ಸೊರಬ: ತಾಲ್ಲೂಕಿನ ಶಕುನವಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿಳಗಲಿ ಗ್ರಾಮದಲ್ಲಿ ರೂ. 35 ಲಕ್ಷ ವೆಚ್ಚದಲ್ಲಿ ವಿವಿಧ ಕಾಮಗಾರಿಗೆ ಶಾಸಕ ಎಚ್. ಹಾಲಪ್ಪ ಶನಿವಾರ ಗುದ್ದಲಿಪೂಜೆ ನೆರವೇರಿಸಿದರು.

ಗ್ರಾಮದ ದೊಡ್ಡಕೆರೆ ಲಕ್ಕವಳ್ಳಿ ಗಣೇಶಪ್ಪ ಜಮೀನಿನ ಬಳಿ ಜಿ.ಪಂ. ಅನುದಾನದ ಅಡಿಯಲ್ಲಿ ರೂ. 25 ಲಕ್ಷ ವೆಚ್ಚದ ಪಿಕಪ್, ರೂ. 10 ಲಕ್ಷ ವೆಚ್ಚದ ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿಗೆ ಚಾಲನೆ ನೀಡಿದ ಅವರು, ಮದರಸಾ ಕಟ್ಟಡ ಉದ್ಘಾಟಿಸಿ, ಭಾಗ್ಯಲಕ್ಷ್ಮೀ ಬಾಂಡ್ ವಿತರಿಸಿದರು. ಕವಾಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ತಾಲ್ಲೂಕಿನ 37 ಮಸೀದಿಗಳಲ್ಲಿ 24ಕ್ಕೆ ತಲಾ ರೂ. 3 ಲಕ್ಷ ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದರು. ಕುಡಿಯುವ ನೀರಿನ ಸಮಸ್ಯೆ ಎದುರಾದಲ್ಲಿ ಕೂಡಲೇ ಪರಿಹಾರ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾ.ಪಂ. ಅಧ್ಯಕ್ಷ ಶಿವರಾಯಪ್ಪ ಅಧ್ಯಕ್ಷತೆ ವಹಿಸಿದ್ದರು.

ಜಿ.ಪಂ. ಸದಸ್ಯೆ ಮಲ್ಲಮ್ಮ ಮಲ್ಲಿಕಾರ್ಜುನ, ತಾ.ಪಂ. ಸದಸ್ಯ ಸದಾನಂದಗೌಡ, ಗ್ರಾ.ಪಂ. ಉಪಾಧ್ಯಕ್ಷೆ ಮಲ್ಲಮ್ಮ ಮಲ್ಲಪ್ಪ, ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಉಪಾಧ್ಯಕ್ಷ ಜೈರುದ್ದೀನ್, ಕಾರ್ಯದರ್ಶಿ ಮಹಬೂಬ್ ಆಲಿಖಾನ್, ಎಪಿಎಂಸಿ ಉಪಾಧ್ಯಕ್ಷ ರುದ್ರಗೌಡ, ಜಡೆ ಗ್ರಾ.ಪಂ. ಅಧ್ಯಕ್ಷ ಪಾಲಾಕ್ಷಪ್ಪ, ಹನುಮಂತಪ್ಪ ಕಂತ್ರಾಜಿ, ಇಬ್ರಾಹಿಂಖಾನ್, ಬಸವಣ್ಣೆಮ್ಮ, ಸಂಜೀವ್ಕುಮಾರ್, ಗಣೇಶಪ್ಪ, ಬಸವರಾಜ್ ಹರಿಜನ, ಮಲ್ಲಿಕಾರ್ಜುನ ಹೆಂಡಗಾರ್, ಮೊಯ್ಸಿನ್, ಖಾದರ್ಸಾಬ್ ಇತರರು ಹಾಜರಿದ್ದರು.

ತಲಗಡ್ಡೆ ಗ್ರಾಮದಲ್ಲಿ ರೂ. 2ಲಕ್ಷ ವೆಚ್ಚದ ಮೈಲಾರೇಶ್ವರ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಅವರು, ತಾಲ್ಲೂಕಿನ 130 ದೇವಸ್ಥಾನಗಳು ಅಭಿವೃದ್ಧಿ ಕಾಣಲಿವೆ ಎಂದರು.

ಶಾಂತಪುರದ ಶಿವಾನಂದ ಮಹಾಂತ ಸ್ವಾಮೀಜಿ ಉಪಸ್ಥಿತರಿದ್ದರು.

ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಆರ್. ಪಾಟೀಲ್, ಮೋಹನಗೌಡ, ಜಯಶೀಲಪ್ಪ, ರಾಮಣ್ಣ, ಜಗದೀಶ್, ಧರ್ಮಣ್ಣ, ಭೀಮಪ್ಪ, ಆರ್.ಆರ್. ದೊಡ್ಮನಿ, ಜಯಶೀಲಮ್ಮ ಇತರರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.