ಬುಧವಾರ, ಜನವರಿ 22, 2020
28 °C

ಸೈದಾಪುರ: ವಾಸವಿ ಶಾಲಾ ಮಕ್ಕಳ ಉತ್ತಮ ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುರುಮಠಕಲ್‌: -ಸೈದಾಪುರ ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸೈದಾಪುರ ವಾಸವಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ.ಕಿರಿಯ ಪ್ರಾಥಮಿಕ ವಿಭಾಗದ ಛದ್ಮವೇಷದಲ್ಲಿ ರಾಘವೇಂದ್ರ, ಕ್ಲೇ ಮಾಡಲಿಂಗ್‌ನಲ್ಲಿ ಸುದರ್ಶನ, ಅಭಿ­ನಯ ಗೀತೆಯಲ್ಲಿ ಪವಿತ್ರ, ರಸಪ್ರಶ್ನೆ­ಯಲ್ಲಿ ಅರ್ಚನಾ ಪ್ರಥಮ ಸ್ಥಾನ ಗಳಿಸಿದ್ದಾರೆ. ಧಾರ್ಮಿಕ ಪಠಣದಲ್ಲಿ ಅಬ್ದುಲ್ಲಾ ದ್ವಿತೀಯ ಸ್ಥಾನ, ಕಂಠಪಾಠ­ದಲ್ಲಿ ಅಬ್ದುಲ್ಲಾ, ಚಿತ್ರಕಲೆಯಲ್ಲಿ ಆಂಜನೇಯ ತೃತೀಯ ಸ್ಥಾನ ಪಡೆದಿದ್ದಾರೆ.ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ಧಾರ್ಮಿಕ ಪಠಣದಲ್ಲಿ ಅಲ್ಫಿಯಾ ತಬಸ್ಸುಮ್‌, ಛದ್ಮವೇಷ­ದಲ್ಲಿ ಬಂದಪ್ಪ, ಜಾನಪದ ನೃತ್ಯದಲ್ಲಿ ಶಿವಕುಮಾರ ಪ್ರಥಮ ಸ್ಥಾನ, ಸಂಸ್ಕೃತದಲ್ಲಿ ಮನೋಜ ದದ್ದಲ, ಚಿತ್ರಕಲೆಯಲ್ಲಿ ಅಶೋಕ, ಯೋಗಾಸನ­ದಲ್ಲಿ ಶಿವರಾಜ ಪಾಟೀಲ, ಕ್ವಿಜ್‌ನಲ್ಲಿ ಸಂಜನ ದ್ವಿತೀಯ ಸ್ಥಾನ,  ಲಘು ಸಂಗೀತದಲ್ಲಿ ಅರ್ಚನಾ, ಅಭಿನಯ ಗೀತೆಯಲ್ಲಿ ಬಸವರಾಜ ತೃತೀಯ ಸ್ಥಾನ ಪಡೆದಿದ್ದಾರೆ.ವಿದ್ಯಾರ್ಥಿಗಳ ಸಾಧನೆಗೆ ಮುಖ್ಯ­ಶಿಕ್ಷಕ ಬಸವಲಿಂಗಪ್ಪ ವಡಿಗೇರಕರ್, ಶಿಕ್ಷಕರಾದ ಹಸನವಾಡಿ, ರಾಧಾ, ಭೀಮಣ್ಣ ವಡವಟ್, ಕಾಸಿಂಬಿ, ಬನಶಂಕರ, ಮಲ್ಲಿಕಾರ್ಜುನ ಅರಿಕೇರ­ಕರ್‌, ತಾಯಮ್ಮ, ಕಾವೇರಿ, ಸರಸ್ವತಿ, ಶೈನಾಜ್ ಬೇಗಂ ಅಭಿನಂದಿಸಿದ್ದಾರೆ.

ಪ್ರತಿಕ್ರಿಯಿಸಿ (+)