ಕೋಲ್ಕತ್ತ (ಪಿಟಿಐ): ರಣಜಿ ಚಾಂಪಿಯನ್ ಕರ್ನಾಟಕ ತಂಡದವರು ವಿಜಯ ಹಜಾರೆ ಟ್ರೋಫಿ ರಾಷ್ಟ್ರೀಯ ಏಕದಿನ ಕ್ರಿಕೆಟ್ ಟೂರ್ನಿಯಲ್ಲೂ ಅಮೋಘ ಪ್ರದರ್ಶನ ಮುಂದುವರಿಸಿದ್ದಾರೆ. ಈ ತಂಡದವರು ರಾಬಿನ್ ಉತ್ತಪ್ಪ ಹಾಗೂ ಕರುಣ್ ನಾಯರ್ ಅವರ ಅಮೂಲ್ಯ ಶತಕಗಳ ನೆರವಿನಿಂದ ಗುಜರಾತ್ ತಂಡವನ್ನು 27 ರನ್ಗಳಿಂದ ಮಣಿಸಿ ಸೆಮಿಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.

ಜಾಧವಪುರ ವಿಶ್ವವಿದ್ಯಾಲಯ ಕ್ರೀಡಾ ಸಂಕೀರ್ಣದಲ್ಲಿ ಮಂಗಳವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡದವರು 50 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 301 ರನ್ ಗಳಿಸಿದರು. ಸವಾಲಿನ ಗುರಿ ಬೆನ್ನಟ್ಟಿದ ಗುಜರಾತ್ ತಂಡದವರು 48.2 ಓವರ್ಗಳಲ್ಲಿ274 ರನ್ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡರು.

ಆರಂಭಿಕ ಆಘಾತ: ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಲು ಅವಕಾಶ ಪಡೆದ ಕರ್ನಾಟಕ ತಂಡದವರು ಆರಂಭಿಕ ಆಘಾತ ಅನುಭವಿಸಿದರು. ಜಸ್ಪ್ರಿತ್ ಬುಮ್ರಾ ಹಾಗೂ ಕಮಲೇಶ್ ಠಾಕೂರ್ ಅವರ ಪ್ರಭಾವಿ ಬೌಲಿಂಗ್ ದಾಳಿಯ ಪರಿಣಾಮ ಆರಂಭದಲ್ಲಿ ಗುಜರಾತ್ ತಂಡ ಮೇಲುಗೈ ಸಾಧಿಸಲು ಕಾರಣವಾಯಿತು.

ರಾಬಿನ್ ಉತ್ತಪ್ಪ ಜೊತೆ ಇನಿಂಗ್ಸ್ ಆರಂಭಿಸಿದ ಮಯಂಕ್ ಅಗರವಾಲ್ ಮೊದಲ ಓವರ್ನ ಮೂರನೇ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ನಂತರ ಉತ್ತಪ್ಪ ಹಾಗೂ ಮನೀಷ್ ಪಾಂಡೆ ಎರಡನೇ ವಿಕೆಟ್ಗೆ 30 ರನ್ ಸೇರಿಸಿದರು. ಆಗ ಎಂಟು ರನ್ ಗಳಿಸಿದ ಮನೀಷ್ ಬೌಲ್ಡ್ ಆದರು. ಆ ಆಘಾತ ಅಲ್ಲಿಗೆ ಕೊನೆಯಾಗಲಿಲ್ಲ. ನಂತರ ಕ್ರೀಸ್ಗೆ ಬಂದ ಗಣೇಶ್ ಸತೀಶ್ ಹಾಗೂ ಭರವಸೆಯ ಬ್ಯಾಟ್ಸ್ಮನ್ ಕೆ.ಎಲ್.ರಾಹುಲ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಎರಡು ರನ್ಗಳ ಅಂತರದಲ್ಲಿ ಒಟ್ಟು ಮೂರು ವಿಕೆಟ್ ಪತನವಾದವು.

ಆಗ ಕರ್ನಾಟಕ ತಂಡದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 31 ರನ್. ಈ ಹಂತದಲ್ಲಿ ಜೊತೆಗೂಡಿದ್ದು ಉತ್ತಪ್ಪ ಹಾಗೂ ಯುವ ಬ್ಯಾಟ್ಸ್ಮನ್ ಕರುಣ್ ನಾಯರ್. ಇವರಿಬ್ಬರ ಜೊತೆಯಾಟ ಪಂದ್ಯಕ್ಕೆ ಹೊಸ ತಿರುವು ನೀಡಿತು. ಉತ್ತಪ್ಪ ಹಾಗೂ ನಾಯರ್ ಅವರು ತಂಡವನ್ನು ಆಘಾತದಿಂದ ಪಾರು ಮಾಡಿದ್ದು ಮಾತ್ರವಲ್ಲ; ದೊಡ್ಡ ಮೊತ್ತ ಕಲೆಹಾಕಲು ನೆರವಾದರು. ಇವರಿಬ್ಬರು ಐದನೇ ವಿಕೆಟ್ ಜೊತೆಯಾಟದಲ್ಲಿ 209 ರನ್ ಸೇರಿಸಿದರು.

