ಜಗಳೂರು: ಬಿಸಿಯೂಟ ಕಾರ್ಯಕರ್ತೆಯರಿಗೆ ಸೀರೆ ವಿತರಣಾ ಕಾರ್ಯಕ್ರಮದ ಬಗ್ಗೆ ಶಾಸಕರು ಮತ್ತು ಸಂಸದರ ಸಮ್ಮುಖದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪರಸ್ಪರ ಕೈಕೈ ಮಿಲಾಯಿಸಿದ ಘಟನೆ ಪಟ್ಟಣದಲ್ಲಿ ಶನಿವಾರ ನಡೆಯಿತು.

ಇಲ್ಲಿನ ಗುರುಭವನದಲ್ಲಿ ಶಾಸಕ ಎಸ್.ವಿ. ರಾಮಚಂದ್ರ ಹಾಗೂ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಸಮ್ಮುಖದಲ್ಲಿ ಬಿಸಿಯೂಟ ಕಾರ್ಯಕರ್ತೆಯರಿಗೆ ಇಲ್ಲಿನ ಗುರುಭವನದಲ್ಲಿ ಸೀರೆಗಳ ವಿತರಣೆ ನಡೆಯುತ್ತಿತ್ತು. ಜಿ.ಪಂ. ಸದಸ್ಯ ಕೆ.ಪಿ. ಪಾಲಯ್ಯ, ಕಾಂಗ್ರೆಸ್ ಮುಖಂಡರಾದ ಎಚ್.ಪಿ. ರಾಜೇಶ್, ಕೃಷ್ಣಮೂರ್ತಿ, ತಿಪ್ಪೇಸ್ವಾಮಿ ಗೌಡ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ವೇದಿಕೆಗೆ ತೆರಳಿ ಸೀರೆ ವಿತರಣೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿದ್ದ ಕಾಂಗ್ರೆಸ್ ಕಾರ್ಯಕರ್ತರು ಸೀರೆಗಳನ್ನು ಪ್ರದರ್ಶಿಸುತ್ತಾ ಸಂಸದರು ಮತ್ತು ಶಾಸಕರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದು ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಕೈಕೈ ಮಿಲಾಯಿಸಿದರು. ಸ್ಥಳದಲ್ಲಿ ನೂಕಾಟ ಹಾಗೂ ತಳ್ಳಾಟ ಹೆಚ್ಚಾಗಿ ಭಾರೀ ಸಂಖ್ಯೆಯಲ್ಲಿ ಸೇರಿದ್ದ ಮಹಿಳೆಯರು ಗಾಬರಿಯಿಂದ ಚೀರಾಡಿದರು.

ಕುರ್ಚಿಗಳು ಚೆಲ್ಲಾಪಿಲ್ಲಿಯಾದವು. ಪಿಎಸ್ಐ ಆನಂದ್ ಅವರ ಮೊಬೈಲ್ ಪೋನ್ ಕಳವಾಯಿತು. ಅವರ ಸಮವಸ್ತ್ರದ ಮೇಲಿನ ನಾಮಫಲಕ ಕಿತ್ತು ಹೋಯಿತು. ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿತ್ತು. ಶಾಸಕ ರಾಮಚಂದ್ರ ಅವರು ಗಲಾಟೆ ಮಾಡದಂತೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ನಂತರ ಗುರುಭವನದ ಮುಂಭಾಗದಲ್ಲಿ ಕಾಂಗ್ರೆಸ್ ಮುಖಂಡರು ಧರಣಿ ನಡೆಸಿದರು.

ಎಚ್.ಪಿ. ರಾಜೇಶ್ ಮಾತನಾಡಿ, ಶಾಸಕರು ಅಂಬೇಡ್ಕರ್ ಜಯಂತಿ ಸಮಾರಂಭದಿಂದ ಅರ್ಧಕ್ಕೆ ಹೊರಬಂದು ಸೀರೆ ವಿತರಣೆಯಲ್ಲಿ ನಿರತರಾಗಿದ್ದಾರೆ. ರಾಷ್ಟ್ರ ನಾಯಕರಿಗೆ ಅಗೌರವ ತೋರಿದ್ದಾರೆ. ಬರಗಾಲದಲ್ಲಿ ಬಾರದ ಸಂಸದರು 4 ತಿಂಗಳ ನಂತರ ಈಗ ಸೀರೆ ಹಂಚಲು ಬಂದಿದ್ದಾರೆ ಎಂದು ಹರಿಹಾಯ್ದರು.

ಶಿಕ್ಷಣ ಇಲಾಖೆ ಅಕ್ಷರ ದಾಸೋಹ ವಿಭಾಗದಿಂದ ತರಬೇತಿ ನೆಪದಲ್ಲಿ ಸೀರೆ ವಿತರಣೆ ನಡೆದಿದೆ. ಬಿಇಒ ಜಿ. ಕೊಟ್ರೇಶ್ ಹಾಗೂ ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ಬೇಬಿ ಸುನಿತಾ ಅವರು ಜಯಂತಿಯನ್ನು ಅರ್ಧಕ್ಕೆ ತೊರೆದು ಸೀರೆ ವಿತರಣೆಯಲ್ಲಿ ನಿರತರಾಗಿದ್ದಾರೆ. ಈ ಇಬ್ಬರು ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ಅಮಾನತು ಮಾಡಬೇಕು ಎಂದು ಅವರು ಒತ್ತಾಯಿಸಿದರು.

ತಾಯಿಯ ನೆನಪಿನಲ್ಲಿ ಸೀರೆ ವಿತರಣೆ: ಇದು ಸರ್ಕಾರಿ ಸಮಾರಂಭ ಅಲ್ಲ. ನನ್ನ ತಾಯಿಯ ನೆನಪಿಗಾಗಿ ಬಿಸಿಯೂಟ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸೀರೆ ವಿತರಣೆ ನಡೆಯುತ್ತಿತ್ತು. ಕಾಂಗ್ರೆಸ್ ಕಾರ್ಯಕರ್ತರು ಬಂದು ವಿನಾಕಾರಣ ಗದ್ದಲ ಮಾಡಿದ್ದಾರೆ ಎಂದು ಶಾಸಕ ಎಸ್.ವಿ. ರಾಮಚಂದ್ರ ಸ್ಪಷ್ಟನೆ ನೀಡಿದರು.
ಈಗ ಚುನಾವಣಾ ನೀತಿಸಂಹಿತೆ ಇಲ್ಲ. ಖಾಸಗಿ ಸಮಾರಂಭದಲ್ಲಿ ಸೀರೆ ಹಂಚುವುದು ತಪ್ಪಲ್ಲ.

ನಾಲ್ಕು ತಿಂಗಳ ಕಣ್ವಕುಪ್ಪೆ ಗವಿಮಠದಲ್ಲಿ ನೂರಾರು ಮಹಿಳೆಯರಿಗೆ ಸೀರೆ ವಿತರಿಸಲಾಗಿತ್ತು. ಈಗ ನನ್ನ ತಾಯಿ ಹೆಸರಿನಲ್ಲಿ ಬಡ ಮಹಿಳೆಯರಿಗೆ ಸೀರೆ ವಿತರಿಸಿದರೆ ತಪ್ಪೇನು ಎಂದು ಪ್ರಶ್ನಿಸಿದರು.
ಸಮಾರಂಭದಲ್ಲಿ ಏಕಾಏಕಿ ನುಗ್ಗಿ ದೌರ್ಜನ್ಯ ಮಾಡಿದ ಕಾಂಗ್ರೆಸ್ ಮುಖಂಡರಿಗೆ ಜನತೆ ತಕ್ಕಪಾಠ ಕಲಿಸಲಿದ್ದಾರೆ ಎಂದು ಶಾಸಕರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.