ಎಲ್ಪಿ ರೆಕಾರ್ಡ್ಗಳು ಸಂಗೀತದ ಅಂಗಡಿಗಳಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿವೆ. ಇಂದಿನ ಎಷ್ಟೋ ಕಾಲೇಜ್ ಹುಡುಗರಿಗೆ ಮತ್ತು ಅವರಿಗಿಂತ ಸ್ವಲ್ಪ ದೊಡ್ಡವರಿಗೆ ಡಿಜಿಟಲ್ ಮಾಧ್ಯಮದ ಸಂಗೀತ ಬಿಟ್ಟರೆ ಬೇರೆ ಸಂಗೀತ ಕೇಳಿ ಅನುಭವವಿರುವುದಿಲ್ಲ.

ಈಗ ಪ್ರಚಲಿತವಿರುವ ಎಂಪಿ3 ಮತ್ತು ಎಫ್ ಎಂ ರೇಡಿಯೋ ಎರಡೂ ಡಿಜಿಟಲ್ ಪ್ರಕಾರಗಳು.ಬೆಂಗಳೂರಿನಲ್ಲಿ ರೆಕಾರ್ಡ್ ಸಂಗ್ರಹ ಮಾಡುವ ಸಂಗೀತ ಪ್ರೇಮಿಗಳು ಹೇರಳವಾಗಿದ್ದರು. ಆದರೆ ಅವರ ರೆಕಾರ್ಡ್ ಪ್ಲೇಯರ್ಗಳ ಮುಳ್ಳು ಹಾಳಾಗಿ ರೆಕಾರ್ಡ್ಗಳ ಸಮೇತ ಆ ಕಾಲದ ಸಂಗೀತ ಸಾಮಾಗ್ರಿಗಳನ್ನೆಲ್ಲ ಅಟ್ಟದ ಮೇಲೆ ಹಾಕಿ ಮರೆತಿರುವವರ ಸಂಖ್ಯೆಯೂ ಇಂದು ದೊಡ್ಡದು.

ಗ್ರಾಮೋಫೋನ್ ರೆಕಾರ್ಡ್ ಎಂದು ಕರೆಸಿಕೊಳ್ಳುತ್ತಿದ್ದ ಸೀಸದ ರೆಕಾರ್ಡ್ ಬರಬರುತ್ತ ವಿನೈಲ್ ಎಂಬ ಪ್ಲಾಸ್ಟಿಕ್ ಮಾದರಿಯ ವಸ್ತುವಿನಿಂದ ತಯಾರಾಗಲು ಪ್ರಾರಂಭವಾಯಿತು.1948ರಲ್ಲಿ ಮೊದಲ ಎಲ್ಪಿ ರೆಕಾರ್ಡ್ ಬಿಡುಗಡೆಯಾಯಿತು.

ರೆಕಾರ್ಡ್ ಮತ್ತು ಸ್ಪೂಲ್ ಟೇಪ್ ತಂತ್ರಜ್ಞಾನ ಕಂಪ್ಯೂಟರ್ (ಅಂದರೆ ಡಿಜಿಟಲ್) ಯುಗಕ್ಕಿಂತ ಮುಂಚಿನವು. ಅವುಗಳ ಶಬ್ದ ಗುಣ ಡಿಜಿಟಲ್ ಸಂಗೀತಕ್ಕಿಂತ ತುಂಬ ಸೊಗಸಾಗಿರುತ್ತದೆ ಎಂದು ನಂಬಿರುವವರಲ್ಲಿ ನಾನೂ ಒಬ್ಬ. ಸ್ಪೂಲ್ ಟೇಪ್ ಇಂದು ಎಲ್ಲೂ ಕಾಣಸಿಗುತ್ತಿಲ್ಲ. ಸ್ಪೂಲ್ ಟೇಪ್ಗಳು ಯಾವ ಅಂಗಡಿಯಲ್ಲೂ ಲಭ್ಯವಿಲ್ಲ.

