ಸಿರಾಜಿನ್ ಬಾಷಾಗೆ ನೋಟಿಸ್

ಶುಕ್ರವಾರ, ಮೇ 24, 2019
24 °C

ಸಿರಾಜಿನ್ ಬಾಷಾಗೆ ನೋಟಿಸ್

Published:
Updated:

ಬೆಂಗಳೂರು: ಉತ್ತರಹಳ್ಳಿಯ ಭೂಮಿಯ ಡಿನೋಟಿಫಿಕೇಷನ್ ವಿವಾದ ಕುರಿತು ಶಾಸಕ ಡಾ.ಡಿ.ಹೇಮಚಂದ್ರ ಸಾಗರ್ ಸಲ್ಲಿಸಿರುವ ಅರ್ಜಿಯ ವಿಚಾರಣೆ ಆರಂಭಿಸಿರುವ ಹೈಕೋರ್ಟ್, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಲೋಕಾಯುಕ್ತ) ವಿಶೇಷ ನ್ಯಾಯಾಲ ಯದಲ್ಲಿ ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಇತರರ ವಿರುದ್ಧ ಖಾಸಗಿ ದೂರು ಸಲ್ಲಿಸಿರುವ ವಕೀಲ ಸಿರಾಜಿನ್ ಬಾಷಾ ಅವರಿಗೆ ನೋಟಿಸ್ ಜಾರಿಗೆ ಶುಕ್ರವಾರ ಆದೇಶಿಸಿದೆ.`ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ~ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಲು ರಾಜ್ಯಪಾಲರಿಂದ ಅನುಮತಿ ಪಡೆದಿದ್ದ ಬಾಷಾ, 2011ರ ಜನವರಿಯಲ್ಲಿ ಯಡಿಯೂರಪ್ಪ ಮತ್ತು ಇತರರ ವಿರುದ್ಧ ಐದು ದೂರುಗಳನ್ನು ಸಲ್ಲಿಸಿದ್ದರು. ಪ್ರತಿ ದೂರಿನಲ್ಲೂ ತಲಾ ಮೂರು ಪ್ರಕರಣಗಳನ್ನು ಉಲ್ಲೇಖಿಸಲಾಗಿದೆ. ಒಂದು ದೂರಿನಲ್ಲಿ ಹೇಮಚಂದ್ರ ಸಾಗರ್ ಅವರನ್ನು ಆರೋಪಿಗಳ ಪಟ್ಟಿಯಲ್ಲಿ ಹೆಸರಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry