ಬ್ಯಾಡಗಿ : ಸುವರ್ಣಭೂಮಿ ಯೋಜನೆ ಯಡಿ 2ನೇ ಕಂತಿನ ಹಣವನ್ನು ಬಾಕಿ ಹಣ ಬಿಡುಗಡೆ ಮಾಡುವಂತೆ ಆಗ್ರಹಿಸಿ ಬುಧವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಘಟಕ ತಹಶೀಲ್ದಾರ ಹಾಗೂ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಗಂಗಣ್ಣ ಎಲಿ ಮಾತನಾಡಿ ಕಳೆದ ವರ್ಷ ತಾಲ್ಲೂಕಿನಲ್ಲಿ ಸುವರ್ಣ ಭೂಮಿ ಯೋಜನೆಗೆ 11,908 ಅರ್ಜಿಗಳನ್ನು ಸಲ್ಲಿಸಲಾಯಿತು. ಆದರೆ ಲಾಟರಿ ಮೂಲಕ 4354 ರೈತರನ್ನು ಮಾತ್ರ ಆಯ್ಕೆ ಮಾಡಲಾಯಿತು.

ಈ ಫಲಾನುಭವಿಗಳತೆ ತಲಾ 5ಸಾವಿರದಂತೆ ಮೊದಲ ಕಂತಿನ ಹಣ ಬಿಡುಗಡೆಯಾಗಿದ್ದು, ಎರಡನೆಯ ಕಂತಿನ ಹಣ ಮಾತ್ರ ಬಿಡುಗಡೆ ಯಾಗಿಲ್ಲ. ಕಳೆದ ವರ್ಷದ ಫಲಾನು ಭವಿಗಳಿಗೆ ಪೂರ್ತಿ ಹಣ ಸಂದಾಯ ಮಾಡದ ಸರ್ಕಾರ ಹೊಸ ಅರ್ಜಿಗಳನ್ನು ಆಹ್ವಾನಿಸಿರುವುದು ಎಷ್ಟರ ಮಟ್ಟಿಗೆ ಸರಿ ಎನ್ನುವ ಅನು ಮಾನ ವ್ಯಕ್ತಪಡಿಸಿದರು.

ಕಳೆದ ವರ್ಷ ಆಯ್ಕೆ ಮಾಡಲಾದ ಫಲಾನುಭವಿಗಳಿಗೆ 2ನೇ ಕಂತಿನ ಹಣ ಬಿಡುಗಡೆ ಮಾಡಿದ ಬಳಿಕವೇ ಪ್ರಸಕ್ತ ವರ್ಷದ ಅರ್ಜಿಗಳನ್ನು ಆಹ್ವಾನಿಸು ವಂತೆ ಆಗ್ರಹಿಸಿದರು. ಹಣ ಬಿಡುಗಡೆ ಮಾಡುವಲ್ಲಿ ವಿಳಂಬ ಮಾಡಿದರೆ ರೈತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡ ರಾದ ಮಲಕಪ್ಪ ಹಾದರಗೇರಿ, ನಾಗರಾಜ ಬಿದರಿ, ಚಿಕ್ಕಪ್ಪ ಛತ್ರದ, ಶಂಭಣ್ಣ ಬಿದರಿ, ನಿಂಗಪ್ಪ ದೂಳಿ ಕೊಪ್ಪ, ಶಿವಪುತ್ರಪ್ಪ ಕುಲ್ಕರ್ಣಿ, ಮಂಜಣ್ಣ ಬಾರ್ಕಿ, ಪಿ.ಬಿ.ಹಾಲನ ಗೌಡ್ರ, ಬಿ.ಎಸ್.ಪಾಟೀಲ, ಕೆ.ವಿ. ದೊಡ್ಡಗೌಡ್ರ ಮಲಕಪ್ಪ ಹಾದರ ಗೇರಿ, ನಾಗರಾಜ ಬಿದರಿ, ಚಿಕ್ಕಪ್ಪ ಛತ್ರದ, ಶಂಭಣ್ಣ ಬಿದರಿ, ಮಂಜಣ್ಣ ಬಾರ್ಕಿ, ಪಿ.ಬಿ. ಹಾಲನಗೌಡ್ರ, ನಿಂಗಪ್ಪ ಧೂಳಿಕೊಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.