ಆದರೆ ರೆಕಾರ್ಡ್ಗಳು ಮರಳಿ ಬಂದಿವೆ. ಎಲ್ಪಿ (ಲಾಂಗ್ ಪ್ಲೇಯಿಂಗ್) ರೆಕಾರ್ಡ್ಗಳು 28ರಿಂದ 46 ನಿಮಿಷಗಳಷ್ಟು ಅವಧಿಯ ಸಂಗೀತ ಸಂಗ್ರಹಿಸಿಡಬಲ್ಲವು.
ಎರಡು ವರ್ಷದಿಂದೀಚೆಗೆ ಅಮೆರಿಕ ಮತ್ತು ಇಂಗ್ಲೆಂಡಿನಲ್ಲಿ ರೆಕಾರ್ಡ್ ಕೇಳುವ ಆಸೆ ಜನರಲ್ಲಿ ಹೆಚ್ಚಾಗಿದೆ. 2010ರಿಂದ ಅಮೆರಿಕದ ಸಂಗೀತ ಪ್ರೇಮಿಗಳು 28 ಲಕ್ಷ ರೆಕಾರ್ಡ್ಗಳನ್ನು ಕೊಂಡಿದ್ದಾರೆ.

ಇಂಗ್ಲೆಂಡಿನ ಆನ್ಲೈನ್ ಅಂಗಡಿಯೊಂದರಲ್ಲಿ 2.5 ಲಕ್ಷ ರೆಕಾರ್ಡ್ಗಳ ಸಂಗ್ರಹವಿದೆ. ಬೆಂಗಳೂರಿನ ಸಂಗೀತ ಪ್ರೇಮಿಗಳೂ ರೆಕಾರ್ಡ್ ಕೊಳ್ಳುವ, ಕೇಳುವ ಸಂದರ್ಭ ಸುಮಾರು ಒಂದು ವರ್ಷದಿಂದ ಬಂದಿದೆ. ಸರೆಗಮ ಸಂಸ್ಥೆಯವರ ಪ್ರಕಾರ, ದಿಲ್ಲಿ ಮತ್ತು ಮುಂಬೈ ಬಿಟ್ಟರೆ ಬೆಂಗಳೂರಿನಲ್ಲೇ ಹೆಚ್ಚು ರೆಕಾರ್ಡ್ಗಳು ಬೇಡಿಕೆಯಲ್ಲಿರುವುದು.

ಬೆಂಗಳೂರಿನ ರಿಲಯನ್ಸ್ ಟೈಮ್ ಔಟ್, ಲ್ಯಾಂಡ್ಮಾರ್ಕ್ ಮತ್ತು ಜಯನಗರದ ಕೆಲಿಪ್ರೋದಂಥ ಅಂಗಡಿಗಳಲ್ಲಿ ಇಂದು ರೆಕಾರ್ಡ್ಗಳು ದೊರೆಯುತ್ತವೆ. ಇಂಥ ರೆಕಾರ್ಡ್ಗಳನ್ನು ಕೇಳಿಕೊಂಡು ಬರುವವರಲ್ಲಿ 40 ವರ್ಷ ದಾಟಿದವರೇ ಹೆಚ್ಚು.

ವಿದೇಶಿ ಲೇಬಲ್ಗಳಾದ ಸೋನಿ, ಯೂನಿವರ್ಸಲ್, ವರ್ಜಿನ್ ಮತ್ತು ಇ ಐ ತಯಾರಿಸಿದ ಎಲ್ಪಿಗಳು ಅಂಗಡಿಗಳಲ್ಲಿ ಮತ್ತೆ ರಾರಾಜಿಸುತ್ತಿವೆ. ಭಾರತೀಯ ರೆಕಾರ್ಡ್ಗಳ ಪೈಕಿ ಹೆಚ್ಚಾಗಿ `ಮುಘಲ್-ಎ-ಅಜಮ್~, `ಸಿಲ್ಸಿಲಾ~ದಂಥ ಹಳೆಯ ಚಿತ್ರಗೀತೆಗಳು ಮಾರಾಟವಾಗುತ್ತಿವೆ. ಈಚಿನ ಕೆಲವು ಸಿನಿಮಾ ಹಾಡುಗಳನ್ನು ಮತ್ತು ಖಾಸಗಿ ಅಲ್ಬಮ್ಗಳನ್ನು ರೆಕಾರ್ಡ್ ಮಾಡಿ ಮಾರುತ್ತಿದ್ದಾರೆ. ಸದ್ಯಕ್ಕೆ ಸಿಗುತ್ತಿರುವ ಬಹುಪಾಲು ರೆಕಾರ್ಡ್ಗಳು ಕ್ಲಾಸಿಕ್ ಎನಿಸಿಕೊಂಡ ಹಿಂದಿ ಸಿನಿಮಾದ ಜನಪ್ರಿಯ ಆಲ್ಬಮ್ಗಳ ಪುನರ್ ಮುದ್ರಣಗಳು.