ಉತ್ತಪ್ಪ ಹಾಗೂ ನಾಯರ್ ಅವರನ್ನು ನಿಯಂತ್ರಿಸಲು ಗುಜರಾತ್ ತಂಡದ ನಾಯಕ ಪಾರ್ಥಿವ್ ಪಟೇಲ್ ನಡೆಸಿದ ಪ್ರಯತ್ನ ಅಷ್ಟಿಷ್ಟಲ್ಲ. ಆದರೆ ಅದರಲ್ಲಿ ಅವರು ಯಶ ಕಾಣಲೇ ಇಲ್ಲ. ಆರಂಭದಲ್ಲಿ ಗುಡುಗಿದ್ದ ಜಸ್ಪ್ರಿತ್ ಹಾಗೂ ಕಮಲೇಶ್ ಮೇಲೆ ಈ ಜೋಡಿ ಒತ್ತಡ ಹೇರಿತು. ಜೊತೆಗೆ ಬಿರುಸಿನ ಆಟವಾಡಿತು.

121 ಎಸೆತ ಎದುರಿಸಿದ ಕರುಣ್ 120 ರನ್ ಗಳಿಸಿದರು.138 ನಿಮಿಷ ಕ್ರೀಸ್ನಲ್ಲಿದ್ದ ಅವರು ಒಂದು ಸಿಕ್ಸರ್ ಹಾಗೂ 14 ಬೌಂಡರಿ ಬಾರಿಸಿದರು. ಕರುಣ್ ಔಟಾದಾಗ ತಂಡದ ಸ್ಕೋರ್ 4 ವಿಕೆಟ್ ನಷ್ಟಕ್ಕೆ 240.

ಹಿರಿಯ ಹಾಗೂ ಅನುಭವಿ ಬ್ಯಾಟ್ಸ್ಮನ್ ಉತ್ತಪ್ಪ ಕೂಡ ಸೊಗಸಾದ ಇನಿಂಗ್ಸ್ ಕಟ್ಟಿದರು. ಆರಂಭದಲ್ಲಿ ವಿಕೆಟ್ ಪತನವಾಗುತ್ತಿದ್ದಾಗ ನಿಧಾನ ಆಟಕ್ಕೆ ಮುಂದಾಗಿದ್ದ ಅವರು ಬಳಿಕ ತಮ್ಮ ನೈಜ ಆಟವಾಡಿದರು. 135 ಎಸೆತ ಎದುರಿಸಿದ ಅವರು ಅಜೇಯ 132 ರನ್ ಗಳಿಸಿದರು. ಅವರ ಈ ಅಮೂಲ್ಯ ಇನಿಂಗ್ಸ್ನಲ್ಲಿ ಮೂರು ಸಿಕ್ಸರ್ ಹಾಗೂ 10 ಬೌಂಡರಿಗಳಿದ್ದವು. ರಾಬಿನ್ ಆಟದ ನೆರವಿನಿಂದ ಕರ್ನಾಟಕ 300 ರನ್ಗಳ ಗೆರೆ ಮುಟ್ಟಲು ಸಾಧ್ಯವಾಯಿತು. ನಾಲ್ಕು ವಿಕೆಟ್ ಕಬಳಿಸಿ ಜಸ್ಪ್ರಿತ್್ ಗುಜರಾತ್ ತಂಡದ ಪರ ಯಶಸ್ವಿ ಬೌಲರ್ ಎನಿಸಿದರು.

ಮಿಂಚಿದ ವಿನಯ್, ಮಿಥುನ್: ಸವಾಲಿನ ಗುರಿ ಎದುರು ಗುಜರಾತ್ ಮೊದಲ ಓವರ್ನಲ್ಲಿಯೇ ನಾಯಕ ಪಾರ್ಥಿವ್ ಪಟೇಲ್ ವಿಕೆಟ್ ಕಳೆದುಕೊಂಡಿತು. ಆದರೆ ಈ ತಂಡದ ರುಜುಲ್ ಭಟ್ (67) ಹಾಗೂ ಅಕ್ಷರ ಪಟೇಲ್ (93) ಆಕರ್ಷಕ ಅರ್ಧ ಶತಕ ಗಳಿಸಿ ತಂಡಕ್ಕೆ ಭರವಸೆ ಮೂಡಿಸಿದ್ದರು. ಇವರಿಬ್ಬರು ಐದನೇ ವಿಕೆಟ್ಗೆ 139 ರನ್ ಸೇರಿಸಿದ್ದರು. ಆಗ ಅಭಿಮನ್ಯು ಮಿಥುನ್ ಹಾಗೂ ನಾಯಕ ಆರ್.ವಿನಯ್ ಕುಮಾರ್ ಅವರ ದಾಳಿಗೆ ಸಿಲುಕಿದ ಗುಜರಾತ್ ತಂಡ ಕ್ರಮೇಣ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ವಿನಯ್ ಐದು ವಿಕೆಟ್ ಹಾಗೂ ಮಿಥುನ್ ಮೂರು ವಿಕೆಟ್ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.