ಗುರುವಾರ , ಏಪ್ರಿಲ್ 22, 2021
30 °C

ಸಿಹಿನೀರಿನಲ್ಲಿ ಸೀಗಡಿ-ಮೀನು ಕೃಷಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಮೂಡಿಗೆರೆ ತಾಲ್ಲೂಕಿನ ತತ್ಕೂಳ ಬಳಿ ಕೃತಕವಾಗಿ ನಿರ್ಮಿಸಿದ ಕೆರೆಯಲ್ಲಿ ಸುರೇಶ್ ಚಂದ್ರದತ್ತ ಅವರು ಸಿಹಿನೀರಿ ನಲ್ಲಿಯೇ ಸೀಗಡಿ ಮತ್ತು ಮತ್ಸ್ಯೋ ದ್ಯಮ ಕೈಗೊಂಡು ಯಶಸ್ವಿಯಾಗಿದ್ದಾರೆ.ಕಡಿಮೆ ಸಮಯ ಹಾಗೂ ಖರ್ಚಿನಲ್ಲಿ ಸೀಗಡಿ- ಮೀನು ಕೃಷಿ ನಡೆಸಿ ಪಡೆದ ಲಾಭದ ಬಗ್ಗೆ ಮಾಹಿತಿಯನ್ನು ಅವರು ಇಲ್ಲಿ ನೀಡಿದ್ದಾರೆ. ಇದು ಇತರೆ ಬೆಳೆಗಾರರೂ ಇತ್ತ ಪ್ರಯತ್ನಿಸಲು ಪ್ರೇರಣೆಯಾಗಲಿ ಎಂಬುದು ಅವರ ಆಶಯ.ಸಿಹಿನೀರು ಸೀಗಡಿ ಕೃಷಿ:
800 ಕೆ.ಜಿ. ಹಸಿ ಸಗಣಿ, 60 ಕೆ.ಜಿ. ಸುಣ್ಣ, ತಲಾ 400 ಕೆ.ಜಿ. ಅಕ್ಕಿಪಾಲಿಶ್ ತೌಡು ಮತ್ತು ಶೆಂಗಾ ಹಿಂಡಿ, 10 ಸಾವಿರ ಸೀಗಡಿ ಮರಿ ಮತ್ತು 800 ಮೀನುಮರಿ.100X30 ಮೀ. ಅಗಲದ ಕೊಳದಲ್ಲಿ 4ರಿಂದ 5ಅಡಿ ನೀರು ನಿಲ್ಲುವಂತೆ ಮಾಡಿ ಸದಾ ಕಾಯ್ದುಕೊಳ್ಳಬೇಕು. ಕೆರೆ ತಳಭಾಗದಲ್ಲಿ ಕೆಸರು ಇಲ್ಲದ್ದಂತೆ ಸದಾ ಜಾಗ್ರತೆ ವಹಿಸಬೇಕು.ಕೆರೆಯ ತಳಭಾಗ ದಲ್ಲಿ ಕೃತಕ ಗೂಡುಗಳನ್ನು(ಚಿಕ್ಕಗುಂಡಿ) ಸಾಕಷ್ಟು ಸಂಖ್ಯೆಯಲ್ಲಿ ನಿರ್ಮಿಸಬೇಕು. ನೀರು-ಮಣ್ಣಿನ ಗುಣಧರ್ಮ ಸಕಾಲ ದಲ್ಲಿ ಸರಿಯಾಗಿ ಕಾಪಾಡಿ ಕೊಳ್ಳಬೇಕು. ನೀರಿನಲ್ಲಿ ಆಮ್ಲಜನಕದ ಕೊರತೆ ಆಗದಂತೆ ಎಚ್ಚರವಹಿಸಬೇಕು. ವಾತಾವರಣದಲ್ಲಿ ಉಷ್ಟತೆ 18 ಡಿಗ್ರಿ ಸೆಲ್ಸಿಯಸ್‌ನಿಂದ 34 ಡಿಗ್ರಿ ಕಾಪಾಡಿಕೊಳ್ಳುವುದೂ ಅಗತ್ಯ.ಕೆರೆ ನೀರಿನಲ್ಲಿ ಸೀಗಡಿ ಮತ್ತು ಮೀನು ಮರಿಯನ್ನು ಒಟ್ಟಾಗಿಯೇ ಕೊಳಕ್ಕೆ ಬಿಟ್ಟು ಸಾಕಬಹುದು. ಬಲು ಎಚ್ಚರಿಕೆ ಯಿಂದ ಕ್ರಮಬದ್ಧವಾಗಿ ಕೃಷಿ ಮಾಡಿ ದಲ್ಲಿ 8 ತಿಂಗಳಿಗೆ 550 ಕೆ.ಜಿ.ಮೀನು, 7 ತಿಂಗಳಿಗೆ 125 ಕೆ.ಜಿ. ಸಿಹಿನೀರ ಸೀಗಡಿ ಇಳುವರಿ ನಿರೀಕ್ಷಿಸಬಹುದು. ಮಾರು ಕಟ್ಟೆ ಧಾರಣೆ ಉತ್ತಮವಾಗಿದ್ದರೆ, ಮೀನಿನಿಂದಲೇ ರೂ. 22 ಸಾವಿರ, ಸೀಗಡಿಯಿಂದ ರೂ. 32 ಸಾವಿರ ಆದಾಯ ಬರುತ್ತದೆ ಎನ್ನುವ ಸುರೇಶ್, ತಾವು ಕೆರೆ ನಿರ್ಮಿಸಲು ಮಾಡಿದ್ದ ಖರ್ಚು ಕಳೆದ ನಂತರವೂ ರೂ. 26,500 ಆದಾಯ ಗಳಿಸಿದ್ದಾಗಿ ಬಹಳ ವಿಶ್ವಾಸದಿಂದಲೇ ಹೇಳುತ್ತಾರೆ.ದೊಡ್ಡದಾಗಿ ಬೆಳೆದ ಸೀಗಡಿ 100 ಗ್ರಾಂಗೂ ಅಧಿಕ ತೂಕ ಬರುತ್ತದೆ. ಉತ್ತಮವಾಗಿ ಆರೈಕೆ ಮಾಡಿದರೆ ಹೆಚ್ಚಿನ ಲಾಭ ಪಡೆಯ ಬಹುದು. ಸುರೇಶ್ ಚಂದ್ರದತ್ತ ಮೊ: 94481 30608

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.