ರೆಕಾರ್ಡ್ಗಳು ಮರಳಿ ಬಂದಿವೆಯಾದರೂ ಸಂಖ್ಯೆಯಲ್ಲಿ ಕಡಿಮೆಯೇ ಇವೆ. ನಾನು ಕಂಡ ಅಂಗಡಿಗಳಲ್ಲಿ ಹೆಚ್ಚೆಂದರೆ ಎರಡು ಡಜನ್ ಎಲ್ಪಿಗಳನ್ನು ಮಾರಾಟಕ್ಕೆ ಜೋಡಿಸಿರುತ್ತಾರೆ. ಹೆಚ್ಚು ಹೆಚ್ಚು ಜನ ರೆಕಾರ್ಡ್ ಕೊಳ್ಳಲು ಪ್ರಾರಂಭಿಸಿದರೆ ಈ ಸಂಖ್ಯೆ ಹೆಚ್ಚಾಗುವ ಸಂಭವವಿದೆ. ವ್ಯಾಪಾರ ವೃದ್ಧಿಯಾದಂತೆ ಕನ್ನಡದ ಎಲ್ಪಿಗಳನ್ನೂ ಪುನರ್ ಮುದ್ರಿಸುತ್ತಾರೇನೊ ನೋಡಬೇಕು.

ಬೆಂಗಳೂರಿನ ಮಟ್ಟಿಗೆ ಹೇಳಬೇಕಾದರೆ, 80ರ ದಶಕದಲ್ಲಿ ರೆಕಾರ್ಡ್ ಕೇಳುವ ತಂತ್ರಜ್ಞಾನ ಮರೆಯಾಗುತ್ತಾ ಬಂದಿತ್ತು. ಕ್ಯಾಸೆಟ್ ಮತ್ತು ಸೀಡಿ ಬಂದಮೇಲೆ ಆ ತಂತ್ರಜ್ಞಾನ ಹೊರಟೇಹೋಗಿತ್ತು. ಅವೆನ್ಯೂ ರಸ್ತೆಯಲ್ಲಿ ಹಳೆಯ ರೆಕಾರ್ಡ್ಗಳು ಕೆಲವು ಸಿಗುತ್ತಿದ್ದವೇ ಹೊರತು ಹೊಸ ರೆಕಾರ್ಡ್ ಮಾರುವ ಅಂಗಡಿಗಳು ಮೂರು ದಶಕಗಳಷ್ಟು ಕಾಲ ಇರಲೇ ಇಲ್ಲ.

`ಎಚ್ಎಂವಿ ಹೌಸ್~ ಎಂಬ ಹೆಸರಿನ ಅಂಗಡಿಗಳು ಬೆಂಗಳೂರಿನಲ್ಲಿ ಕೆಲವಿದ್ದವು. ಬರಬರುತ್ತಾ ಮುಚ್ಚಿಹೋದವು. ಈ ರೆಕಾರ್ಡ್ ವ್ಯಾಪಾರದಲ್ಲಿ ತೊಡಗಿದ್ದ `ಸಂಗೀತ~ ಎಂಬ ಮಳಿಗೆ ಇಂದು ಮೊಬೈಲ್ ಫೋನ್ಗಳನ್ನು ಮಾರುತ್ತಿದೆ. ನಾನು ಹೋದವರ್ಷ ಮುಂಬೈಗೆ ಹೋಗಿದ್ದಾಗ ವೀಟಿ (ಛತ್ರಪತಿ ಶಿವಾಜಿ) ರೈಲು ನಿಲ್ದಾಣದ ಹತ್ತಿರ ಫುಟ್ಪಾತಿನಲ್ಲಿ ರೆಕಾರ್ಡ್ಗಳನ್ನು ಮಾರುತ್ತಿದ್ದವನೊಬ್ಬನನ್ನು ಕಂಡೆ.

