ಶುಕ್ರವಾರ, ಜೂನ್ 18, 2021
24 °C

ಸೋಮೇಶ್ವರ, ಹಂಜ ಅಭಯಾರಣ್ಯದಲ್ಲಿ ಬೆಂಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದಾಪುರ: ಪಶ್ಚಿಮ ಘಟ್ಟ ತಪ್ಪಲು ಪ್ರದೇಶವಾದ ಸೋಮೇಶ್ವರ ಅಭಯಾರಣ್ಯದ ಹಂಜ ಕಾಡಿನಲ್ಲಿ ಎರಡು ದಿನಗಳಿಂದ ಬೆಂಕಿ ಉರಿಯುತ್ತಿದ್ದು, ಭಾನುವಾರ ರಾತ್ರಿ ಸೋಮೇಶ್ವರ ಅಭಯಾರಣ್ಯದ ಅರಣ್ಯಾಧಿಕಾರಿ ಲೋಹಿತ್ ಕುಮಾರ್ ನೇತೃತ್ವದ ತಂಡ ಬೆಂಕಿ ನಂದಿಸಿದೆ.ಸ್ಥಳೀಯರ ಪ್ರಕಾರ ಶನಿವಾರವೇ ಅಭಯಾರಣ್ಯ ವ್ಯಾಪ್ತಿಯಲ್ಲಿ ಬೆಂಕಿ ತಗುಲಿದೆ. ಸೊಮೇಶ್ವರ ಅಭಯಾರಣ್ಯ, ಶಿವಮೊಗ್ಗ ಜಿಲ್ಲೆಗೆ ಹೊಂದಿಕೊಂಡಿರುವ  ಉಳ್ತ ಅಭಯಾರಣ್ಯದ  ಸುಮಾರು 15 ಎಕರೆ ಪ್ರದೇಶಅಗ್ನಿಗೆ ಆಹುತಿಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿದಿದ್ದರೂ ವಿಳಂಬವಾಗಿ ಮೇಲಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ದೂರಿದ್ದಾರೆ.

 

ಹಂಜಾ, ಕಾರೀಮನೆ, ಎಡಮಲೆ ಪರಿಸರಕ್ಕೆ ಬೆಂಕಿಯ ಕೆನ್ನಾಲಿಗೆ ರಾತ್ರಿ ವೇಳೆ ಸಂಪೂರ್ಣವಾಗಿ ಗೋಚರಿಸುತ್ತಿದ್ದು ಭಾನುವಾರ ಸಂಜೆ ವೇಳೆ ಅರಣ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ನಂದಿಸಿದರು. ಮಧ್ಯರಾತ್ರಿಯ ವರೆಗೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ಹಂಜದ ಸೋಮೇಶ್ವರ ಅಭಯಾರಣ್ಯ ಎತ್ತರ ತಗ್ಗುಗಳಿಂದ ಕೂಡಿದ್ದು ಬೆಂಕಿ ಬಹುಬೇಗ ಅರಣ್ಯ ವ್ಯಾಪ್ತಿಗೆ ಪಸರಿಸಿ ಅಪಾರ ಪ್ರಮಾಣದ ಅರಣ್ಯ , ಜೀವ ವೈವಿಧ್ಯ ನಾಶವಾಗಿದೆ. ಅರಣ್ಯ ವ್ಯಾಪ್ತಿಯಲ್ಲಿ ಬೆಂಕಿ ಪೂರ್ಣವಾಗಿ ಆರದೇ ಇರುವುದು, ಹಳೆ ಮರಗಳು ಬೆಂಕಿಗೆ ಬಲಿಯಾಗಿರುವುದರಿಂದ ಸೋಮವಾರವೂ ಅರಣ್ಯ ತಪ್ಪಲು ಪ್ರದೇಶದಲ್ಲಿ ಹೊಗೆ-ಕಮಟು ವಾಸನೆಯಿಂದ ಇತ್ತು.ಬೆಂಕಿ ಹತೋಟಿಯಲ್ಲಿದೆ: ಅಭಯಾರಣ್ಯ ವ್ಯಾಪ್ತಿಯ ಹಂಜಾ ಪ್ರದೇಶದ 1ಎಕರೆ ಪ್ರದೇಶದ ಕಾಡಿಗೆ ಬೆಂಕಿ ಹತ್ತಿಕೊಂಡಿತ್ತು. ತಳಮಟ್ಟದಲ್ಲಿ ಮಾತ್ರ ಬೆಂಕಿ ಹತ್ತಿಕೊಂಡಿದ್ದು ಭಾನುವಾರ ರಾತ್ರಿ ಕಾರ್ಯಾಚರಣೆ ನಡೆಸಿ ಆರಿಸಲಾಗಿದೆ. ಇದರ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ.

 

ಅಭಯಾರಣ್ಯ ವ್ಯಾಪ್ತಿಯಲ್ಲಿ ಹಾದು ಹೋಗುವ ಹೆದ್ದಾರಿ ಬದಿಯಲ್ಲಿ ಬೆಂಕಿಯಿಂದ ಅರಣ್ಯ ರಕ್ಷಿಸಿ ಎಂಬ ನಾಮಫಲಕವನ್ನು ಇಲಾಖೆ ವತಿಯಿಂದ ಸಾಕಷ್ಟು ಮುಂಚಿತವಾಗಿ ಹಾಕಲಾಗಿದೆ ಎಂದು ಸೊಮೇಶ್ವರ ಅಭಯಾರಣ್ಯದ ವನ್ಯಜೀವಿ ವಿಭಾಗ ಅರಣ್ಯಾಧಿಕಾರಿ ಲೋಹಿತ್ ಕುಮಾರ ಪ್ರಜಾವಾಣಿಗೆ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.