ಸೋಮವಾರ, ಮೇ 23, 2022
20 °C

ಸೇವೆ ಸ್ಥಗಿತ: ವೈದ್ಯರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸಪೇಟೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ರಾಷ್ಟ್ರವ್ಯಾಪಿ ವೈದ್ಯರು ಮುಷ್ಕರ ನಡೆಸಿದಂತೆ ಹೊಸಪೇಟೆಯ ಭಾರತೀಯ ವೈದ್ಯಕೀಯ ಸಂಘದ ತಾಲ್ಲೂಕು ಘಟಕದ ನೇತೃತ್ವದಲ್ಲಿ ತನ್ನ ಎಲ್ಲ ಸೇವೆಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು.ಅಧ್ಯಕ್ಷ ಡಾ.ವಿಶ್ವನಾಥ ದೀಪಾಲಿ ನೇತೃತ್ವದಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ವೈದ್ಯರುಗಳು ತಮ್ಮ ಎಲ್ಲ ಸೇವೆಗಳನ್ನು ಸ್ಥಗಿತಗೊಳಿಸಿ (ತುರ್ತು ಸೇವೆ ಹೊರತು ಪಡಿಸಿ)ನಗರದಲ್ಲಿ ಬೃಹತ್ ರ‌್ಯಾಲಿ ನಡೆಸಿ ಪೂಣ್ಯಮೂರ್ತಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸುವ ಮೂಲಕ ಪ್ರತಿಭಟನೆ ನಡೆಸಿ ಶಾಸಕ ಆನಂದಸಿಂಗ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ಬೇಡಿಕೆಗಳು: ಎಂಸಿಎ ಮರುಸ್ಥಾಪನೆ ವಿಳಂಬ ಮಾಡಬಾರದು, ಅಲ್ಪಾವಧಿ ಕೋರ್ಸ್ ವಿರೋಧಿಸುವುದು, ಕ್ಲಿನಿಕಲ್ ಎಸ್ಟಾಬ್ಲೆಷ್‌ಮೆಂಟ್ ಬಿಲ್ ವಿರೋಧಿಸುವುದು ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಸಲ್ಲಿಸಿದರು.ಕಾರ್ಯದರ್ಶಿ ಡಾ.ಗುರುರಾಜ್ ಆಚಾರ್, ಡಾ.ನಾಜ್ ಜಹಾನ್ ಶೇಖ್, ಡಾ.ರಮ್ಯ, ಡಾ.ಹೇಮಲತಾ, ಡಾ.ರಾಯಲು, ಡಾ.ಶ್ರೀನಿವಾಸ ದೇಶಪಾಂಡೆ, ಡಾ.ತನುಜಾ ಹುಬ್ಬಳಿ, ಡಾ.ರಾಜಾರಾಮ್ ಭಾಗವತ್ ಡಾ.ಬಿ.ಜಿ. ಆಚಾರ್ಯ, ಡಾ.ರಾಘವೇಂದ್ರರಾವ್, ಡಾ.ರಾಜೇಂದ್ರಪ್ರಸಾದ್ ಮುಂತಾದವರು ಕ್ಲಿನಿಕ್‌ಗಳನ್ನು ಬಂದ್ ಮಾಡಿ ರ‌್ಯಾಲಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.