ಶನಿವಾರ, ಮಾರ್ಚ್ 6, 2021
18 °C

ಸೊಸೆ ಮೇಲೆ ಅಮಿತಾಬ್‌ ಮುನಿಸು !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೊಸೆ ಮೇಲೆ ಅಮಿತಾಬ್‌ ಮುನಿಸು !

ಮುಂಬೈ: ಕರಣ್ ಜೋಹರ್ ನಿರ್ದೇಶನದ ‘ಎ ದಿಲ್ ಹೈ ಮುಷ್ಕಿಲ್‌’ ಸಿನಿಮಾದಲ್ಲಿ ರಣಬೀರ್ ಕಪೂರ್ ಜತೆ ಹಸಿ ಹಸಿ ದೃಶ್ಯಗಳಲ್ಲಿ  ಕಾಣಿಸಿಕೊಂಡಿರುವ ಐಶ್ವರ್ಯ ರೈ ಮೇಲೆ ಅವರ ಮಾವ ಬಾಲಿವುಡ್‌ನ ಬಿಗ್ ಬಿ ಮುನಿಸಿಕೊಂಡಿದ್ದಾರೆ.ಸಿನಿಮಾದಲ್ಲಿ ಐಶ್ವರ್ಯ ಮತ್ತು ಕರಣ್ ಚುಂಬನದ ದೃಶ್ಯಗಳನ್ನು ತೆಗೆದುಹಾಕುವಂತೆ ಅಮಿತಾಬ್ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಬಚ್ಚನ್ ಕುಟುಂಬವು ಐಶ್ವರ್ಯ ಅವರ ಸಿನಿಮಾಗಳ ವಿಷಯದಲ್ಲಿ ತಲೆ ಹಾಕುವುದಿಲ್ಲ. ಇದೆಲ್ಲ ಸುಳ್ಳು ಸುದ್ದಿ ಎಂದು ಅವರ ಕುಟುಂಬದ ಮೂಲಗಳು ಈ ಸುದ್ದಿಯನ್ನು ಅಲ್ಲಗಳೆದಿವೆ.ರಣಬೀರ್ ಕಪೂರ್, ಐಶ್ವರ್ಯ ರೈ ಮತ್ತು ಅನುಷ್ಕಾ ಶರ್ಮಾ ಅಭಿನಯದ ‘ಎ ದಿಲ್ ಹೈ ಮುಷ್ಕಿಲ್‌’ ಸಿನಿಮಾ ಅಕ್ಟೋಬರ್ 28ರಂದು ತೆರೆ ಕಾಣಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.