ಮಂಗಳವಾರ, ಏಪ್ರಿಲ್ 20, 2021
30 °C

ಸುಸಜ್ಜಿತ ವಸತಿ ಸಂಕೀರ್ಣ ನಿರ್ಮಾಣ : ಸಿಎಂ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುಸಜ್ಜಿತ ವಸತಿ ಸಂಕೀರ್ಣ ನಿರ್ಮಾಣ : ಸಿಎಂ ಭರವಸೆ

ಬೆಂಗಳೂರು: `ನರ್ಮ್ ಯೋಜನೆಯ ಸಹಯೋಗದೊಂದಿಗೆ ಮುಂದಿನ ವರ್ಷ ನೂರು ಕೊಳೆಗೇರಿ ಪ್ರದೇಶಗಳಲ್ಲಿ ಕೊಳೆಗೇರಿ ನಿವಾಸಿಗಳಿಗಾಗಿ ಸುಸಜ್ಜಿತ ವಸತಿ ಸಂಕೀರ್ಣಗಳನ್ನು ನಿರ್ಮಾಣ ಮಾಡಲಾಗುವುದು~ ಎಂದು ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯು ಜವಾಹರಲಾಲ್ ನೆಹರು ರಾಷ್ಟ್ರೀಯ ನಗರಾಭಿವೃದ್ಧಿ ಯೋಜನೆಯಡಿ (ಜೆಎನ್ ನರ್ಮ್) ನಗರದ ಲಕ್ಷ್ಮಣರಾವ್ ನಗರ ಕೊಳೆಗೇರಿ ಪ್ರದೇಶದಲ್ಲಿ ನಿರ್ಮಿಸಿರುವ ವಸತಿ ಸಂಕೀರ್ಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ನಗರದಲ್ಲಿ ಕೊಳೆಗೇರಿಗಳು ನಿರ್ಮಾಣವಾಗದಂತೆ ಗಮನ ಹರಿಸಬೇಕು. ಅವರಿಗಾಗಿ ಉತ್ತಮ ಬಡಾವಣೆಗಳನ್ನು  ನಿರ್ಮಿಸಬೇಕು.ರಾಜಕೀಯೇತರವಾಗಿ ಎಲ್ಲರೂ ಅಭಿವೃದ್ಧಿ ಕಾರ್ಯಗಳಿಗೆ ಶ್ರಮಿಸಿದಾಗ ಮಾತ್ರ ನಾಡು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ~ ಎಂದು ಹೇಳಿದರು.`ಕೊಳೆಗೇರಿ ಪ್ರದೇಶಗಳಲ್ಲಿ ವಸತಿ ನಿರ್ಮಾಣಕ್ಕೆ ಕೇಂದ್ರ ಸರ್ಕಾರವು ಶೇ 50 ಭಾಗ ಮತ್ತು ರಾಜ್ಯ ಸರ್ಕಾರವು ಶೇ 40 ಭಾಗವನ್ನು ನೀಡುತ್ತದೆ. ಅದರಲ್ಲಿ ಫಲಾನುಭವಿಗಳು ಶೇ 10 ಭಾಗವನ್ನು ನೀಡಬೇಕು.ಆದರೆ, ಫಲಾನುಭವಿಗಳಿಗೆ ಹೊರೆಯಾಗುವುದಾದರೆ ಅದನ್ನು ಸರ್ಕಾರವೇ ಭರಿಸುವ ಬಗ್ಗೆ ಚರ್ಚೆ ನಡೆಸಲಾಗುವುದು~ ಎಂದು ಶಾಸಕ ಎನ್.ಎ. ಹ್ಯಾರೀಸ್ ಅವರ ಮನವಿಗೆ ಹೇಳಿದರು.ರೂ 19.30ಕೋಟಿ ವೆಚ್ಚ 


ಲಕ್ಷ್ಮಣರಾವ್‌ನಗರ ಕೊಳಚೆ ಪ್ರದೇಶವು ಸುಮಾರು 30 ಎಕರೆ ವಿಸ್ತೀರ್ಣವನ್ನು ಹೊಂದಿದೆ. ಈ ಪ್ರದೇಶದಲ್ಲಿ ಜವಾಹರಲಾಲ್ ನೆಹರು ರಾಷ್ಟ್ರೀಯ ನಗರಾಭಿವೃದ್ಧಿ ಯೋಜನೆಯ  (ಜೆಎನ್ ನರ್ಮ್) ಹಂತ 1 ರ ಯೋಜನೆಯಡಿಯಲ್ಲಿ 920 ಕುಟುಂಬಗಳಿಗೆ ಮನೆಗಳ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯವನ್ನು ಒದಗಿಸಲಾಗಿದೆ.ಕಾಮಗಾರಿಗೆ ಒಟ್ಟು 19.30 ಕೋಟಿ  ರೂಪಾಯಿ ಅಂದಾಜು ವೆಚ್ಚವಾಗಿದ್ದು ಈಗ 630 ಮನೆಗಳನ್ನು ಪೂರ್ಣಗೊಳಿಸಲಾಗಿದೆ. ಜೆಎನ್ ನರ್ಮ್ ಹಂತ 2 ಮತ್ತು 3 ರ ಯೋಜನೆಯಡಿಯಲ್ಲಿ ಇನ್ನುಳಿದ 673 ಕುಟುಂಬಗಳಿಗೆ ಮನೆಗಳ ನಿರ್ಮಾಣ ಹಾಗೂ ಮೂಲಭೂತ ಸೌಕರ್ಯವನ್ನು ಒದಗಿಸಲು ರೂ 21.56 ಕೋಟಿ  ಅಂದಾಜು ವೆಚ್ಚದಲ್ಲಿ ಕಾಮಗಾರಿಯನ್ನು ಕೈಗೊಂಡಿದ್ದು ಪ್ರಗತಿಯಲ್ಲಿದೆ.ಸಂತಸವಾಗುತ್ತಿದೆ

`ಕೊಳೆಗೇರಿಯಲ್ಲಿ ನಮಗಾಗಿ ಈ ತರಹದ ಅಚ್ಚುಕಟ್ಟಾದ ಮನೆ ದೊರೆಯುತ್ತದೆಂದು ಎಣಿಸಿರಲಿಲ್ಲ. ಈಗ ನಮಗೆ ನಮ್ಮದೇ ಆದ ಸುಂದರವಾದ ಮನೆ ದೊರೆತಿದೆ. ಸಂತಸವಾಗುತ್ತಿದೆ. ನಮ್ಮನ್ನು ಕೊಳೆಗೇರಿಯವರೆಂದು ಹೀನವಾಗಿ ನೋಡದೆ ನಮ್ಮನ್ನು ಕೂಡ ಮನುಷ್ಯರಂತೆ ಕಾಣಬೇಕು~

-ಪಾರ್ವತಮ್ಮ, ಫಲಾನುಭವಿ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.