ಮಂಗಳವಾರ, ಜನವರಿ 28, 2020
19 °C

ಸುಪ್ರೀಂ ನಿರ್ಧಾರಕ್ಕೆ ಕಪಿಲ್‌ ಸಿಬಲ್‌ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ):  ವಕೀಲೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ನ್ಯಾಯಮೂರ್ತಿ ಎ.ಕೆ ಗಂಗೂಲಿ ಅವರು  ಸೇವೆಯಿಂದ ನಿವೃತ್ತರಾಗಿ­ದ್ದಾರೆ ಎಂಬ ಕಾರಣಕ್ಕೆ ಅವರ ವಿರುದ್ಧ ಕ್ರಮ ಕೈಗೊಳ್ಳದಿರುವ ಸುಪ್ರೀಂ ಕೋರ್ಟ್‌ನ ನಿರ್ಧಾರವನ್ನು ಕೇಂದ್ರ ಸಚಿವ ಕಪಿಲ್‌ ಸಿಬಲ್‌ ಪ್ರಶ್ನಿಸಿದ್ದಾರೆ.ಗಂಗೂಲಿ ನಿವೃತ್ತರಾಗಿದ್ದಾರೆ ಎಂಬ ಕಾರಣಕ್ಕೆ ಸುಪ್ರೀಂ ಕೋರ್ಟ್‌ ಜವಾ­ಬ್ದಾರಿ­ಯಿಂದ ನುಣುಚಿಕೊಳ್ಳುವ ಹಾಗಿಲ್ಲ ಎಂದು ಅವರು ನದೆಹಲಿ­ಯಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ‘ನನಗೆ ಸ್ವಲ್ಪ ಅಸಮಾಧಾನವಾಗಿದೆ. ಗಂಗೂಲಿ ಅವರು ವಕೀಲೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದು  ದೃಢಪಟ್ಟಿರು­ವುದ­ರಿಂದ ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಕ್ರಮ ಕೈಗೊಳ್ಳ­ಬೇಕಿತ್ತು’ ಎಂದು ಸಿಬಲ್‌ ಹೇಳಿದರು.ಗಂಗೂಲಿ ಅವರು ಈಗ ನ್ಯಾಯ­ಮೂರ್ತಿ ಆಗಿಲ್ಲದೇ ಇರುವುದರಿಂದ ಅವರ ವಿರುದ್ಧ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್‌  ಈ ವಿಚಾರ­ದಲ್ಲಿ ತನ್ನ ಕೈ ತೊಳೆದು­­-ಕೊಂಡಿದೆ ಎಂದು ಮೇಲ್ನೋ­ಟಕ್ಕೆ ನನಗೆ ಅನ್ನಿಸುತ್ತಿದೆ ಎಂದು ಸಿಬಲ್‌ ಹೇಳಿದರು.ಬಿಜೆಪಿ ಆಗ್ರಹ: ನ್ಯಾ. ಗಂಗೂಲಿ ವಿರುದ್ಧ ನೀಡಲಾಗಿರುವ ಲೈಂಗಿಕ ಕಿರು­ಕುಳ ದೂರಿನ ವಿಚಾರದಲ್ಲಿ ಸುಪ್ರೀಂ ಕೋರ್ಟ್‌, ‘ನುಣುಚಿಕೊಳ್ಳುವ ದಾರಿ’­ಯನ್ನು ಅನುಸರಿಸಬಾರದು ಎಂದು ಬಿಜೆಪಿ ಮುಖಂಡ ಅರುಣ್‌ ಜೇಟ್ಲಿ ಶುಕ್ರವಾರ ಹೇಳಿದ್ದಾರೆ. ತೇಜ್‌ಪಾಲ್‌ ಪ್ರಕರಣದಂತೆ ತನಿಖೆ ನಡೆಸಿ (ಪಣಜಿ ವರದಿ): ನ್ಯಾ. ಗಂಗೂಲಿ ಅವರ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ­ವನ್ನು ತರುಣ್‌ ತೇಜ್‌­ಪಾಲ್‌ ಅತ್ಯಾಚಾರ ಪ್ರಕರಣ­ದಂತೆ ನಿರ್ವಹಿಸಬೇಕು ಎಂದು ಮಾಜಿ ಐಪಿಎಸ್‌ ಅಧಿಕಾರಿ ಹಾಗೂ ಸಾಮಾ­ಜಿಕ ಕಾರ್ಯ­ಕರ್ತೆ ಕಿರಣ್‌ ಬೇಡಿ ಹೇಳಿದ್ದಾರೆ.ಈ ವಿಚಾರದಲ್ಲಿ ದೆಹಲಿ ಮತ್ತು ಕೋಲ್ಕತ್ತ ಪೊಲೀಸರು, ಗೋವಾ ಪೊಲೀಸ­ರಿಂದ ಪಾಠ ಕಲಿಯಬೇಕು ಎಂದು ಬೇಡಿ ಟ್ವೀಟ್‌ ಮಾಡಿದ್ದಾರೆ.

ವಜಾ ಪ್ರಕ್ರಿಯೆ ಆರಂಭವಾಗಿದೆ–ಸಚಿವ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಷ್ಟ್ರಪತಿಗೆ ಪತ್ರ ಬರೆಯುವ ಮೂಲಕ  ಗಂಗೂಲಿ ಅವರನ್ನು ಪಶ್ಚಿಮ ಬಂಗಾಳ ಮಾನವ ಹಕ್ಕುಗಳ ಆಯೋಗದ ಮುಖ್ಯಸ್ಥರ ಹುದ್ದೆಯಿಂದ ವಜಾಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ ಎಂದು ಪಶ್ಚಿಮ ಬಂಗಾಳದ ಕಾನೂನು ಸಚಿವ ಚಂದ್ರಿಮ ಭಟ್ಟಾಚಾರ್ಯ ಶುಕ್ರವಾರ ಕೋಲ್ಕತ್ತದಲ್ಲಿ ಹೇಳಿದ್ದಾರೆ.‘ನ್ಯಾಯಮೂರ್ತಿ ಗಂಗೂಲಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮುಖ್ಯ­ಮಂತ್ರಿ­ಗಳು ಈಗಾಗಲೇ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಗೆ ಪತ್ರ ಬರೆದಿದ್ದಾರೆ. ಇನ್ನು ನಿರ್ಧಾರ ಕೈಗೊಳ್ಳುವುದು ರಾಷ್ಟ್ರಪತಿ ಅವರಿಗೆ ಬಿಟ್ಟದ್ದು’ ಎಂದು ಭಟ್ಟಾಚಾರ್ಯ ಹೇಳಿದರು.

ಪ್ರತಿಕ್ರಿಯಿಸಿ (+)