ಕಟ್ಟಿಗೆ ಒಲೆ ಉರಿಯುತ್ತಿತ್ತು. ಹಿತ್ತಾಳೆ ಪಾತ್ರೆಯಲ್ಲಿ ಆ ಬಾಣಸಿಗ ಒಗ್ಗರಣೆಗೆಂದು ಎಣ್ಣೆ ಹಾಕಿದರು. ಮೆಣಸಿನಕಾಯಿ, ಧನಿಯಾ, ಚಕ್ಕೆ, ಶುಂಠಿ, ಲವಂಗ ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ ಮಾಡಿದ ಮಸಾಲೆಯನ್ನು ಪಾತ್ರೆಗೆ ಸುರಿದು ಕಲಕುತ್ತಲೇ ವಿವರಣೆಯನ್ನೂ ನೀಡತೊಡಗಿದರು. ಒಗ್ಗರಣೆಗೆ ಅರ್ಧ ಬೇಯಿಸಿದ್ದ ಮಟನ್ ಹಾಕಿ ಹುರಿಯಲಾರಂಭಿಸಿದರು. ಬಾಸುಮತಿ ಅಕ್ಕಿಯೊಂದಿಗೆ ಈ ಮಟನ್ ಮಿಶ್ರಣ ಮಾಡಿ ಬೇಯಿಸಲು ಮುಂದಾದರು. ಇದು ಆಂಬೂರು ಬಿರಿಯಾನಿ. ಮದ್ರಾಸ್ ಶೈಲಿಯಲ್ಲಿಯೇ ಮಾಡುವುದು ಇಲ್ಲಿನ ವಿಶೇಷ ಎಂದು ಮಾತು ಮುಂದುವರಿಸಿದರು.

ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿರುವ `ತಿರುಮಲ ದೇಸಿ ಫ್ಯಾಮಿಲಿ ರೆಸ್ಟೋರೆಂಟ್~ನಲ್ಲಿ ಗ್ರಾಹಕರು ಹೆಚ್ಚಾಗಿ ಆಂಬೂರು ಬಿರಿಯಾನಿ ಇಷ್ಟಪಡುತ್ತಾರೆ. ರಸ್ತೆಬದಿಯ ತಳ್ಳುಗಾಡಿಗಳಲ್ಲಿಯೂ ಅಡುಗೆ ಗ್ಯಾಸ್ ಬಳಸಿ ಆಹಾರ ಸಿದ್ಧಪಡಿಸುವ ಕಾಲದಲ್ಲಿ ಪಕ್ಕಾ ಮನೆ ಮಾದರಿಯಲ್ಲಿ ಕಟ್ಟಿಗೆ ಬಳಸಿ ಅಡುಗೆ ಮಾಡಲಾಗುತ್ತದೆ. ಕಳೆದ ಮಾರ್ಚ್ನಲ್ಲಿ ಆರಂಭವಾಗಿರುವ ಈ ದೇಸಿ ರೆಸ್ಟೋರೆಂಟ್ನಲ್ಲಿ ಸಿದ್ಧವಾಗುವ ಆಹಾರವೆಲ್ಲ ಮನೆಯ ಊಟದ ರೀತಿ. ಇಲ್ಲಿಯ ಬೋಟಿ ಹೆಚ್ಚು ಜನಪ್ರಿಯ. ಗೋಧಿ ನುಚ್ಚು, ಬೆಲ್ಲ, ಗಸಗಸೆ, ಏಲಕ್ಕಿ, ಬಾದಾಮಿ ಹಾಗೂ ತೆಂಗಿನ ಕಾಯಿ ತುರಿಯನ್ನು ಮಿಶ್ರಣ ಮಾಡಿ ಮಾಡಿದ ಗೋಧಿ ಪಾಯಸವನ್ನು ಊಟದ ನಂತರ ಕೊಡುತ್ತಾರೆ. ಈ ಪಾಯಸ ಉಚಿತ.

ಅರಿಶಿನ ಕೊನೆ, ಧನಿಯಾ, ಮೆಣಸಿನಕಾಯಿ ಹಾಗೂ ಮೆಣಸನ್ನು ರೆಸ್ಟೋರೆಂಟ್ ಮಾಲೀಕರ ಮನೆಯಲ್ಲಿಯೇ ಅರೆದು ಸಿದ್ಧಪಡಿಸಲಾಗುತ್ತದೆ. ಯಾವುದೇ ಟೇಸ್ಟಿಂಗ್ ಪುಡಿಯನ್ನು ಬಳಸದೇ ಮನೆ ಮಾದರಿಯಲ್ಲಿ ಅಡುಗೆ ಮಾಡುವುದು ಇಲ್ಲಿನ ಮತ್ತೊಂದು ವಿಶೇಷ. ಹಾಗಾಗಿ ನಾಟಿಕೋಳಿ ಸಾರು, ರಸಂ, ಆಂಬೂರು ಬಿರಿಯಾನಿ ಹಾಗೂ ಬೋಟಿ ಸ್ವಾದ ಚೆನ್ನಾಗಿರುತ್ತದೆ ಎನ್ನುತ್ತಾರೆ ತಮಿಳು ನಾಡಿನ ಬಾಣಸಿಗ ಜಯವೀರನ್.

ನಾಟಿ ಕೋಳಿ ಸಾರಿನ ಜೊತೆಗೆ ರಾಗಿ ಮುದ್ದೆ ಕಾಂಬಿನೇಷನ್ ಇದೆ. ಜೊತೆಗೆ ಮೂರು ವಿದಧ ಬೋಟಿ, ಖಿಮಾ ಮಸಾಲಾ ಫ್ರೈ ಬಾಯಲ್ಲಿ ನೀರೂರಿಸುತ್ತವೆ. ಈ ದೇಸಿ ಆಹಾರದ ಜೊತೆಗೆ ಚೈನೀಸ್ ಆಹಾರ ಇಷ್ಟಪಡುವ ಮಂದಿಗೆ ನೂಡಲ್ಸ್, ಏಡಿ, ಮೀನು ಹಾಗೂ ಸಿಗಡಿ ಆಹಾರವೂ ಲಭ್ಯ. ಇವಿಷ್ಟು ಮಾಂಸಾಹಾರಿ ಪ್ರಿಯರಿಗೆ. ಸಸ್ಯಹಾರಿಗಳಿಗೂ ಇಲ್ಲಿ ಅನೇಕ ಖಾದ್ಯಗಳಿವೆ. ಮೊಳಕೆ ಕಾಳುಗಳ ಸಾರು, ರಾಗಿ ಮುದ್ದೆ ಹಾಗೂ ರೋಟಿ ಸಿಗುತ್ತದೆ.

ಬೆಲೆಯೂ ಹೆಚ್ಚಿಲ್ಲದ ಈ ಮನೆ ಮಾದರಿ ಊಟವನ್ನು ಮಧ್ಯಮವರ್ಗದ ಜನರಿಗೆ ಲಭ್ಯವಾಗಬೇಕೆಂಬ ಉದ್ದೇಶದಿಂದ ಈ ರೆಸ್ಟೋರೆಂಟ್ ಆರಂಭಿಸಿರುವುದಾಗಿ ಹೇಳುತ್ತಾರೆ ಮಾಲೀಕರಾದ ಛಾಯಾ ರಮೇಶ್.

ಪದವಿ ಮುಗಿಸಿರುವ ಛಾಯಾ ಅವರಿಗೆ ಹೋಟೆಲ್ ಉದ್ಯಮದಲ್ಲಿ ಯಶಸ್ಸು ಗಳಿಸಬೇಕೆಂಬ ಛಲ. ಹಾಗಾಗಿ ಛಾಯಾ ಅವರೇ ಮನೆಯಲ್ಲಿ ಸಾಂಬಾರು ಪದಾರ್ಥಗಳನ್ನು ಸಿದ್ಧಪಡಿಸಿಕೊಡುತ್ತಾರೆ. ಇವರಿಗೆ ಪತಿಯ ಬೆಂಬಲವಿದೆ. ಅಪ್ಪಟ ಮನೆಯ ಮಸಾಲೆಯನ್ನೇ ಬಳಸಿ ಅಡುಗೆ ಮಾಡುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವುದಿಲ್ಲ. ಹಾಗೂ ರುಚಿಯೂ ಚೆನ್ನಾಗಿರುತ್ತದೆ ಎಂಬುದು ಛಾಯಾ ಅವರ ಅನುಭವದ ಮಾತು.

ಮಧ್ಯಾಹ್ನ 12.30ರಿಂದ 4 ಹಾಗೂ ಸಂಜೆ 7ರಿಂದ 11ರವರೆಗೆ ರೆಸ್ಟೋರೆಂಟ್ ತೆರೆದಿರುತ್ತದೆ. ಸಂಜೆಯ ಡಿನ್ನರ್ಗೆ ಕುಟುಂಬಕ್ಕೆ ಮಾತ್ರ ಪ್ರವೇಶ. ಅವಿವಾಹಿತರಿಗೆ ಅಥವಾ ಒಬ್ಬಂಟಿಗರಿಗೆ ಅವಕಾಶವಿಲ್ಲ. ರಾತ್ರಿ ವೇಳೆ ಕುಡಿದು ಗಲಾಟೆ ಮಾಡುವ ಸಂಭವ ಹೆಚ್ಚಿರುತ್ತದೆ. ಇದರಿಂದ ಇತರೆ ಮಂದಿಗೂ ತೊಂದರೆಯಾಗುತ್ತದೆ. ಆದ್ದರಿಂದ ಕುಟುಂಬ ಸಮೇತ ಬರುವವರಿಗೆ ಮಾತ್ರ ಅವಕಾಶ ನೀಡಲಾಗಿದೆ ಎಂದು ಛಾಯಾ ಸಮಜಾಯಿಷಿ ನೀಡುತ್ತಾರೆ.

ಕೇಟರಿಂಗ್ ವ್ಯವಸ್ಥೆಯೂ ಇಲ್ಲಿದೆ. ಸರ್ವಿಸ್ ವೆಚ್ಚ ಮಾತ್ರ ಸೇರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಸಾವಯವ ಆಹಾರ ಮಾಡುವ ಬಗ್ಗೆ ಯೋಜನೆ ಇದೆ ಎಂದು ಛಾಯಾ ಮಾತು ಮುಗಿಸಿದರು. ಹಿತವೆನಿಸುವಷ್ಟು ಮಸಾಲೆಯುಕ್ತ ಮಾಂಸಾಹಾರಿ ಆಹಾರ ನಿಜಕ್ಕೂ ಆಹಾರಪ್ರಿಯರಿಗೆ ಇಷ್ಟವಾಗಲಿದೆ. ಮಾಹಿತಿಗೆ: 90350 31222

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.