ಸೋಮವಾರ, ಜೂನ್ 14, 2021
26 °C

ಸೌಮಿತ್ರ ಚಟರ್ಜಿಗೆ ಫಾಲ್ಕೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ (ಐಎಎನ್‌ಎಸ್/ಪಿಟಿಐ): ಹಿರಿಯ ಬಂಗಾಳಿ ನಟ ಸೌಮಿತ್ರ ಚಟರ್ಜಿ ಅವರನ್ನು ದೇಶದ ಅತ್ಯುನ್ನತ ಚಲನಚಿತ್ರ ಗೌರವವಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪ್ರಸಕ್ತ ಸಾಲಿಗಾಗಿ ಆಯ್ಕೆ ಮಾಡಲಾಗಿದೆ.ಇದನ್ನು ಖಚಿತಪಡಿಸಿರುವ 77 ವರ್ಷದ ಚಟರ್ಜಿಯವರು ತಮ್ಮ ಆಯ್ಕೆಯಿಂದ ಸಂಪೂರ್ಣ ಸಂತಸವಾಗಿರುವುದಾಗಿ ಪ್ರತಿಕ್ರಿಯಿಸಿದ್ದಾರೆ. `ಭಾರತೀಯ ಸಿನೆಮಾ ರಂಗದಲ್ಲಿ ಜನರ ಪ್ರೀತಿಯೊಂದಿಗೆ ತಾವು ಮಾಡಿದ ಜೀವಮಾನ ಕಾರ್ಯವನ್ನು ಗುರುತಿಸಿ ಈ ಉನ್ನತ ಗೌರವ ನೀಡಲಾಗಿದೆ~ ಎಂದು ಅವರು ಕೃತಜ್ಞತೆ ಸಲ್ಲಿಸಿದ್ದಾರೆ.ಖ್ಯಾತ ನಿರ್ದೇಶಕ ಸತ್ಯಜಿತ್ ರೇ ಅವರ ಹಲವು ಚಿತ್ರಗಳಲ್ಲಿ ಚಟರ್ಜಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡು ಜನಪ್ರಿಯತೆ ಪಡೆದಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.