ಬುಧವಾರ, ಜನವರಿ 29, 2020
23 °C

ಸುದೀಪ್ ಪಡೆಗೆ ಜಯದ ಮಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಎಲ್ಲರಲ್ಲೂ `ಕಿಚ್ಚು~ ಮೂಡಿಸಿದ್ದ ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನ (ಸಿಸಿಎಲ್) `ಹುಚ್ಚಿ~ನಲ್ಲಿ ಪ್ರೇಕ್ಷಕರನ್ನು ತೊಯ್ದು ಹೋಗುವಂತೆ ಮಾಡಿದ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಇಲ್ಲಿ ನಡೆದ ಬೆಂಗಾಲ್ ಟೈಗರ್ರ್ಸ್‌ ಎದುರಿನ ಕ್ರಿಕೆಟ್ ಪಂದ್ಯದಲ್ಲಿ 95 ರನ್‌ಗಳ ಭರ್ಜರಿ ಗೆಲುವು ಪಡೆಯಿತು.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಕರ್ನಾಟಕ ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಇದರ ಲಾಭ ಪಡೆದು 20 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 252 ರನ್ ಗಳಿಸಿತು.ಇದಕ್ಕುತ್ತರವಾಗಿ ಟೈಗರ್ರ್ಸ್‌ 20 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು 157 ರನ್ ಮಾತ್ರ ಗಳಿಸಿತು.

ಆತಿಥೇಯ ತಂಡದ ಪರ ರಾಜೀವ್ (91), ಭಾಸ್ಕರ್ (75) ಹಾಗೂ  ಧ್ರುವ (ಔಟಾಗದೇ 41) ರನ್ ಗಳಿಸಿದರು. ಬೌಲಿಂಗ್ ವಿಭಾಗದಲ್ಲಿ ತರುಣ್      ಚಂದ್ರ ಎರಡು ವಿಕೆಟ್ ಪಡೆದು ಗಮನ ಸೆಳೆದರು.

ಪ್ರತಿಕ್ರಿಯಿಸಿ (+)