ಹಾಸನ: ರುದ್ರಪಟ್ಟಣ ಸಂಗೀತೋತ್ಸವ ಸಮಿತಿ ಟ್ರಸ್ಟ್ನವರು ಭಾನುವಾರ ಸಂಜೆ ರುದ್ರಪಟ್ಟಣದ ಕಾವೇರಿ ತಟದಲ್ಲಿ ಹಮ್ಮಿಕೊಂಡಿದ್ದ ಅಪರೂಪದ ಕಾರ್ಯಕ್ರಮದಲ್ಲಿ ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಕಲಾವಿದ ಆರ್.ಕೆ. ಶ್ರೀಕಂಠನ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಇದೇ ಸಮಾರಂಭದಲ್ಲಿ ಹಿರಿಯ ಕಲಾ ಪೋಷಕ ಸುಬ್ರಹ್ಮಣ್ಯ ಅವರಿಗೆ ‘ನಾಚಾರಮ್ಮ’ ಪ್ರಶಸ್ತಿ ಹಾಗೂ ‘ಸಂಗೀತ ಸೇವಾ ಸ್ಪರ್ಷಮಣಿ’ ಬಿರುದು ನೀಡಿ ಗೌರವಿಸಲಾಯಿತು.

ಟ್ರಸ್ಟ್ನವರು ಹತ್ತು ವರ್ಷಗಳಿಂದ ಈ ಗ್ರಾಮದಲ್ಲಿ ಸಂಗೀತೋತ್ಸವ ಹಮ್ಮಿಕೊಂಡು ಬಂದಿದ್ದು, ದಶಮಾನೋತ್ಸವದ ಅಂಗವಾಗಿ ಈ ವರ್ಷ ಹಲವು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಪ್ರತಿ ವರ್ಷ ಸಪ್ತಸ್ವರ ನಾದ ಮಂದಿರದ ಪರಿಸರದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದರೆ ಈ ಬಾರಿ ಕಾವೇರಿ ತೀರದಲ್ಲಿ ಸಾವಿರಾರು ಸಂಗೀತಾಸಕ್ತರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು. ರುದ್ರಪಟ್ಟಣದಲ್ಲಿ ಜನಿಸಿದ, ಟ್ರಸ್ಟ್ನ ಸಂಸ್ಥಾಪಕ ಸದಸ್ಯರೂ ಆಗಿರುವ ಶ್ರೀಕಂಠನ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಬಂದಿರುವುದು ಈ ಬಾರಿ ಟ್ರಸ್ಟ್ನ ಸಂತಸಕ್ಕೆ ಇನ್ನೊಂದು ಕಾರಣವಾಗಿತ್ತು.

ಈ ಬಾರಿ ಟ್ರಸ್ಟ್ನವರು ಐದು ದಿನಗಳ ಸಂಗೀತ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಹಲವು ದಶಕಗಳಿಂದ ಪಾಳು ಬಿದ್ದಿದ್ದ, ನದೀದಂಡೆಯ ಪ್ರಸನ್ನ ರಾಮೇಶ್ವರ ದೇವಸ್ಥಾನವನ್ನು ಪೂರ್ತಿಯಾಗಿ ನವೀಕರಿಸಲಾಗಿದ್ದು,ಇದೇ ಸಂದರ್ಭದಲ್ಲಿ ಅದನ್ನು ಲೋಕಾರ್ಪಣೆ ಮಾಡಲಾಯಿತು. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಮುಂಭಾಗದಲ್ಲೇ ಕಾರ್ಯಕ್ರಮ ಹಮ್ಮಿಕೊಳ್ಳಲು ಟ್ರಸ್ಟ್ ನಿರ್ಧರಿಸಿತ್ತು. ಸಂಗೀತ ಹಬ್ಬದ ಕೊನೆಯ ದಿನವಾದ ಭಾನುವಾರ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ 300ಕ್ಕೂ ಹೆಚ್ಚು ಕಲಾವಿದರು ಸಾಮೂಹಿಕವಾಗಿ ತ್ಯಾಗರಾಜರ ಪಂಚರತ್ನ ಕೃತಿಗಳನ್ನು ಹಾಡಿದರು. ಬಳಿಕ ಗಣ್ಯರನ್ನು ಸನ್ಮಾನಿಸಲಾಯಿತು.

ಹುಟ್ಟೂರಿನಲ್ಲೇ ಸನ್ಮಾನ ಸ್ವೀಕರಿಸಿದ್ದರಿಂದ ಶ್ರೀಕಂಠನ್ ಭಾವುಕರಾಗಿದ್ದರು. ‘ನನ್ನ ನಿಮಿತ್ತದಿಂದ ನನ್ನ ಹುಟ್ಟೂರಿಗೆ ಹೆಸರು ಬಂದಿದೆ, ಇದರಿಂದ ನಾನು ಧನ್ಯನಾಗಿದ್ದೇನೆ. ಪದ್ಮ ಪ್ರಶಸ್ತಿ ಬಂದಿರುವುದು ನನಗಲ್ಲ. ಕರ್ನಾಟಕಕ್ಕೆ. ಇದಕ್ಕೆ ನಾನು ಒಂದು ನಿಮಿತ್ತವಾದೆ. ಆ ಧನ್ಯತಾಭಾವವೂ ನನ್ನಲ್ಲಿದೆ. ಹುಟ್ಟೂರಿನಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ನಡೆದ ಈ ಸನ್ಮಾನ ಎಲ್ಲ ಗೌರವಗಳಿಗಿಂತ ಮಿಗಿಲಾದುದು’ ಎಂದರು.

ಖ್ಯಾತ ಗಾಯಕ ಆರ್.ಕೆ. ಪದ್ಮನಾಭ ಶ್ರೀಕಂಠನ್ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ, ಫಲಪುಷ್ಪ, ಸನ್ಮಾನಪತ್ರ ನೀಡಿ ಚಿನ್ನದ ಕಡಗವನ್ನು ತೊಡಿಸಿ ಗೌರವಿಸಿದರು.
ಹಲವು ವರ್ಷಗಳಿಂದ ಗ್ರಾಮದಲ್ಲಿ ಸಂಗೀತ ಪೋಷಿಸುತ್ತ ಬಂದಿರುವ ತಟ್ಟಿಮನೆಯ ಸುಬ್ರಹ್ಮಣ್ಯ ಅವರಿಗೆ ನಾಚಾರಮ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಆರ್.ಜಿ. ವೈದ್ಯನಾಥ್, ಶಾಸಕ ಎ. ಮಂಜು, ಟ್ರಸ್ಟ್ ಸದಸ್ಯರಾದ ಆರ್.ಎಲ್. ಮಂಜುನಾಥ್, ವೆಂಕಟರಾಮ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.