ತುಂಬ ಖುಷಿಯಾಗಿ ಸುಮಾರು ಎರಡೂವರೆ ಸಾವಿರ ರೂಪಾಯಿ ಬೆಲೆಯ ರೆಕಾರ್ಡ್ಗಳನ್ನು ಖರೀದಿಸಿದೆ. ಓ.ಪಿ. ನಯ್ಯರ್ ಹಾಡುಗಳು, ಗುರುದತ್ ಸಿನಿಮಾ ಹಾಡುಗಳು, ಲಾರೆನ್ಸ್ ಆಫ್ ಅರೇಬಿಯಾ ಸಿನಿಮಾದ ಹಿನ್ನೆಲೆ ಸಂಗೀತ, ಆಬ ಮತ್ತು ಬೋನಿ ಎಂ ತಂಡಗಳ ಪಾಪ್ ಹಾಡುಗಳು, ನಾಜಿಯ ಹಸನ್ ಹಾಡಿದ ಡಿಸ್ಕೋ ದಿವಾನೆ ಎಂಬ ಆಲ್ಬಮ್... ಹೀಗೆ ಹಲವು ಬಗೆಯ ರೆಕಾರ್ಡ್ಗಳನ್ನು ನನ್ನ ಎಂಬತ್ತರ ದಶಕದ ಸಂಗೀತದ ಅಭಿರುಚಿಗೆ ಅನ್ವಯವಾಗಿ ಕೊಂಡೆ.

ನನಗೆ ನೆನಪಿರುವಂತೆ ರೆಕಾರ್ಡ್ ಹಾಳಾಗದೆ, ಗೀರು-ಗುನ್ನ ಬೀಳದೆ ಚೆನ್ನಾಗಿದ್ದರೆ ಅಂಗಡಿಯವನು ರೂ. 300-350 ಕೇಳುತ್ತಿದ್ದ. ಸ್ವಲ್ಪ ಹಾಳಾಗಿದ್ದರೆ ರೂ. 150ಕ್ಕೆ ಕೊಡುತ್ತಿದ್ದ. ತಯಾರಾದ ಆ ಕಾಲಕ್ಕೆ ರೆಕಾರ್ಡ್ ಒಂದರ ಬೆಲೆ ರೂ. 50 ದಾಟಿರಲಾರದು.

ಈ ಬೆಲೆಗಳಿಗೆ ಹೋಲಿಸಿದರೆ ಇಂದು ಸಿಗುವ ಹೊಸ ರೆಕಾರ್ಡ್ಗಳು ದುಬಾರಿ. ಒಂದು ರೆಕಾರ್ಡ್ನ ಬೆಲೆ ಸುಮಾರು ರೂ. 700ರಿಂದ ಹಿಡಿದು ರೂ. 2500ರವರೆಗೂ ಹೋಗುತ್ತದೆ. `ಫ್ಲಿಪ್ ಕಾರ್ಟ್~ನಂಥ ಆನ್ಲೈನ್ ಅಂಗಡಿಗಳಲ್ಲಿ ಕೆಲವು ರೆಕಾರ್ಡ್ಗಳ ಮೇಲೆ ರಿಯಾಯಿತಿ ಸಿಗುತ್ತದೆ.

