ಮಂಗಳವಾರ, ಮೇ 24, 2022
31 °C

ಸುನಾದ ಉತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುನಾದ ಸ್ಕೂಲ್ ಆಫ್ ಮ್ಯೂಸಿಕ್‌ನ 15ನೇ ವಾರ್ಷಿಕೋತ್ಸವ ಅಂಗವಾಗಿ ಶನಿವಾರ ಮತ್ತು ಭಾನುವಾರ ರಾಜ್ಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಹಾಗೂ ಪ್ರತಿಭೋತ್ಸವ ನಡೆಯಲಿದೆ.ಗಾಯನ ವಿಭಾಗದಲ್ಲಿ ದೇವರನಾಮ, ದೇಶಭಕ್ತಿಗೀತೆ, ರಂಗಗೀತೆ, ಭಾವಗೀತೆ, ಜನಪದ ಮತ್ತು ಚಲನಚಿತ್ರಗೀತೆ, ಅಭಿನಯ ವಿಭಾಗದಲ್ಲಿ ಏಕಪಾತ್ರಾಭಿನಯ, ಮೂಕಾಭಿನಯ, ವೇಷಭೂಷಣ, ನೃತ್ಯ ವಿಭಾಗದಲ್ಲಿ ಭರತನಾಟ್ಯ, ಜನಪದ ನೃತ್ಯ, ಚಿತ್ರ ಗೀತೆಗಳಿಗೆ ನೃತ್ಯ (ಸೋಲೋ ಹಾಗೂ ಸಮೂಹ) ಸೇರಿದೆ.ವಾದ್ಯ ವಿಭಾಗದಲ್ಲಿ ಕೀಬೋರ್ಡ್, ವೀಣೆ, ಸಿತಾರ್, ನಾದಸ್ವರ, ಮೃದಂಗ, ತಬಲ, ಪಿಟೀಲು, ಸ್ಯಾಕ್ಸೋಫೋನ್, ಗಿಟಾರ್, ಮ್ಯಾಂಡೋಲಿನ್, ರಿದಂ ಪ್ಯಾಡ್ ಮತ್ತು ಕೊಳಲು ನುಡಿಸಬಹುದು. ಇತರೆ ಸ್ಪರ್ಧೆಗಳಲ್ಲಿ ಚಿತ್ರಕಲೆ, ಕರಾಟೆ, ಯೋಗ, ರಂಗೋಲಿ, ಸ್ವರಚಿತ ಕವನ ವಾಚಿಸಬಹುದು.

ಸ್ಥಳ: ಪುರಭವನ, ಜೆ.ಸಿ.ರಸ್ತೆ. ಮಾಹಿತಿಗೆ: 93412 36504, 97414 17313.ಸರ್ವಿಸ್ ಎಕ್ಸ್‌ಲೆನ್ಸ್


ಬ್ರಾಂಡ್ಸ್ ಅಕಾಡೆಮಿ ಮತ್ತು ಬಿಗ್ ಬ್ರಾಂಡ್ಸ್ ರಿಸರ್ಚ್ ಸಹಯೋಗದಲ್ಲಿ `ಸರ್ವಿಸ್ ಎಕ್ಸ್‌ಲೆನ್ಸ್~ ಪ್ರಶಸ್ತಿ ಪ್ರದಾನ ಶನಿವಾರ ನಡೆಯಲಿದೆ. ಮಾಜಿ ಕೇಂದ್ರ ಸಚಿವ ಡಾ. ಶಶಿ ತರೂರ್ ಅತಿಥಿಯಾಗಿರುತ್ತಾರೆ.ಫ್ಯಾಷನ್ ಡಿಸೈನಿಂಗ್

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿ ಸಹಯೋಗದಲ್ಲಿ ಜಯನಗರ 3ನೇ ಹಂತದ ಎನ್‌ಎಂಕೆಆರ್‌ವಿ ಮಹಿಳಾ ಕಾಲೇಜು ವಿದ್ಯಾರ್ಥಿಗಳು, ಗೃಹಿಣಿ ಯರಿಗಾಗಿ 3 ತಿಂಗಳ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಪ್ರಾರಂಭಿಸಿದೆ. ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು.

ಮಾಹಿತಿಗೆ: 90089 00074.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.