ಶುಕ್ರವಾರ, ಜನವರಿ 24, 2020
21 °C

ಸಿಬ್ಬಂದಿ ಕೊರತೆ: ಜಿಲ್ಲಾ ಕೃಷಿ ತರಬೇತಿ ಕೇಂದ್ರ ಅನಾಥ

ಪ್ರಜಾವಾಣಿ ವಾರ್ತೆ/ಜಿ.ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ತರೀಕೆರೆ(ಲಿಂಗದಹಳ್ಳಿ): ತರೀಕೆರೆ ಸಮೀಪದ ಲಿಂಗದಹಳ್ಳಿ ಬಳಿ ಇರುವ ಜಿಲ್ಲಾ ಕೃಷಿ ತರಬೇತಿ ಕೇಂದ್ರ ಸುಸಜ್ಜಿತ ಕಟ್ಟಡ ಮತ್ತು ಅಗತ್ಯ  ಸೌಕರ್ಯ ಹೊಂದಿದ್ದರೂ ಸಿಬ್ಬಂದಿ ಕೊರತೆ ಯಿಂದಾಗಿ ಯೋಜನೆಗಳು ನೆನಗುದಿಗೆ ಬಿದ್ದಿವೆ ಎಂದು ರೈತರು ಆರೋಪಿಸಿದ್ದಾರೆ.ಕೃಷಿ ಅಭಿವೃದ್ಧಿಗೆ ರೈತರಿಗೆ ಇಲಾಖೆ ಮೂಲಕ ವಿವಿಧ ರೀತಿಯ  ತರಬೇತಿ ಕಾರ್ಯಾಗಾರಗಳನ್ನು ನಡೆಸುವ ಉದ್ದೇಶದಿಂದ ಜಿಲ್ಲಾ ಮಟ್ಟದ ಕೃಷಿ ತರಬೇತಿ ಕೇಂದ್ರ  ವಿಸ್ತಾರವಾದ ಜಾಗದಲ್ಲಿ ಸಕಲ ಸೌಲಭ್ಯಗಳೊಂದಿಗೆ ರೂಪುಗೊಂಡು ನೂರಾರು ತರಬೇತಿ, ಕಾರ್ಯಾಗಾರಗಳನ್ನು ನಡೆಸಿದ ಹೆಮ್ಮೆ  ಈ ಕೇಂದ್ರಕ್ಕೆ ಇದೆ.ಆದರೆ ಇತ್ತೀಚಿನ ವರ್ಷಗಳಲ್ಲಿ ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಕೇಂದ್ರ ರೈತರಿಗೆ ಸರಿಯಾದ ಸಮಯಕ್ಕೆ ಸೂಕ್ತ ಸಲಹೆ ಮಾರ್ಗದರ್ಶನ, ತರಬೇತಿ ನೀಡುವಲ್ಲಿ ಸಂಪೂರ್ಣ ವಿಫಲವಾ ಗಿರುವುದು ರೈತರ ಆತಂಕ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ. ವರ್ಷಕ್ಕೆ ಎರಡರಿಂದ ಮೂರು ಸಾವಿರ ರೈತರಿಗೆ, ರೈತ ಮಹಿಳೆಯರಿಗೆ ವಿವಿಧ ರೀತಿಯ ಕೃಷಿ ಮತ್ತು ಕೃಷಿ ಆಧಾರಿತ ಚಟುವಟಿಕೆಗಳಿಗೆ ತರಬೇತಿ ನೀಡುತ್ತಿದ್ದ ಕೇಂದ್ರ ಇಂದು  ಅನಾಥವಾಗಿದೆ ಎಂಬುದು ರೈತರ ಅಳಲು.