ರೋಟರಿ ಕ್ಲಬ್ ಆಫ್ ಬೆಂಗಳೂರಿನ 2011ನೇ ಸಾಲಿನ ‘ನಾಗರಿಕ ವಿಶೇಷ ಪ್ರಶಸ್ತಿಗೆ’ ಕರುಣಾ ಟ್ರಸ್ಟ್ ಮತ್ತು ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರಗಳ ಸಂಸ್ಥಾಪಕ. ಡಾ. ಸುದರ್ಶನ್ ಅವರನ್ನು ಆಯ್ಕೆ ಮಾಡಿದೆ.

ಚಾಮರಾಜನಗರ ಜಿಲ್ಲೆಯ ಅರಣ್ಯವಾಸಿ ಸೋಲಿಗ ಆದಿವಾಸಿಗಳ ಅಭಿವೃದ್ಧಿ, ಆರೋಗ್ಯ, ಶಿಕ್ಷಣ, ಜೀವನಮಟ್ಟ ಸುಧಾರಣೆ, ಜೀವವೈವಿಧ್ಯ ಸಂರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಡಾ. ಹನುಮಪ್ಪ ಸುದರ್ಶನ್ ಅವರ ಅನನ್ಯ ಸೇವೆಗೆ ರೈಟ್ ಲೈವ್ಲಿ ಹುಡ್ ಮತ್ತು ಪದ್ಮಶ್ರೀ ಪ್ರಶಸ್ತಿಗಳೂ ಸಂದಿವೆ.

ಬೆಂಗಳೂರಿನ ಆರ್ಥಿಕ ಬೆಳವಣಿಗೆ ಮತ್ತು ಸಮುದಾಯ ಕಲ್ಯಾಣದ ಚಟುವಟಿಕೆಗಳಲ್ಲೂ ಭಾಗಿಯಾಗುವ ಮೂಲಕ ಅವರು ಉದ್ಯಮಶೀಲ ನಾಗರಿಕತ್ವಕ್ಕೂ ಗಮನಾರ್ಹ ಕೊಡುಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರೋಟರಿ ಸಂಸ್ಥಾಪಕ ಪಾಲ್ ಹ್ಯಾರಿಸ್ ಗೌರವಾರ್ಥ ನೀಡುವ ‘ನಾಗರಿಕ ವಿಶೇಷ ಪ್ರಶಸ್ತಿಗೆ’ ಅವರನ್ನು ಪರಿಗಣಿಸಲಾಯಿತು ರೋಟರಿ ಸಂಸ್ಥೆಯ ವಿಜಯಕುಮಾರ್ ತಿಳಿಸಿದರು.

ಪ್ರಶಸ್ತಿ ಪ್ರದಾನ
ರೋಟರಿ ಕ್ಲಬ್ ಆಫ್ ಬೆಂಗಳೂರು: ಸೋಮವಾರ ಡಾ. ಸುದರ್ಶನ ಅವರಿಗೆ ‘ನಾಗರಿಕ ವಿಶೇಷ’ ಪ್ರಶಸ್ತಿ ಪ್ರಧಾನ. ಸ್ಥಳ: ರೋಟರಿ ಹೌಸ್ ಆಫ್ ಫ್ರೆಂಡ್ಶಿಪ್, ಲ್ಯಾವೆಲ್ಲೆ ರಸ್ತೆ. ಸಂಜೆ 7.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.