ಸೋಮವಾರ, ಏಪ್ರಿಲ್ 12, 2021
26 °C

ಸೆಕ್ಸ್‌ಟಿಂಗ್ ಜನಪ್ರಿಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಲೈಂಗಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮೊಬೈಲ್, ಅಂತರ್ಜಾಲ, ಸಾಮಾಜಿಕ ಸಂಪರ್ಕ ತಾಣಗಳಲ್ಲಿ ಕಾಮೋದ್ರೇಕ ಮಾತುಕತೆ, ಅಶ್ಲೀಲ ಸಂದೇಶ, ಸ್ವಂತ ನಗ್ನ ಚಿತ್ರಗಳ ವಿನಿಮಯ (ಸೆಕ್ಸ್‌ಟಿಂಗ್) ಮಾಡಿಕೊಳ್ಳುವ ಪ್ರವೃತ್ತಿಯು ಅಮೆರಿಕದ ಯುವ ಜನಾಂಗದಲ್ಲಿ ಹೆಚ್ಚು ಜನಪ್ರಿಯಗೊಳ್ಳುತ್ತಿದೆ.ಇಂತಹ ಕೃತ್ಯಗಳ ಬಗ್ಗೆ ನಿರಾಸಕ್ತಿಯ ಹೊರತಾಗಿಯೂ ಅಮೆರಿಕದ ಶೇ 30ರಷ್ಟು ಹದಿಹರೆಯದವರು ತಮ್ಮ ಬೆತ್ತಲೆ ಚಿತ್ರಗಳನ್ನು ಮೊಬೈಲ್ ಅಥವಾ ಅಂತರ್ಜಾಲದ ಮೂಲಕ ಸ್ನೇಹಿತರಿಗೆ ರವಾನಿಸುತ್ತಿದ್ದಾರೆ.ಟೆಕ್ಸಾಸ್ ನಗರದ 14ರಿಂದ 19 ವರ್ಷದೊಳಗಿನ ಸಾವಿರ ಯುವಕರ ಮೇಲೆ ನಡೆಸಿದ ಅಧ್ಯಯನದಿಂದ ಈ ಸಂಗತಿ ಬೆಳಕಿಗೆ ಬಂದಿದೆ.  ಈ ವಯೋಮಾನದವರಲ್ಲಿ `ಸೆಕ್ಸ್‌ಟಿಂಗ್~ ಸಾಮಾನ್ಯವಾಗಿದ್ದು ಶೇ 28ಕ್ಕೂ ಹೆಚ್ಚು ಯುವಕರು ತಮ್ಮ `ನಗ್ನ ದೇಹಸಿರಿ~ಯನ್ನು ಮೊಬೈಲ್ ಅಥವಾ ಅಂತರ್ಜಾಲದ ಮೂಲಕ ಮುಕ್ತವಾಗಿ ಅನ್ಯರ ವೀಕ್ಷಣೆಗೆ ಹರಿಯಬಿಡುತ್ತಿದ್ದಾರೆ. ಇಂಥ ಚಿತ್ರಗಳಿಗಾಗಿ ತಮಗೂ ಬೇಡಿಕೆ ಬಂದಿದೆ ಎಂದು ಶೇ 31ರಷ್ಟು ಯುವಕ, ಯುವತಿಯರು ಬಾಯಿ ಬಿಟ್ಟಿದ್ದಾರೆ.`ಸೆಕ್ಸ್‌ಟಿಂಗ್~ನಲ್ಲಿ ತೊಡಗಿರುವ ಯುವ ಜನಾಂಗ ತಮ್ಮ ಇತರ ವಾರಗೆಯವರಿಗಿಂತ ಹೆಚ್ಚು ಕಾಮಾಸಕ್ತರಾಗಿರುವುದೂ ಅಧ್ಯಯನದಿಂದ ಬೆಳಕಿಗೆ ಬಂದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.