ಶುಕ್ರವಾರ, ಏಪ್ರಿಲ್ 23, 2021
23 °C

ಸುಂದರಿಯ ಪೇಂಟಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಿಸ್ ಇಂಡಿಯಾ ಕಿರೀಟ ಧರಿಸಿದ್ದ ಮತ್ತು ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಅಂಜನಾ ಕುತಿಯಾಲ್ ಪೇಂಟಿಂಗ್ ಕಲಾವಿದೆ ಕೂಡ. ಅವರು ರಚಿಸಿದ ತೈಲ ಚಿತ್ರಗಳ ‘ಎ ಟ್ರಿಬ್ಯೂಟ್ ಟು ಬೆಂಗಳೂರು ಆನ್ ಕ್ಯಾನ್ವಾಸ್’ ಪ್ರದರ್ಶನ ಮಂಗಳವಾರ ನಡೆಯಲಿದೆ.ಇದುವರೆಗೆ 32 ಚಿತ್ರಕಲಾ ಪ್ರದರ್ಶನಗಳನ್ನು ನೀಡಿದ ಅವರ ಕಲಾಕೃತಿಗಳು ಈಗಾಗಲೇ ದೆಹಲಿ, ಮುಂಬೈ, ದುಬೈ, ಸಿಂಗಾಪೂರ ಒಳಗೊಂಡಂತೆ ಹಲವೆಡೆ ಪ್ರದರ್ಶನವಾಗಿದೆ. ಅವರ ಕಲೆಗಳು ಪ್ರಮುಖವಾಗಿ ಮಹಿಳಾ ಪ್ರಧಾನ. ಅದರಲ್ಲಿ ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರ ಬದುಕನ್ನು ಕಾಣಬಹುದು. ಅಲ್ಲದೆ ಗಳಲ್ಲಿ ಸಿನಿಮಾ ತಾರೆಯರು, ರಾಜಕಾರಣಿಗಳು, ಲೇಖಕರನ್ನು ಕೂಡ ತಮ್ಮ ಚಿತ್ರಗಳಿಗೆ ವಸ್ತುವಾಗಿ ಬಳಸಿಕೊಂಡಿದ್ದಾರೆ.ಖ್ಯಾತ ವಸ್ತ್ರ ವಿನ್ಯಾಸಕರಾದ ಸತ್ಯಾ ಪಾಲ್ ಈ ಪ್ರದರ್ಶನ ಆಯೋಜಿಸಿದ್ದಾರೆ. ಸ್ಥಳ: ಮಂತ್ರಿ ಮಾಲ್, ಮಲ್ಲೇಶ್ವರ. ಮಧ್ಯಾಹ್ನ 3.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.