ಭಾನುವಾರ, ಜೂನ್ 20, 2021
28 °C

ಸಿರವಾರ: ಅಭಿವೃದ್ಧಿಗೆ ಆದ್ಯತೆ-ಶಾಸಕರ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿರವಾರ (ಕವಿತಾಳ): ತಮ್ಮ ಅಧಿಕಾರ ಅವಧಿಯಲ್ಲಿ ಸಿರವಾರ ಪಟ್ಟಣದಲ್ಲಿ ಹೆಚ್ಚಿನ ಅಭಿವೃದ್ದಿ ಕೆಲಸಗಳನ್ನು ಕೈಗೊಳ್ಳಲು ಸಾಧ್ಯವಾಗಿಲ್ಲ ಮುಂದಿನ ದಿನಗಳಲ್ಲಿ ಮೂಲ ಸೌಕರ್ಯಗಳು ಸೇರಿದಂತೆ ಪಟ್ಟಣದ ಅಭಿವೃದ್ದಿಗೆ ಆದ್ಯತೆ ನೀಡುವುದಾಗಿ ಮಾಜಿ ಶಾಸಕ ಎನ್.ಎಸ್.ಬೋಸರಾಜು ಹೇಳಿದರು.ಪಟ್ಟಣದ ಈಶ್ವರ ದೇವಸ್ಥಾನದಲ್ಲಿ ಕಲ್ಯಾಣ ಮಂಟಪಕ್ಕೆ ಭೂಮಿಪೂಜೆ ಮಾಡಿ ಅವರು ಮಾತನಾಡಿದರು. ಶಾಸಕ ಜಿ.ಹಂಪಯ್ಯ ನಾಯಕ, ವೀರಶೈವ ಸಮಾಜದ ಕಲ್ಯಾಣ ಮಂಟಪಕ್ಕೆ ಹೆಚ್‌ಕೆಡಿಬಿ ಅನುದಾನದಡಿ ರೂ.10ಲಕ್ಷ ನೀಡಲಾಗಿದೆ ಎಂದರು. ಎಲ್ಲಾ ಜಾತಿ ವರ್ಗಗಳ ಅಭಿವೃದ್ದಿಗೆ ಶ್ರಮಿಸುವ ಭರವಸೆಯನ್ನು ಶಾಸಕರು ನೀಡಿದರು.

 

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಅಸ್ಲಾಂಪಾಶಾ ಮಾತನಾಡಿದರು.  ಸಿದ್ರಾಮಯ್ಯಸ್ವಾಮಿ, ದಾನನಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಸೂರಿ ದುರುಗಣ್ಣ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯ್ಯನಗೌಡ ಜಂಬಲದಿನ್ನಿ, ವೀರಶೈವ ಸಮಾಜದ ಅಧ್ಯಕ್ಷ ಅಯ್ಯನಗೌಡ ಯರ‌್ರಡ್ಡಿ, ಡಾ.ಬಸವರಾಜಪ್ಪ ನಂದರೆಡ್ಡಿ, ಟಿ.ಆರ್.ಪಾಟೀಲ್, ಚಂದ್ರು ಕಳಸ, ಪೀರ್‌ಸಾಬ್, ಹಸೇನಅಲೀ, ಮೌಲಾಸಾಬ್       ವರ್ಚ್‌ಸ್, ಕೃಷ್ಣಾ ನಾಯಕ, ನಿಂಬೆಯ್ಯಸ್ವಾಮಿ, ಕುಂಬಾರ ಬಸವರಾಜ, ಶಿವಶರಣ ಅರಿಕೇರಿ, ಅಚ್ಚಾ ಗುಂಡಪ್ಪ ಸಾಹುಕಾರ, ಪರಮಶ್ವೇರಪ್ಪ, ಅಚ್ಚಾ ವೈಜನಾಥ, ಚುಕ್ಕಿ ಶಿವಕುಮಾರ, ನಾಗಪ್ಪ ಪತ್ತಾರ ಮತ್ತು ರಂಗನಾಥ ಉಪಸ್ಥಿತರಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.