ಕೇಂದ್ರಕ್ಕೆ ಅಗತ್ಯ ಇರುವ  ಒಟ್ಟು 22 ಹುದ್ದೆಗಳಲ್ಲಿ 14 ಹುದ್ದೆಗಳು ಖಾಲಿ ಬಿದ್ದಿವೆ. ಹಾಲಿ ಭರ್ತಿ ಇರುವ 8 ಹುದ್ದೆಗಳಲ್ಲಿ ಉಪನಿರ್ದೇಶಕರನ್ನು ಹೊರತು ಪಡಿಸಿ ಉಳಿದವರೆಲ್ಲ ತರಬೇತಿ ಕೇಂದ್ರದ ಆಡಳಿತಾತ್ಮಕ ಉಸ್ತುವಾರಿಯಲ್ಲಿರುವ ಗುಮಾಸ್ತ ಮತ್ತು ಡಿ ದರ್ಜೆ ನೌಕರರು ಮಾತ್ರ.ವರ್ಗಾವಣೆ ಮತ್ತು ಇನ್ನಿತರ ಕಾರಣಗಳಿಂದಾಗಿ ಖಾಲೀ ಇರುವ ತರಬೇತಿ ನೀಡುವಂತಹ  ಹುದ್ದೆಗಳನ್ನು ತುಂಬುವ ಆಸಕ್ತಿ ಸರ್ಕಾರಕ್ಕೆ ಇದ್ದಂತಿಲ್ಲ.ಈ ಕುರಿತಂತೆ ಹೆಸರು ಹೇಳಲು ಇಚ್ಚಿಸದ ನೌಕರರೊಬ್ಬರು ‘ಪ್ರಜಾ ವಾಣಿ’ಯೊಂದಿಗೆ ಮಾತನಾಡಿ, ’ ‘ಸಾರ್ ತರಬೇತಿ ಕೇಂದ್ರಕ್ಕೆ ಯಾವ ಅಧಿಕಾರಿಯೂ ಬರಲು ಇಚ್ಚಿಸುವುದಿಲ್ಲ. ಎಲ್ಲರೂ ಎಕ್ಸಿಕ್ಯೂಟೀವ್ ಕೆಲಸ ಇಚ್ಚೆ ಪಡುವ ಕಾರಣ ಬಂದ ಸ್ಪಲ್ಪ ದಿನಗಳ ಲ್ಲಿಯೇ ಏನಾದರೂ ನೆಪದಿಂದ ವರ್ಗಾ ವಣೆ ಇಲ್ಲವೇ ಬೇರೆ ಹುದ್ದೆಗಳಿಗೆ ಪ್ರಭಾವ ಬಳಸಿ ಬದಲಾಗುತ್ತಿದ್ದಾರೆ’ ಎನ್ನುತ್ತಾರೆ.ರೈತ ರಾಮಲಿಂಗಪ್ಪ ಮಾತನಾಡಿ, ಒಂದೂವರೆ ವರ್ಷಗಳಿಂದ ಯಾವ ಒಂದು ತರಬೇತಿಯೂ ಸಮರ್ಪಕವಾಗಿ ನಡೆದಿಲ್ಲ. ಜಿಲ್ಲೆಯ ರೈತರಿಗಾಗಿ ಇರುವ ತರಬೇತಿ ಕೇಂದ್ರ ಸಿಬ್ಬಂದಿ ಕೊರತೆ ಯಿಂದಾಗಿ ಯಾವ ಕಾರ್ಯವನ್ನು ಅನುಷ್ಠಾನಗೊಳಿಸಲು ಸಾಧ್ಯವಾ ಗುತ್ತಿಲ್ಲ.

ಕೇಂದ್ರದಲ್ಲಿ  ಇರುವ ಸಿಬ್ಬಂ ದಿಗೂ ಕೆಲಸವಿಲ್ಲದಂತಾಗಿ ಕಾಲ ಕಳೆ ಯುವ ಪರಿಸ್ಥಿತಿ ತಲೆದೂರಿದೆ ಎಂದು ಆಕ್ಷೇಪಿಸುತ್ತಾರೆ.ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನ ಹರಿಸಿ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡುವ ಮೂಲಕ ಕೇಂದ್ರ ರೈತರಿಗಾಗಿ ಸದಾ ಚಟುವಟಿಕೆಯಿಂದ ಇರುವಂತೆ  ಆಗಲಿ ಎಂಬುದು ಹಲವರ ಒತ್ತಾಸೆ

 

ಪ್ರತಿಕ್ರಿಯಿಸಿ (+)