ಶುಕ್ರವಾರ, ಜೂನ್ 25, 2021
27 °C

ಸುದ್ದಿ ಬಗ್ಗೆ ಅನುಮಾನಗಳು ಹುಟ್ಟುತ್ತಿವೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಪ್ರಸ್ತುತ ದಿನಗಳಲ್ಲಿ ನಿಜವಾದ ಸುದ್ದಿಯ ಬಗ್ಗೆಯೇ ಜನರಲ್ಲಿ ಅನುಮಾನಗಳು ಹುಟ್ಟುತ್ತಿವೆ. ಸುದ್ದಿಯ ಮೌಲ್ಯ ಮಾಪನದಲ್ಲಿ ಖಾಸಗಿ ಸುದ್ದಿ ವಾಹಿನಿಗಳು ಸೋಲುತ್ತಿವೆ~ ಎಂದು ಮಾಜಿ ಸಚಿವ ಎಚ್.ಕೆ.ಪಾಟೀಲ್ ಅಭಿಪ್ರಾಯಪಟ್ಟರು.ನಗರದಲ್ಲಿ ಶನಿವಾರ ಯುಎನ್‌ಐ ದಕ್ಷಿಣ ಪ್ರಾಂತ್ಯ ನೌಕರರ ಸಂಘಟನೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.`ಖಾಸಗಿ ಸುದ್ದಿ ವಾಹಿನಿಗಳು ಸುದ್ದಿಯ ವೈಭವೀಕರಣದಲ್ಲಿ ತೊಡಗಿರುವ ಸಂದರ್ಭದಲ್ಲಿ ಇಂದಿಗೂ ವಸ್ತುನಿಷ್ಠ ಸುದ್ದಿಯನ್ನು ನೀಡುತ್ತಾ ತನ್ನ ವೃತ್ತಿಪರತೆಯನ್ನು ಉಳಿಸಿಕೊಂಡಿರುವ ಹೆಗ್ಗಳಿಕೆ ಯುಎನ್‌ಐ ಸುದ್ದಿ ಸಂಸ್ಥೆಯದ್ದು~ ಎಂದು ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು.`ಸ್ವಾತಂತ್ರ್ಯಾ ನಂತರದ ಭಾರತದಲ್ಲಿ ಮಾಧ್ಯಮ ಕ್ಷೇತ್ರ ಏಕೀಕೃತವಾಗಬಾರದು ಎಂಬುದು ಜವಾಹರ್ ಲಾಲ್ ನೆಹರೂ ಅವರ ಕನಸಾಗಿತ್ತು. ಹೀಗಾಗಿ ಯುಎನ್‌ಐ ಸುದ್ದಿ ಸಂಸ್ಥೆಯ ಬೆಳವಣಿಗೆಗೆ ಅವರು ವಿಶೇಷ ಕಾಳಜಿ ವಹಿಸಿದ್ದರು~ ಎಂದು ಹೇಳಿದರು.`ದೇಶದ ದೊಡ್ಡ ಸುದ್ದಿ ಸಂಸ್ಥೆಯಾದ ಯುಎನ್‌ಐ ಇಂದು ಸಣ್ಣ ಪ್ರಮಾಣ ಪ್ರಮಾಣದಲ್ಲಿ ತನ್ನ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿರುವುದು ಬೇಸರ ತಂದಿದೆ~ ಎಂದು ಅವರು ವಿಷಾದಿಸಿದರು.`ದೇಶದ ಸಹಕಾರಿ ವ್ಯವಸ್ಥೆಗೆ ಇಂದಿನ ಮಾಧ್ಯಮಗಳು ಹೆಚ್ಚು ಒತ್ತು ನೀಡುತ್ತಿಲ್ಲ. ಸಹಕಾರ ತತ್ವ ನಮ್ಮ ದೇಶದ ಬೆನ್ನೆಲುಬು. ಮಾಧ್ಯಮಗಳು ಇಂದು ಈ ವಿಚಾರವನ್ನೇ ಕಡೆಗಣಿಸುತ್ತಿವೆ~ ಎಂದು ಅವರು ಕಳವಳ ವ್ಯಕ್ತಪಡಿಸಿದರು.ಬೆಂಗಳೂರು ದೂರದರ್ಶನ ಕೇಂದ್ರದ ಉಪ ಪ್ರಧಾನ ನಿರ್ದೇಶಕ ಡಾ. ಮಹೇಶ್ ಜೋಶಿ, ಯುಎನ್‌ಐ ದಕ್ಷಿಣ ಪ್ರಾಂತ್ಯ ನೌಕರರ ಸಂಘಟನೆಯ ಅಧ್ಯಕ್ಷ ಎಂ.ಎಸ್.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಎಚ್.ವಿ.ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.