ಬುಧವಾರ, ಮೇ 19, 2021
27 °C

ಸಿಮ್ ಮಾರಾಟಕ್ಕೆ ಮಾರ್ಗಸೂಚಿ: ಸುಪ್ರೀಂ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ದೂರವಾಣಿ ಕಂಪನಿಗಳು ಗ್ರಾಹಕರಿಗೆ ಸಿಮ್ ವಿತರಿಸುವುದಕ್ಕೂ ಮುನ್ನ ಅವರ ಗುರುತು-ವಿಳಾಸ ಖಚಿತಪಡಿಸಿಕೊಳ್ಳುವ ಸಂಬಂಧ ಸೂಕ್ತ ನಿಯಮ ರೂಪಿಸಲು ತಜ್ಞರನ್ನೊಳಗೊಂಡ ಜಂಟಿ ಸಮಿತಿ ರಚಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಸೂಚಿಸಿದೆ.ದೂರಸಂಪರ್ಕ ಇಲಾಖೆಯ ಕಾರ್ಯದರ್ಶಿ ನೇತೃತ್ವದಲ್ಲಿ ಐವರು ತಜ್ಞರ ಸಮಿತಿ ರಚಿಸಬೇಕು. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಮತ್ತು ದೂರಸಂಪರ್ಕ ಇಲಾಖೆಯ ತಲಾ ಇಬ್ಬರು ಅಧಿಕಾರಿಗಳನ್ನು ಸಮಿತಿಗೆ ನೇಮಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎಚ್.ಕಪಾಡಿಯ ನೇತೃತ್ವದ ನ್ಯಾಯಪೀಠ ಹೇಳಿದೆ.ಪ್ರೀಪೆಯ್ಡ ಸಿಮ್ ಮಾರಾಟ ಸಂಬಂಧ ಸೆಲ್ಯುಲರ್ ಕಂಪನಿಗಳಿಗೆ ಯಾವ ಮಾರ್ಗಸೂಚಿಗಳನ್ನು ಸೂಚಿಸಬೇಕು ಎಂಬ ಬಗ್ಗೆ ಮುಂದಿನ ಮೂರು ತಿಂಗಳೊಳಗೆ ಸಮಿತಿ ವರದಿ ಸಲ್ಲಿಸಬೇಕು ಎಂದೂ ತಿಳಿಸಿದೆ.ಅಭಿಷೇಕ್ ಗೋಯೆಂಕ ಎಂಬವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಪೀಠ, ಸಮಿತಿ ರಚನೆಗೆ ಸೂಚಿಸಿತು.ದೂರವಾಣಿ ಸೇವಾ ಸಂಸ್ಥೆಗಳು ಗ್ರಾಹಕರ ಗುರುತು-ವಿಳಾಸದ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸದೆಯೇ ಸಿಮ್ ಕಾರ್ಡ್ ವಿತರಿಸುತ್ತಿವೆ. ಇದು ಭಯೋತ್ಪಾದಕರೂ ನಕಲಿ ದಾಖಲೆ ಸಲ್ಲಿಸಿ ಸಿಮ್ ಖರೀದಿಸಲು  ಸಾಧ್ಯವಾಗಿಸಿದೆ. ಈ ಬಗ್ಗೆ  ಸೂಕ್ತ ನಿರ್ದೇಶನ ನೀಡಬೇಕೆಂದು ಎಂದು ಮನವಿ ಮಾಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.