ್ ಬ್ರೀಗಿಟ್ ಮತ್ತು ಪುಲುಂಗ್ ರಮಧಾನ್ ಅವರನ್ನು ಮಣಿಸಿ ಫೈನಲ್ಗೆ ಮುನ್ನಡೆಯಿತು.

ಮಹಿಳಾ ಡಬಲ್ಸ್ನಲ್ಲಿ ಭಾರತದ ಅಭಿಯಾನಕ್ಕೆ ಸೆಮಿಫೈನಲ್ನಲ್ಲಿ ತೆರೆಬಿತ್ತು. ಎಂಟನೇ ಶ್ರೇಯಾಂಕದ ಅಶ್ವಿನಿ ಭಟ್ ಕೆ. ಮತ್ತು ಶಿಖಾ ಗೌತಮ್ 14-21, 10-21 ಅಂತರದಲ್ಲಿ ಎರಡನೇ ಶ್ರೇಯಾಂಕದ ಮಲೇಷ್ಯಾದ ಓಂಗ್ ಕ್ಸಿನ್ ಯೀ ಮತ್ತು ಕಾರ್ಮೆನ್ ಟಿಂಗ್ ವಿರುದ್ಧ ಸೋತರು.

ಮಿಶ್ರ ಡಬಲ್ಸ್ ಸೆಮಿಫೈನಲ್ನಲ್ಲಿ ಥಾಯ್ಲೆಂಡ್ನ ಟನಾಡಾನ್ ಪುನ್ಪಾನಿಚ್ ಮತ್ತು ಫಂಗ್ಫಾ ಕೊರ್ಪ್ತಮ್ಮಕಿಟ್ ಜೋಡಿಯು 21-15, 19-21, 21-17ರಿಂದ ಅಗ್ರ ಶ್ರೇಯಾಂಕಿತ ಭಾರತದ ಜೋಡಿ ರೋಹನ್ ಕಪೂರ್ ಮತ್ತು ರುತ್ವಿಕಾ ಶಿವಾನಿ ಅವರಿಗೆ ಆಘಾತ ನೀಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.