ಸೋಮವಾರ, ಮೇ 17, 2021
26 °C

ಸೌದಿ ಅರೇಬಿಯಾ ಮನವಿ ಹಜ್ ಯಾತ್ರೆ ಮುಂದೂಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಿಯಾದ್ (ಐಎಎನ್‌ಎಸ್): ಮುಸಲ್ಮಾನರ ಪವಿತ್ರ ಧಾರ್ಮಿಕ ಯಾತ್ರಾ ಕೇಂದ್ರವಾದ ಮೆಕ್ಕಾದ ಪ್ರಮುಖ ಮಸೀದಿಯಲ್ಲಿ ವಿಸ್ತರಣಾ ಕಾರ್ಯ ನಡೆಯುತ್ತಿರುವುದರಿಂದ, ವಿದೇಶಿ ಯಾತ್ರಿಕರು ಪ್ರಸ್ತುತ ವರ್ಷ ತಮ್ಮ ಹಜ್ ಯಾತ್ರೆಯನ್ನು ಮುಂದೂಡಬೇಕು ಎಂದು ಸೌದಿ ಅರೇಬಿಯಾ ಸರ್ಕಾರ ಮನವಿ ಮಾಡಿದೆ.ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಈ ಕುರಿತು ಮೆಕ್ಕಾದ ಪವಿತ್ರ ಕುರಾನ್ ಟಿ.ವಿ ಚಾನೆಲ್‌ನಲ್ಲಿ ಸರಣಿ ಘೋಷಣೆಗಳನ್ನು ಪ್ರಸಾರ ಮಾಡುತ್ತಿದೆ ಎಂದು ಅರಬ್ ನ್ಯೂಸ್ ವರದಿ ಮಾಡಿದೆ.ಯಾತ್ರಿಕರ ದಟ್ಟಣೆ ಮತ್ತು ಕಾಲ್ತುಳಿತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ, ಪ್ರಸ್ತತ ವರ್ಷ ವಿದೇಶಿ ಯಾತ್ರಿಕರ ಸಂಖ್ಯೆಯನ್ನು ಶೇ 20ರಷ್ಟು ಹಾಗೂ ದೇಶಿ ಯಾತ್ರಿಕರ ಸಂಖ್ಯೆಯನ್ನು ಶೇ 50ರಷ್ಟು ತಗ್ಗಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಇಲ್ಲಿನ ಪ್ರಧಾನ ಮುಫ್ತಿ ಶೇಕ್ ಅಬ್ದುಲ್ ಅಜೀಜ್ ಅಲ್- ಅಶೇಕ್ ಸರ್ಕಾರದ ನಿರ್ಧಾರ ಕುರಿತು ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.