ಗುರುವಾರ , ಮೇ 6, 2021
31 °C

ಸೊಳ್ಳೆ ನಿಯಂತ್ರಣಕ್ಕೆ ಫಾಗಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ತಾಲ್ಲೂಕಿನ ಲಕ್ಕುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ಸಿಬ್ಬಂದಿ ಗ್ರಾಮದಲ್ಲಿ ಫಾಗಿಂಗ್ ಆರಂಭಿಸಿದ್ದಾರೆ.ಆರೋಗ್ಯ ಸಿಬ್ಬಂದಿ ಗ್ರಾಮದ ಮನೆ ಮನೆಗೆ ತೆರಳಿ ಮನೆಯ ಒಳಗೆ ಮತ್ತು ಹೊರಗಿನ ನೀರಿನ ಸಂಗ್ರಹ ತೊಟ್ಟಿಯಲ್ಲಿ ಬೆಳೆಯುವ ಲಾರ್ವ, ಸೊಳ್ಳೆ ಮರಿ ಹುಟ್ಟುವ ಸ್ಥಿತಿ ಬಗ್ಗೆ ಸಮೀಕ್ಷೆ ಮಾಡಿ ಜನರಿಗೆ ಅರಿವು ಮೂಡಿಸಿದರು. ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಚಿಕೂನ್ ಗುನ್ಯಾ, ಡೆಂಗೆ ಜ್ವರ ಸೊಳ್ಳೆಗಳಿಂದ ಬರುತ್ತಿದ್ದು. ಸೊಳ್ಳೆಗಳ ಉತ್ಪತ್ತಿ ತಾಣಗಳಾದ ನೀರಿನ ಸಂಗ್ರಹ ತೊಟ್ಟಿಯಲ್ಲಿ ಲಾರ್ವ ನಾಶ ಪಡಿಸಬೇಕು.  ಪರಿಸರ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲಾಯಿತು.ಆರೋಗ್ಯ ಶಿಕ್ಷಣಾಧಿಕಾರಿ ಪಿ.ಕೆ.ಚಿಲ್ಲಾಳ, ಆರೋಗ್ಯ ಸಹಾಯಕ  ಬಿ.ಎಚ್ ಕುಲಕರ್ಣಿ, ಎಸ್. ಬಿ. ಗಡಾದ, ಸಿದ್ದಪ್ಪ ಎನ್ ಲಿಂಗಧಾಳ, ಪಿಡಿಓ ಎಸ್. ಎಸ್. ಕಲ್ಮನಿ, ಗ್ರಾ.ಪಂ. ಸದಸ್ಯ ಮಂಜುನಾಥ ಯಲಿಶಿರುಂಜ, ಆಶಾ ಕಾರ್ಯಕರ್ತೆಯರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.