ಸೋಮವಾರ, ಜನವರಿ 20, 2020
26 °C

ಸುದ್ದಿಜೀವಿಗಳಾಗುವುದು ಬೇಡ

–ಎಂ.ಪರಮೇಶ್ವರ,ಮದ್ದಿಹಳ್ಳಿ,ಹಿರಿಯೂರು ತಾಲ್ಲೂಕು. Updated:

ಅಕ್ಷರ ಗಾತ್ರ : | |

ಇಂದು ಅನೇಕ ಮುಖಂಡರು, ಸ್ವಾಮೀಜಿ­ಗಳು ಸಾಧನ ಜೀವಿಗಳಾಗದೆ ಸುದ್ದಿಜೀವಿಗಳಾ­ಗಿ­ದ್ದಾರೆ. ಯಾವುದೇ ವಿಚಾರವಾಗಿಯಾದರೂ ಸುಮ್ಮನೆ ಗಂಟೆಗಟ್ಟಲೆ ಚರ್ಚೆ, ಸುದ್ದಿಗೋಷ್ಠಿ ನಡೆ­ಸು­­­ವುದು ಸಾಮಾನ್ಯವಾಗಿದೆ. ಸ್ವಾಮಿ ವಿವೇಕಾ­ನಂದರು ಒಮ್ಮೆ ಈ ರೀತಿ ಹೇಳಿದ್ದರು.‘ಹಸಿದ­ವರಿಗೆ ಒಂದು ತುತ್ತು ಅನ್ನ ಕೊಡದ, ವಿಧ­ವೆಯರ ಕಣ್ಣೀರು ಒರೆಸದ ಯಾವ ಧರ್ಮ, ದೇವ­ರಲ್ಲೂ ನಂಬಿಕೆ ಇಲ್ಲ’ ಎಂದು. ಒಂದು ವಿವಾದಿತ ಹೇಳಿಕೆ ಕೊಡು­ವುದು, ವಿವಾ­ದಿತ ಹೇಳಿಕೆ ಪರ---- ವಿರುದ್ಧ ಚರ್ಚೆ, ಪ್ರತಿಭಟನೆ ಮಾಡು­ವುದು ಒಂದು ಫ್ಯಾಷನ್ ಆಗಿದೆ.

–ಎಂ.ಪರಮೇಶ್ವರ, ಮದ್ದಿಹಳ್ಳಿ, ಹಿರಿಯೂರು ತಾಲ್ಲೂಕು.

ಪ್ರತಿಕ್ರಿಯಿಸಿ (+)