ಅಂಗಡಿ ನಡೆಸುವವರು ಹೇಳುವ ಪ್ರಕಾರ, ರೆಕಾರ್ಡ್ ಕೇಳಿಕೊಂಡು ಬರುವವರಲ್ಲಿ ಹಲವರು ಬೆಲೆಯ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಅವರಿಗೆ ರೆಕಾರ್ಡ್ ನಾದಾನುಭವ ಎಷ್ಟು ಇಷ್ಟ ಅಂದರೆ ಕೊಟ್ಟ ದುಡ್ಡಿಗೆ ಮೋಸ ಆಯಿತು ಎಂದು ಅವರಿಗೆ ಅನ್ನಿಸುವುದಿಲ್ಲವಂತೆ.

ನನಗೂ ಎಷ್ಟೋ ಬಾರಿ ಇಂಥ ಉದಾತ್ತ ಭಾವನೆ ಉಕ್ಕಿ ಬರುತ್ತದೆ, ಆದರೆ ಪತ್ರಕರ್ತರ ಸಂಬಳದಲ್ಲಿ ಬೇಕೆನಿಸಿದ ರೆಕಾರ್ಡ್ಗಳನ್ನೆಲ್ಲ ಕೊಳ್ಳಲು ಸಾಧ್ಯವಿಲ್ಲ! ತೀರ ಕಡಿಮೆ ಬೆಲೆಗೆ ಅಥವಾ ಬಿಟ್ಟಿ ಕೇಳಬಹುದಾದ ಹಾಡುಗಳನ್ನು ಇಷ್ಟು ದುಡ್ಡು ಕೊಟ್ಟು ಕೇಳುವ ಆಸೆ ಹುಟ್ಟಿಸುವ ಈ ತಟ್ಟೆಗಳ ಮಹಿಮೆ ಹೇಗಿರಬಹುದು ಎಂದು ಊಹಿಸಿಕೊಳ್ಳಿ!

ಇನ್ನು ಕೆಟ್ಟುಹೋದ ಪ್ಲೇಯರ್ಗಳ ಕಥೆ ಏನು? ಮುಳ್ಳಂತೂ (ಸ್ಟೈಲಸ್) ಸಾಮಾನ್ಯವಾಗಿ ಸಿಗುವುದಿಲ್ಲ. ಹೊಸ ಪ್ಲೇಯರ್ಗಳೂ ಮೊನ್ನೆ ಮೊನ್ನೆಯವರೆಗೂ ಸಿಗುತ್ತಿರಲಿಲ್ಲ. ಆದರೆ ಆ ಪರಿಸ್ಥಿತಿಯೂ ಬದಲಾಗುತ್ತಿದೆ.

ಎಂ.ಜಿ. ರಸ್ತೆಯ ಪ್ರೊ ಎಫ್ಎಕ್ಸ್ ಎಂಬ ಅಂಗಡಿಯಲ್ಲಿ ಡೆನಾನ್ ಕಂಪೆನಿಯ ರೆಕಾರ್ಡ್ ಪ್ಲೇಯರ್ಗಳನ್ನು ಮಾರುತ್ತಿದ್ದಾರೆ. ತಿಂಗಳಿಗೆ ಎರಡೋ ಮೂರೋ ಪ್ಲೇಯರ್ಗಳು ಬಿಕರಿಯಾಗುತ್ತವಂತೆ. ಇದು ದೊಡ್ಡ ಸಂಖ್ಯೆಯಲ್ಲದಿದ್ದರೂ, ಈಗ ಎರಡು ವರ್ಷದ ಕೆಳಗೆ ಇಂಥ ಉಪಕರಣವನ್ನು ಮಾರುವ ಮತ್ತು ಕೊಳ್ಳುವ ಅವಕಾಶವೇ ಬೆಂಗಳೂರಿನಲ್ಲಿ ಇರಲಿಲ್ಲ ಎಂಬುದನ್ನು ಜ್ಞಾಪಕದಲ್ಲಿ ಇಟ್ಟುಕೊಳ್ಳೋಣ.

