ಶನಿವಾರ, ಜನವರಿ 25, 2020
19 °C

ಸೀಬರ್ಡ್‌ ನೌಕಾ ನೆಲೆಗೆ ನಾಳೆ ಮುಕ್ತ ಪ್ರವೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೀಬರ್ಡ್‌ ನೌಕಾ ನೆಲೆಗೆ ನಾಳೆ ಮುಕ್ತ ಪ್ರವೇಶ

ಕಾರವಾರ: ನೌಕಾ ದಿನಾಚರಣೆ ಅಂಗ­ವಾಗಿ ಇಲ್ಲಿಯ ಸೀಬರ್ಡ್‌ ನೌಕಾನೆಲೆಗೆ ಇದೇ 14ರಂದು ಸಾರ್ವಜನಿಕರಿಗೆ ಮುಕ್ತ ಪ್ರವೇಶ ಕಲ್ಪಿಸಲಾಗಿದೆ.ಈ ನೌಕಾನೆಲೆಗೆ ಭಾರತೀಯ ನೌಕಾ­ದಳದ ಎರಡು ಅತ್ಯಾಧುನಿಕ ಯುದ್ಧ­ನೌಕೆ­ಗಳು ಬರಲಿವೆ. ರಷ್ಯಾದಿಂದ ಹೊಸ­ದಾಗಿ ನೌಕಾಪಡೆಗೆ ಸೇರಿಸಲಾಗಿರುವ ಐಎನ್ಎಸ್ ತರ್ಕಶ್ ಮತ್ತು ಐಎನ್ಎಸ್ ಕಾರವಾರ ನೌಕೆಗಳನ್ನು ಸಾರ್ವಜನಿಕರು ವೀಕ್ಷಿಸಬಹುದಾಗಿದೆ.ಐಎನ್ಎಸ್ ತರ್ಕಶ್ ಆಕಾಶ, ನೆಲದಿಂದ ಎದುರಾಗುವ ಅಪಾಯ­ಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿದೆ. ಐಎನ್ಎಸ್ ಕಾರವಾರ ನೌಕೆಯು ಸಮುದ್ರದಲ್ಲಿ ಅಡಗಿಸಿಡ­ಲಾದ ನೆಲಬಾಂಬುಗಳನ್ನು ಪತ್ತೆ ಹಚ್ಚುವ ಕಾರ್ಯ ನಿರ್ವಹಿಸುತ್ತಿದೆ.ಸಾರ್ವಜನಿಕರು ಶನಿವಾರ ಬೆಳಿಗ್ಗೆ 10ರಿಂದ ಸಂಜೆ 5ರ ಒಳಗೆ ನೌಕಾನೆಲೆಗೆ ಕದಂಬ ದ್ವಾರ, ಅರ್ಗಾ ಮೂಲಕ  ಪ್ರವೇಶಿಸ­ಬಹುದಾಗಿದೆ. ಮುಖ್ಯ­ದ್ವಾರ­ದಿಂದ ನೌಕಾಜೆಟ್ಟಿ ತನಕ ಸಾರ್ವಜನಿಕ­ರನ್ನು ಕರೆದುಕೊಂಡು ಹೋಗಲು ಸಾಕಷ್ಟು ಬಸ್ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಕ್ಯಾಮೆರಾ ಅಥವಾ ಮೊಬೈಲ್ ತರಬಾರದು ಎಂದು ನೌಕಾ­ನೆಲೆ ಅಧಿಕಾರಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)