ಮಂಗಳವಾರ, ಜೂನ್ 15, 2021
27 °C

ಸುಸ್ಥಿರ ಕೃಷಿಯಿಂದ ಜೀವನ ನೆಮ್ಮದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾಳಿಕೋಟೆ: ಸ್ವ-ಸಹಾಯ ಸಂಘಗಳಿಗೆ ನೀಡುತ್ತಿರುವ ಸುತ್ತು ನಿಧಿಯನ್ನು ಬಳಸಿಕೊಂಡು ಸಂಘಗಳು ಬಲವರ್ಧನೆಗೊಳ್ಳಬೇಕು. ಕೃಷಿಯೊಂದಿಗೆ ಆಡು, ಆಕಳು ಮೊದಲಾದ ಪ್ರಾಣಿಗಳನ್ನು ಸಾಕಿಕೊಂಡು ಸುಸ್ಥಿರ ಕೃಷಿ ಹಾಗೂ ಬದುಕು ಸಾಗಿಸಬೇಕು ಎಂದು ದೇವರಹಿಪ್ಪರಗಿ ಶಾಸಕ ಎ.ಎಸ್. ಪಾಟೀಲ (ನಡಹಳ್ಳಿ) ಸಲಹೆ ನೀಡಿದರು. ಅವರು ಸಮೀಪದ ತುಂಬಗಿಯಲ್ಲಿ ಬುಧವಾರ ವಿಜಾಪುರ ಜಿಲ್ಲಾ ಪಂಚಾಯಿತಿ, ಮುದ್ದೇಬಿಹಾಳ ಜಲಾನಯನ ಇಲಾಖೆ ವತಿಯಿಂದ ಆಯೋಜಿಸಿದ್ದ ಸಮಗ್ರ ಜಲಾನಯನ ನಿರ್ವಹಣೆ ಯೋಜನೆ ಬ್ಯಾಚ್-1 ರ ಅಡಿಯಲ್ಲಿ  ಬೊಮ್ಮನಹಳ್ಳಿ ಹಳ್ಳ ಉಪ ಜಲಾನಯನ ಮಟ್ಟದ ಜಲಾನಯನ ಮೇಳ ಹಾಗೂ ಸ್ವ-ಸಹಾಯ ಗುಂಪುಗಳಿಗೆ ಸುತ್ತುನಿಧಿ ಚೆಕ್ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ರೈತರಿಗೆ ಸುಸ್ಥಿರ, ಸಾವಯವ ಕೃಷಿಯಿಂದ ಆರ್ಥಿಕ ಭದ್ರತೆಯ ಜೊತೆಗೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸುಲಭ ಮಾರ್ಗ. ಈ ನಿಟ್ಟಿನಲ್ಲಿ ರೈತರು ಗಮನ ನೀಡಬೇಕು ಎಂದರು.ವಿಜಾಪುರ ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರ ವಿಷಯ ತಜ್ಞರಾದ ಡಾ.ಎಸ್.ಎಸ್. ಕರಭಂಟನಾಳ, ಹಾಗೂ ಡಾ.ಎಸ್.ಎಂ. ವಸ್ತ್ರದ, ಮಾತನಾಡಿದರು.ಸಾನ್ನಿಧ್ಯವನ್ನು ತುಂಬಗಿಯ ಮಹಾಂತಲಿಂಗ ಶಿವಾಚಾರ್ಯರು ವಹಿಸಿದ್ದರು. ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷೆ ಗಂಗಮ್ಮ ಗುತ್ಯಾಗೋಳ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿ.ಪಂ. ಸದಸ್ಯ ಸಾಯಬಣ್ಣ ಆಲ್ಯಾಳ, ತಾ.ಪಂ. ಸದಸ್ಯರಾದ ಸಾಹೇಬಗೌಡ ಬಿರಾದಾರ,  ಸುಮಂಗಲಾ ಢವಳಗಿ ಹಾಗೂ ಕಸ್ತೂರಿಬಾಯಿ ಭಂಟನೂರ ಮಾತನಾಡಿದರು.ಬಂಟನೂರ ಗ್ರಾ.ಪಂ. ಅಧ್ಯಕ್ಷೆ ಕಮಲಾಕ್ಷಿ ಕಿರೆದಳ್ಳಿ, ಕೊಡಗಾನೂರ ಗ್ರಾ.ಪಂ. ಅಧ್ಯಕ್ಷೆ ಪಾರ್ವತೆಮ್ಮ ಹೆಳವರ,  ವಿಜಾಪುರ ಸಹಾಯಕ ಕೃಷಿ ನಿರ್ದೇಶಕ  ಶರಣಗೌಡ ರಂಗಣ್ಣವರ, ಜಲಾನಯನ ಅಭಿವೃದ್ಧಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ(ಪಶು ಸಂಗೋಪನೆ) ಡಾ.ಎಸ್.ಪಿ. ಕುಂಬಾರ, ತಾಲ್ಲೂಕು ಅಧಿಕಾರಿ ಜಿ.ಆರ್. ದೊಡ್ಡಿಹಾಳ, ಇಲಾಖೆಯ ಅಧಿಕಾರಿಗಳಾದ ಅರವಿಂದ ಹೂಗಾರ, ಎಸ್. ಆರ್. ಕಟ್ಟಿಮನಿ, ಜಿ.ಬಿ. ಮೆದಿಕಿನಾಳ,  ಜಿ.ಎಸ್. ಪೂಜಾರಿ, ಮೇಳದಲ್ಲಿ ಅನುಗಾರ ಸಂಸ್ಥೆಯಾದ ಶ್ರಿ ವಿವೇಕಾನಂದ ಶಿಕ್ಷಣ ಹಾಗೂ ಜನಸೇವಾ ಸಂಸ್ಥೆಯ  ದಶರಥ ಹಾಗೂ ಕಿರೆದಹಳ್ಳಿ ಉಪಸ್ಥಿತರಿದ್ದರು.ಜಲಾನಯನ ವ್ಯಾಪ್ತಿಯ ಬೊಮ್ಮನಹಳ್ಳಿ, ಫತ್ತೇಪುರ, ತುಂಬಗಿ, ಭಂಟನೂರ, ಗೋಟಖಿಂಡ್ಕಿ, ಪೀರಾಪುರ, ಅಸ್ಕಿ, ನೀರಲಗಿ, ಗ್ರಾಮಗಳ ರೈತರು ಭಾಗವಹಿಸಿದ್ದರು. ಜಗದೀಶ ಬೊಳಸೂರ ನಿರ್ವಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.