ವಾಷಿಂಗ್ಟನ್ (ಐಎಎನ್ಎಸ್): ಸಿಖ್ಖರು ತಮ್ಮ ಸಾಂಪ್ರದಾಯಿಕ ಪೇಟ ಹಾಗೂ ಗಡ್ಡದ ಜತೆಗೇ ಅಮೆರಿಕ ಸೇನೆಯಲ್ಲಿ ಸೇವೆ ಸಲ್ಲಿಸಲು ಅನುಮತಿ ನೀಡುವಂತೆ ಕೋರಿ ಸಂಸದರು ಮಾಡಿಕೊಂಡ ಮನವಿಯನ್ನು ಭಾರತದ ರಾಯಭಾರಿ ಎಸ್. ಜೈಶಂಕರ್ ಸ್ವಾಗತಿಸಿದ್ದಾರೆ.

ಈ ಸಂಬಂಧ ಅಮೆರಿಕ ಕಾಂಗ್ರೆಸ್ನ (ಡೆಮಾಕ್ರಟಿಕ್ ಹಾಗೂ ರಿಪಬ್ಲಿಕನ್ ಸೇರಿದಂತೆ) ನೂರಕ್ಕೂ ಹೆಚ್ಚು ಸಂಸದರು ಮಾ. 10ರಂದು ರಕ್ಷಣಾ ಕಾರ್ಯದರ್ಶಿ ಚಕ್ ಹೆಗಲ್ ಅವರಿಗೆ ಪತ್ರವೊಂದನ್ನು ಬರೆದಿದ್ದು, ಸೇನೆಯಲ್ಲಿ ಸಿಖ್ಖರಿಗೆ ಅವಕಾಶ ನೀಡಲು ಕೋರಿದ್ದಾರೆ.

ಪತ್ರದ ಕುರಿತು ಪ್ರತಿಕ್ರಿಯಿಸಿರುವ ಜೈಶಂಕರ್, ‘ಅಮೆರಿಕದಲ್ಲಿ ಸಿಖ್ಖರ ಸಾಂಸ್ಕೃತಿಕ ಹಕ್ಕುಗಳನ್ನು ಎತ್ತಿಹಿಡಿಯುವಲ್ಲಿ ಕಾಂಗ್ರೆಸ್ಸಿಗರ ಈ ಯತ್ನ ಶ್ಲಾಘನೀಯ. ತ್ಯಾಗ ಬಲಿದಾನಗಳ ಮೂಲಕ ಭಾರತ ಹೆಮ್ಮೆಪಡುವ ಕಾರ್ಯವನ್ನು ಸಿಖ್ ಸಮುದಾಯ ಮಾಡುತ್ತಿದೆ’ ಎಂದರು.

ಕಳೆದ ಮೂವತ್ತು ವರ್ಷಗಳ ಅವಧಿಯಲ್ಲಿ ಸಿಖ್ ಸಮುದಾಯದ ಕೇವಲ ಮೂವರಿಗೆ ಅಮೆರಿಕ ಸೇನೆಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಲಾಗಿದೆ.
ಗಡ್ಡ ಹಾಗೂ ಸಾಂಪ್ರದಾಯಿ ಪೇಟ ಸಮೇತ ಸಿಖ್ಖರು ಸೇನೆಯಲ್ಲಿ ಸೇವೆ ಸಲ್ಲಿಸಲು ಅಮೆರಿಕ ರಕ್ಷಣಾ ಇಲಾಖೆ ವಿಧಿಸಿರುವ ನಿರ್ಬಂಧ ಸಡಿಲಗೊಳಿಸುವಲ್ಲಿ ಸಂಸದರ ಈ ಯತ್ನ ಸಹಕಾರಿಯಾಗಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.