ರೂ. 9,900 ಕೊಟ್ಟರೆ ಸರಳ ದೆನಾನ್ ಪ್ಲೇಯರ್ ಕೊಳ್ಳಬಹುದು. ಇನ್ನೆರಡು ಮಾಡಲ್ಗಳ ವಿಶೇಷವೆಂದರೆ ರೆಕಾರ್ಡ್ ಕೇಳುತ್ತಲೇ ಹಾಡುಗಳನ್ನು ಡಿಜಿಟೈಸ್ ಮಾಡಿ ಪೆನ್ ಡ್ರೈವ್ಗೆ ತುಂಬಿಕೊಳ್ಳಬಹುದು. ದೆನಾನ್ನಲ್ಲಿ ರೂ. 23,400ರ ಇನ್ನೊಂದು ಇಂಥ ಮಾಡೆಲ್ ಕೂಡ ಇದೆ. ಇನ್ನು ಬೇರೆ ಅಂಗಡಿಗಳಲ್ಲಿ ಲೆನ್ಕೋ ಎಂಬ ಕಂಪೆನಿಯ ಪ್ಲೇಯರ್ಗಳನ್ನು ಮಾರುತ್ತಿದ್ದಾರೆ.

ರೆಕಾರ್ಡ್ ಪ್ಲೇಯರ್ಗಳು ಮತ್ತು ರೆಕಾರ್ಡರ್ಗಳು ಸಿಗುತ್ತಿರುವುದನ್ನು ಬೆಂಗಳೂರಿನ ನನ್ನ ವಲಯದ ಸಂಗೀತ ಪ್ರೇಮಿಗಳಿಗೆ ಹೇಳಿದಾಗ ಅವರಿಂದ ಆಶ್ಚರ್ಯ ಮತ್ತು ಉತ್ಸಾಹ ಎರಡೂ ವ್ಯಕ್ತವಾದವು.

ಹೊಸದಾಗಿ ಕೆಲವು ಯುವಕರೂ ಈ ರೆಕಾರ್ಡ್ ಸಂಗೀತದ ಶ್ರೀಮಂತ ಅನುಭವಕ್ಕೆ ಮಾರುಹೋಗುತ್ತಿದ್ದಾರೆ. ಪ್ಲೇಯರ್ ಕೆಲಸ ಮಾಡದಿದ್ದರೂ ರೆಕಾರ್ಡ್ಗಳನ್ನು ಕಾಪಾಡಿಕೊಂಡು ಬಂದ ಸಂಗೀತ ಪ್ರೇಮಿಗಳಿಗೆ ಹೊಸ ಪ್ಲೇಯರ್ ಅಂಗಡಿಯಲ್ಲಿ ದೊರೆಯುವುದೇ ದೊಡ್ಡ ಸಂಭ್ರಮವಾಗಿದೆ.

ಸುಲಭವಾಗಿ ಮುರಿದುಹೋಗುವ, ಎಲ್ಲೆಂದರಲ್ಲಿ ಕೇಳಲು ಸೌಕರ್ಯವಿಲ್ಲದ, ದುಬಾರಿಯಾದ ಈ ರೆಕಾರ್ಡ್ಗಳ ಚೆಂದ ಎಂಥದು ನೋಡಿ. ಗಟ್ಟಿಯಾದ, ಎತ್ತಿ ಕುಕ್ಕಿದರೂ ಹಾಳಾಗದ, ತೀರ ಕಡಿಮೆ ಬೆಲೆಯ ಸೀಡಿಗಳಿಗೆ ರೆಕಾರ್ಡ್ಗಳಿಗಿರುವ ಆಕರ್ಷಣೆ, ಚೆಲುವು ಎಂದೂ ಬರಲಾರದು. ಪ್ಲಾಸ್ಟಿಕ್ ಹೂವು ಎಷ್ಟೇ ಚೆನ್ನಾಗಿ ಕಂಡು, ನೂರಾರು ವರ್ಷ ಬಾಳಿಕೆ ಬರುವ ಗುಣವಿದ್ದರೂ ಅದನ್ನು ಕೊಟ್ಟು ಪ್ರೀತಿ ಗಳಿಸಿಕೊಳ್ಳುವುದು ಅಸ್ಯಾ, ಅಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.