ಸೋಮವಾರ, ಮಾರ್ಚ್ 1, 2021
31 °C

ಸೂರಜ್ ಪಾಂಚೋಲಿಗೆ ಜಾಮೀನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೂರಜ್ ಪಾಂಚೋಲಿಗೆ ಜಾಮೀನು

ಮುಂಬೈ (ಪಿಟಿಐ): ಬಾಲಿವುಡ್ ನಟಿ ಜಿಯಾಖಾನ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಬಂಧಿತರಾಗಿದ್ದ ಆಕೆಯ ಗೆಳೆಯ ಸೂರಜ್ ಪಾಂಚೋಲಿಗೆ ಬಾಂಬೆ ಹೈಕೋರ್ಟ್ ಸೋಮವಾರ ಷರತ್ತುಬದ್ದ ಜಾಮೀನು ನೀಡಿದೆ.ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ಜಾದವ್ ಅವರು ` ನಟಿ ಆತ್ಮಹತ್ಯೆ ಮಾಡಿಕೊಂಡಿದ್ದು ಒಂದು ದುರಾದೃಷ್ಟ ಘಟನೆ. ಇದರ ಹೊಣೆಯನ್ನು ಆ ಯುವಕನ ಮೇಲೆ ಹೊರಿಸಲಾಗದು ಎಂದು ಅವರು ಅಭಿಪ್ರಾಯಪಟ್ಟರು.ಸೂರಜ್‌ಗೆ ಷರತ್ತು ಬದ್ಧ ಜಾಮೀನು ನೀಡಲಾಗಿದೆ. ವಿದೇಶಕ್ಕೆ ತೆರಳದಂತೆ ನ್ಯಾಯಾಲಯ ಸೂಚಿಸಿದೆ. 50.000 ರೂಪಾಯಿಯ ಬಾಂಡ್ ಇರಿಸಿಕೊಳ್ಳಲಾಗಿದೆ.ಕಳೆದ ಜೂನ್ 10ರಂದು ಸೂರಜ್‌ನನ್ನು ಬಂಧಿಸಲಾಗಿತ್ತು. ಈ ಹಿಂದೆ ಮುಂಬೈ ಜಿಲ್ಲಾ ಸ್ಥಳೀಯ ನ್ಯಾಯಾಲಯ ಸೂರಜ್‌ಗೆ ಜಾಮೀನು ನೀಡಲು ನಿರಾಕರಿಸಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.