ಚಾಮರಾಜನಗರ: `ಸುವರ್ಣ ಗ್ರಾಮ ಯೋಜನೆಯಡಿ ನಾಗವಳ್ಳಿ ಆಯ್ಕೆಯಾಗಿದ್ದು, 2 ಕೋಟಿ ರೂ ವೆಚ್ಚದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಶೀಘ್ರವೇ ಚಾಲನೆ ನೀಡಲಾಗುವುದು~ ಎಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ಹೇಳಿದರು.

ತಾಲ್ಲೂಕಿನ ನಾಗವಳ್ಳಿಯಲ್ಲಿ ಶನಿವಾರ ತಾಲ್ಲೂಕು ಆಡಳಿತದಿಂದ ನಡೆದ ಹೋಬಳಿ ಮಟ್ಟದ ಜನಸ್ಪಂದನ ಸಭೆಯಲ್ಲಿ ಅವರು ಮಾತನಾಡಿದರು. ಸುವರ್ಣ ಗ್ರಾಮ ಯೋಜನೆ ವ್ಯಾಪ್ತಿಗೆ ಈ ಹಿಂದೆಯೇ ಸೇರ್ಪಡೆ ಮಾಡಬೇಕೆಂಬ ಪ್ರಯತ್ನ ನಡೆದಿತ್ತು. ಬಹುದಿನಗಳ ನಿರೀಕ್ಷೆ ಇದೀಗ ಫಲಪ್ರದವಾಗಿದೆ. ಯೋಜನೆಯಡಿ ನಾಗವಳ್ಳಿ ಆಯ್ಕೆಯಾಗಿರುವ ಬಗ್ಗೆ ಸರ್ಕಾರ ಅಧಿಕೃತವಾಗಿ ಆದೇಶಿಸಿದೆ ಎಂದರು.

ಯೋಜನೆಯಡಿ ಬಿಡುಗಡೆಯಾ ಗುವ ಅನುದಾನದಲ್ಲಿ ಶೇ. 80ರಿಂದ 90ರಷ್ಟನ್ನು ಗ್ರಾಮದ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗೆ ಬಳಕೆ ಮಾಡಲಾಗುವುದು. ಸಿಮೆಂಟ್ ಹಾಗೂ ಡಾಂಬರು ರಸ್ತೆ ನಿರ್ಮಾಣಕ್ಕೆ ಒತ್ತು ನೀಡಲಾಗುವುದು ಎಂದು ಹೇಳಿದರು.

ತಾತ್ಕಾಲಿಕವಾಗಿ ಗ್ರಾಮದಲ್ಲಿ ಕಟ್ಟಡ ನೀಡುವುದಾದರೆ ಆಸ್ಪತ್ರೆ ಕಾರ್ಯಾರಂಭ ಮಾಡಲು ಸೂಚಿಸಲಾಗುವುದು. ಬಸವ ಹಾಗೂ ಇಂದಿರಾ ವಸತಿ ಯೋಜನೆಯಡಿ ತಲೆದೋರಿರುವ ತೊಡಕು ನಿವಾರಿಸಿ ಫಲಾನುಭವಿಗಳಿಗೆ ಅನುಕೂಲ ಕಲ್ಪಿಸಲಾಗುವುದು ಎಂದರು.

ಪಡಿತರ ಚೀಟಿ ಸೌಲಭ್ಯ ಅರ್ಹರಿಗೆ ದೊರೆಯಬೇಕು. ಕೆಲಸ ಅರಸಿ ಪರಸ್ಥಳಕ್ಕೆ ತೆರಳಿರುವ ಗ್ರಾಮೀಣ ಕೂಲಿಕಾರ್ಮಿಕರು ಹಾಗೂ ಅನಿವಾರ್ಯ ಕಾರಣಗಳಿಂದ ಇದುವರೆಗೂ ಪಡಿತರ ಚೀಟಿಗೆ ಅರ್ಜಿ ಸಲ್ಲಿಸದಿರುವ ಜನರಿಗೆ ಪಡಿತರ ಚೀಟಿ ಪಡೆಯಲು ಅವಕಾಶ ಮಾಡಿಕೊಡಬೇಕು. ಕಾಡುಪ್ರಾಣಿಗಳ ಹಾವಳಿಯಿಂದ ಉಂಟಾಗುವ ಬೆಳೆಹಾನಿ ಪರಿಹಾರ ನೀಡಲು ವೈಜ್ಞಾನಿಕ ಕ್ರಮ ಅನುಸರಿಸಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಿ. ನಾಗಶ್ರೀ ಮಾತನಾಡಿ, ವಿವಿಧ ಇಲಾಖೆಗಳಿಂದ ಜನಸಾಮಾನ್ಯರಿಗೆ ಆಗಬೇಕಿರುವ ಕೆಲಸ, ಸಮಸ್ಯೆ ಹಾಗೂ ದೂರಿನ ಅರ್ಜಿ ಸ್ವೀಕರಿಸಲು ಏಕ ಗವಾಕ್ಷಿ ಕೌಂಟರ್ವೊಂದನ್ನು ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ತೆರೆಯುವಂತೆ ಸಿಇಒಗೆ ಕೋರಲಾಗಿದೆ ಎಂದು ಹೇಳಿದರು.

ತಹಶೀಲ್ದಾರ್ ಚಂದ್ರಕಾಂತ್ ಭಜಂತ್ರಿ ಮಾತನಾಡಿ, ಸಾಮಾಜಿಕ ಭದ್ರತಾ ಯೋಜನೆ, ಜಾತಿ, ಆದಾಯ ಪ್ರಮಾಣ ಪತ್ರ ಸೇರಿದಂತೆ ಇತರೇ ಪ್ರಮಾಣ ಪತ್ರಗಳ ವಿತರಣೆ ಸೇರಿದಂತೆ ಅನೇಕ ಕಾರ್ಯ ನಿರ್ವಹಣೆಯು ಶೀಘ್ರವೇ ನಾಡ ಕಚೇರಿಗೆ ವರ್ಗಾವಣೆಯಾಗಲಿದೆ. ತಾಲ್ಲೂಕು ಕಚೇರಿಯಲ್ಲಿ ನಿರ್ವಹಿಸುತ್ತಿದ್ದ ಶೇ. 75ರಷ್ಟು ಕೆಲಸ ಕಾರ್ಯಗಳು ಇನ್ನು ಮುಂದೆ ನಾಡ ಕಚೇರಿಯಲ್ಲಿ ನಡೆಯಲಿವೆ. ಇದರಿಂದ ಗ್ರಾಮೀಣರು ತಾಲ್ಲೂಕು ಕಚೇರಿಗೆ ಅಲೆಯುವುದು ತಪ್ಪಲಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಮಹಾದೇವಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಚಿಕ್ಕಮಹದೇವು, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಟ್ಟನಂಜಮ್ಮ, ಉಪಾಧ್ಯಕ್ಷ ಗುಂಡಶೆಟ್ಟಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.