ಸೂರ್ಯ ಸಮಾಚಾರ

7

ಸೂರ್ಯ ಸಮಾಚಾರ

Published:
Updated:
ಸೂರ್ಯ ಸಮಾಚಾರಸೂರ್ಯ ಹುಟ್ಟುವಾಗ ಮತ್ತು ಮುಳುಗುವಾಗ ಕೆಂಪು ಕೆಂಪಾಗಿ ಆಕರ್ಷಕ. ಆದರೆ ಹೊತ್ತು ಏರಿದಂತೆ ತಿಳಿ ಹಳದಿ ಬಣ್ಣವಾಗಿ ಬೆಳಕನ್ನು ಸೂಸುತ್ತದೆ. ಭೂಮಿ ಸೂರ್ಯನ ಸುತ್ತ ಸುತ್ತುತ್ತದೆ. ಸೂರ್ಯನ ಬೆಳಕು ಯಾವ ಭೂಭಾಗದ ಮೇಲೆ ಬಿದ್ದಿರುತ್ತದೋ ಆ ಭಾಗದಲ್ಲಿ ಹಗಲಿರುತ್ತದೆ ಎಂಬುದು ತಿಳಿದ ವಿಷಯ. ಆ ತಿಳಿ ಹಳದಿ ಸೂರ್ಯನ ಬೆಳಕಿನಲ್ಲಿ ಊದಾ, ನೀಲಿ, ಕಡುನೀಲಿ, ಹಸಿರು, ಕಿತ್ತಳೆ, ಕೆಂಪು, ಹಳದಿ ಏಳು ಬಣ್ಣಗಳು ಮಿಶ್ರಣವಾಗಿರುತ್ತವೆ.ಬೆಳಿಗ್ಗೆ ಮತ್ತು ಸಂಜೆ ಸೂರ್ಯ ದಿಗಂತದಲ್ಲಿರುತ್ತಾನೆ. ಅಂದರೆ ಭೂಮಿ ಸೂರ್ಯನನ್ನು ಒಂದು ಸುತ್ತು ಹಾಕಿ ಮುಗಿಸುವ ಹೊತ್ತು ಬಂದಿರುತ್ತದೆ.ಆಗ ಸೂರ್ಯನ ಕಿರಣಗಳು ಬಹುದೂರದಿಂದ ವಾತಾವರಣವನ್ನು ಹಾಯ್ದು ಭೂಮಿಗೆ ಬರಬೇಕಾಗಿರುತ್ತದೆ. ಅಂದರೆ ಬೆಳಿಗ್ಗೆ ಮತ್ತು ಸಂಜೆಯ ಸೂರ್ಯ ಮಧ್ಯಾಹ್ನದ ದೂರಕ್ಕಿಂತ ಐವತ್ತು ಪಟ್ಟು ದೂರದಲ್ಲಿರುತ್ತಾನೆ.ಆಗ ವಾತಾವರಣದ ಮಂಜು, ನೀರಾವಿ ಅಂಶಗಳು ಹಳದಿ, ಕಿತ್ತಳೆ, ಕೆಂಪು ಬಣ್ಣಗಳನ್ನು ಹೊರತುಪಡಿಸಿ ಉಳಿದೆಲ್ಲ ಬಣ್ಣಗಳನ್ನು ಹರಡಿ ಬಿಡುತ್ತದೆ. ಅದರಿಂದ ಸೂರ್ಯನ ಬೆಳಕಿನಲ್ಲಿರುವ ಊದಾ, ನೀಲಿ, ಹಸಿರು ಬಣ್ಣಗಳು ನಮ್ಮ ಕಣ್ಣು ಸೇರುವುದಿಲ್ಲ. ಕೆಂಪು, ಕಿತ್ತಳೆ, ಹಳದಿ ಬಣ್ಣಗಳು ಮಾತ್ರ ಕಾಣುತ್ತವೆ. ಅದರಲ್ಲಿ ಕೆಂಪು ತಿಳಿ ಬಣ್ಣಗಳನ್ನು ಮರೆಮಾಚಿ ಮೆರೆಯುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry