ಭಾನುವಾರ, ಮೇ 16, 2021
28 °C

ಸೊಮಾಲಿಯಾ: ಶಿಕ್ಷಕನಿಗೆ ಉಪಪ್ರಧಾನಿ ಪಟ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಐಎಎನ್‌ಎಸ್): ಉತ್ತರ ಲಂಡನ್‌ನ ಬ್ರೆಂಟ್ ಪ್ರದೇಶದ ನ್ಯೂಮನ್ ಕ್ಯಾಥೋಲಿಕ್ ಕಾಲೇಜಿನಲ್ಲಿ ಕಳೆದ ಎರಡು ವರ್ಷಗಳಿಂದ ಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರು ಈಗ ಸೊಮಾಲಿಯಾದ ಉಪ ಪ್ರಧಾನಿ ಪಟ್ಟವನ್ನು ಅಲಂಕರಿಸಿದ್ದಾರೆ. ಮಹಮ್ಮದ್ ಇಬ್ರಾಹಿಂ ಹೆಸರಿನ 64 ವರ್ಷದ ಈ ಶಿಕ್ಷಕರು ಬೇಸಿಗೆ ರಜೆಗೆಂದು ಸ್ವದೇಶಕ್ಕೆ ಹೋದವರು ಮರಳಿ ಕೆಲಸಕ್ಕೆ ಹಾಜರಾಗಿರಲಿಲ್ಲ.ಈ ಬಗ್ಗೆ ಕಾಲೇಜಿನ ಮುಖ್ಯ ಶಿಕ್ಷಕ ರಿಚರ್ಡ್ ಕೋಲ್ಕಾ ಅವರು ಇಬ್ರಾಹಿಂ ಹೆಸರನ್ನು ಅಂತರ್ಜಾಲದ ಗೂಗಲ್ ತಾಣದಲ್ಲಿ ತಡಕಾಡಿದಾಗ ಅವರು ಸೊಮಾಲಿಯಾದ ಉಪ ಪ್ರಧಾನಿ ಪಟ್ಟಕ್ಕೆ ನಿಯೋಜಿತರಾಗಿರುವುದು ಸೊಮಾಲಿಯಾದ ಸರ್ಕಾರಿ ದಾಖಲೆಗಳಲ್ಲಿ ಕಂಡು ಬಂದಿತು ಎಂದು `ಡೈಲಿ ಮೇಲ್~ ವರದಿ ಮಾಡಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.