ಶನಿವಾರ, ಮೇ 21, 2022
27 °C

ಸೈಕ್ಲಿಂಗ್: ಶ್ರೀಧರ್, ಸೀಮಾಗೆ ಸ್ವರ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೈಕ್ಲಿಂಗ್: ಶ್ರೀಧರ್, ಸೀಮಾಗೆ ಸ್ವರ್ಣ

ಮೈಸೂರು: ಬಾಗಲಕೋಟೆಯ ಶ್ರೀಧರ ಸವಣೂರ ಮತ್ತು ವಿಜಾಪುರ ಕ್ರೀಡಾ ನಿಲಯದ ಸೀಮಾ ಅಡಗಲ್ ಭಾನುವಾರ ನಡೆದ ರಾಜ್ಯಮಟ್ಟದ ದಸರಾ ಮುಕ್ತ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗದ ಚಿನ್ನ ಗೆದ್ದರು.ಬೆಳಿಗ್ಗೆ ಹುಣಸೂರು-ನಂಜನಗೂಡು ರಸ್ತೆಯಲ್ಲಿ ನಡೆದ ಪುರುಷರ 40 ಕಿಲೋಮೀಟರ್ ರೋಡ್ ರೇಸ್ ಅತ್ಯಂತ ಕುತೂಹಲ ಕೆರಳಿಸಿತ್ತು. ಕೇವಲ ಒಂದು ಸೆಕೆಂಡ್ ಅಂತರದಲ್ಲಿ ಸ್ವರ್ಣ ಪದಕವನ್ನು ಶ್ರೀಧರ ಸವಣೂರು (ಕಾಲ: 1ಗಂಟೆ, 1ನಿಮಿಷ, 27ಸೆಕೆಂಡು) ಕೊರಳಿಗೆ ಹಾಕಿಕೊಂಡರು. ದ್ವಿತೀಯ ಸ್ಥಾನ ಪಡೆದ ವಿಜಾಪುರದ ಆಸೀಫ್ ಅತ್ತಾರ್ (ಕಾಲ: 1ಗಂಟೆ, 1ನಿಮಿಷ, 28ಸೆಕೆಂಡು) ಮತ್ತು ತೃತೀಯ ಸ್ಥಾನ ಪಡೆದ ಬಾಗಲಕೋಟೆಯ ಸಾಬು ಗಾಣಿಗೇರ (ಕಾಲ: 1ಗಂಟೆ, 1ನಿಮಿಷ, 29ಸೆಕೆಂಡು) ಶ್ರೀಧರ್ ಸವಣೂರಗೆ ತೀವ್ರ ಸ್ಪರ್ಧೆಯೊಡ್ಡಿದ್ದರು.  ಫಲಿತಾಂಶ: ಪುರುಷರು: 40 ಕಿ.ಮೀ. ರೋಡ್ ರೇಸ್: ಶ್ರೀಧರ ಸವಣೂರು (ಬಾಗಲಕೋಟೆ)-1, ಅಸೀಫ್ ಅತ್ತಾರ್ (ವಿಜಾಪುರ)-2, ಸಾಬು ಗಾಣಿಗೇರ (ಬಾಗಲಕೋಟೆ)-3, ಶ್ರೀಶೈಲ ಲಾಯಣ್ಣವರ (ವಿಜಾಪುರ)-4, ಲಕ್ಷ್ಮಣ ತೇರದಾಳ -5. ಕಾಲ: 1ಗಂ,1ನಿ, 27ಸೆ;ಮಹಿಳೆಯರು: 40 ಕಿ.ಮೀ ರೋಡ್ ರೇಸ್: ಸೀಮಾ ಅಡಗಲ್ (ಕ್ರೀಡಾ ವಸತಿ ನಿಲಯ, ವಿಜಾಪುರ)-1, ಜಹೀರಾ ಅತ್ತಾರ್ (ವಿಜಾಪುರ)-2,  ಗೀತಾಂಜಲಿ ಜೋತೆಪ್ಪನವರ (ಕ್ರೀಡಾ ವಸತಿನಿಲಯ ವಿಜಾಪುರ)-3, ರೇಣುಕಾ ದಂಡಿನ (ಕ್ರೀಡಾ ನಿಲಯ ವಿಜಾಪುರ)-4, ಶೈಲಾ ಮಟ್ಟಿಹಾಳ (ಬಾಗಲಕೋಟೆ)-5. ಕಾಲ: 1ಗಂ, 20ನಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.